ಔರಾದ್-ಸೂರಗೊಂಡನಕೊಪ್ಪ ಬಸ್ ಸಂಚಾರ ಶುರು

KannadaprabhaNewsNetwork |  
Published : Nov 30, 2026, 02:30 AM IST
ಚಿತ್ರ 29ಬಿಡಿಆರ್58 | Kannada Prabha

ಸಾರಾಂಶ

ಬಂಜಾರಾ ಸಮಾಜದ ಆರಾಧ್ಯದೈವ, ಧರ್ಮಗುರು ಸಂತ ಸೇವಾಲಾಲ್‌ ಮಹಾರಾಜರ ಪವಿತ್ರ ಜನ್ಮಸ್ಥಾನವಾದ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಬೀದರ್‌ ಜಿಲ್ಲೆಯ ಔರಾದ್‌ನಿಂದ ಪ್ರತಿದಿನ ಸಂಚರಿಸುವ ನೂತನ ಕೆಎಸ್ಆರ್‌ಟಿಸಿ ಬಸ್ ಸೇವೆಗೆ ಸಂತ ಸೇವಾಲಾಲ ಮಹಾರಾಜರ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರು, ಔರಾದ್ ಶಾಸಕರಾದ ಪ್ರಭು ಬಿ.ಚವ್ಹಾಣ ಭಾನುವಾರ ಭಾಯಾಗಡ್ ಮಹಾಮಠದ ಆವರಣದಲ್ಲಿ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಔರಾದ್

ಬಂಜಾರಾ ಸಮಾಜದ ಆರಾಧ್ಯದೈವ, ಧರ್ಮಗುರು ಸಂತ ಸೇವಾಲಾಲ್‌ ಮಹಾರಾಜರ ಪವಿತ್ರ ಜನ್ಮಸ್ಥಾನವಾದ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ (ಭಾಯಾಗಡ್)ಕ್ಕೆ ಬೀದರ್‌ ಜಿಲ್ಲೆಯ ಔರಾದ್‌ನಿಂದ ಪ್ರತಿದಿನ ಸಂಚರಿಸುವ ನೂತನ ಕೆಎಸ್ಆರ್‌ಟಿಸಿ ಬಸ್ ಸೇವೆಗೆ ಸಂತ ಸೇವಾಲಾಲ ಮಹಾರಾಜರ ಜನ್ಮಸ್ಥಾನ ಮಹಾಮಠ ಸಮಿತಿಯ ಅಧ್ಯಕ್ಷರು, ಔರಾದ್‌(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಭಾನುವಾರ ಭಾಯಾಗಡ್ ಮಹಾಮಠದ ಆವರಣದಲ್ಲಿ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.

ಬಸ್ ಪ್ರತಿದಿನ ಔರಾದ್‌ನಿಂದ ಹೊರಟು ಬೀದರ, ಕಲಬುರಗಿ, ಸಿಂಧನೂರು, ಹೊಸಪೇಟೆ, ಹರಿಹರ ಹಾಗೂ ಹೊನ್ನಾಳಿ ಮಾರ್ಗವಾಗಿ ಸೂರಗೊಂಡನಕೊಪ್ಪ (ಭಾಯಾಗಡ್) ತಲುಪಲಿದೆ. ಮರಳಿ ಇದೇ ಮಾರ್ಗವಾಗಿ ಔರಾದಕ್ಕೆ ಸಂಚರಿಸಲಿದೆ. ಇದರಿಂದ ಔರಾದ ಹಾಗೂ ಕಮಲನಗರ ತಾಲ್ಲೂಕುಗಳು ಒಳಗೊಂಡಂತೆ ಬೀದರ, ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳ ಬಂಜಾರಾ ಸಮಾಜದ ಬಾಂಧವರು, ಸಂತ ಸೇವಾಲಾಲ ಮಹಾರಾಜರ ಭಕ್ತಾದಿಗಳು ಮತ್ತು ಭಾಯಾಗಡ್‌ಗೆ ಭೇಟಿ ನೀಡುವ ಭಕ್ತರಿಗೆ ಪ್ರಯಾಣಿಸಲು ಹೆಚ್ಚಿನ ಅನುಕೂಲವಾಗಲಿದೆ.

ಸಂತ ಸೇವಾಲಾಲ್‌ ಮಹಾರಾಜರು ಬಂಜಾರಾ ಸಮಾಜದ ಆರಾಧ್ಯದೈವ ಮಾತ್ರವಲ್ಲದೆ, ನಾಡಿನ ಕೋಟ್ಯಂತರ ಜನರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡಿದ ಮಹಾನ್ ಸಂತರು. ಅವರ ಪವಿತ್ರ ಜನ್ಮಸ್ಥಳವಾದ ಭಾಯಾಗಡ್‌ಗೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಪ್ರತಿವರ್ಷ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ವಿಶೇಷವಾಗಿ ಬೀದರ್‌ ಜಿಲ್ಲೆಯ ಔರಾದ್‌ ಹಾಗೂ ಕಮಲನಗರ ಭಾಗದಲ್ಲಿ ಬಂಜಾರಾ ಸಮಾಜದ ಜನಸಂಖ್ಯೆ ಹೆಚ್ಚಿದ್ದು, ಇಲ್ಲಿಂದ ಭಾಯಾಗಡ್‌ಗೆ ತೆರಳಲು ನೇರ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬುದು ಸಮಾಜದ ಬಹುದಿನಗಳ ಬೇಡಿಕೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪ್ರಭು ಚವ್ಹಾಣ ಅವರು ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಪ್ರತಿದಿನ ಬಸ್ ಸಂಚಾರ ಆರಂಭಿಸಲು ಅಗತ್ಯ ಕ್ರಮ ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಭು ಬಿ. ಚವ್ಹಾಣ ಅವರು, ಸಂತ ಸೇವಾಲಾಲ್ ಮಹಾರಾಜರ ಪವಿತ್ರ ಜನ್ಮಸ್ಥಾನಕ್ಕೆ ಭೇಟಿ ನೀಡುವುದು ಪ್ರತಿಯೊಬ್ಬ ಭಕ್ತ ನಿಗೂ ಪವಿತ್ರ ಅನುಭವ. ಭಕ್ತಾದಿಗಳ ಅನುಕೂಲಕ್ಕಾಗಿ ಔರಾದ್‌ನಿಂದ ಭಾಯಾಗಡ್‌ಗೆ ಪ್ರತಿದಿನ ಕೆಎಸ್ಆರ್‌ಟಿಸಿ ಬಸ್ ಸೇವೆ ಆರಂಭಿಸಿರುವುದು ಸಂತಸದ ಸಂಗತಿಯಾಗಿದ್ದು ಬಂಜಾರಾ ಸಮಾಜದ ಬಾಂಧವರು ಹಾಗೂ ಸೇವಾಲಾಲ್ ಮಹಾರಾಜರ ಭಕ್ತರು ಈ ಬಸ್ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಖಿಲ ಭಾರತ ಫಿಡೆ ರ್‍ಯಾಪಿಡ್ ಚೆಸ್‌, ಚಿರಂತ್‌ ಪ್ರಥಮ
ಸಕ್ಕರೆ ರಿಕವರಿ ವರದಿಯಲ್ಲಿ ರೈತರಿಗೆ ಮೋಸ; ತನಿಖೆಗೆ ಆಗ್ರಹ