ಬಾಬಾ ಸಾಹೇಬ್ ಅಂಬೇಡ್ಕರ್ ಸರ್ವೋದ್ಧಾರಕ

KannadaprabhaNewsNetwork |  
Published : Apr 17, 2025, 12:03 AM IST
ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸತೀಶ ನಾರಾಯಣಕರ ಅವರ ನಿವಾಸದಲ್ಲಿ ಹಮ್ಮಿಕೊಂಡ ಮಾಸದ ಮಾತು ಮಾಲಿಕೆಯ 20ನೇ ಕಾರ್ಯಕ್ರಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ ಅವರ 134ನೇ ಜಯಂತಿ ಆಚರಿಸಲಾಯಿತು. | Kannada Prabha

ಸಾರಾಂಶ

ಬಾಬಾ ಸಾಹೇಬ್ ಅಂಬೇಡ್ಕರ್ ದಲಿತರು ಹಾಗೂ ಹಿಂದುಳಿದ ವರ್ಗಗಳ ಉದ್ಧಾರಕ್ಕೆ ಶ್ರಮಿಸಿದರು

ಲಕ್ಷ್ಮೇಶ್ವರ: ಡಾ.ಬಿ.ಆರ್. ಅಂಬೇಡ್ಕರ್ ಕೇವಲ ದಲಿತೋದ್ಧಾರಕರು ಮಾತ್ರವಲ್ಲ, ಸರ್ವೋದ್ಧಾರಕರು. ಭಾರತದ ಸಮಗ್ರತೆಯ ಸಂಕೇತವಾಗಿ ಸರ್ವಕಾಲಕ್ಕೂ ಸಲ್ಲುವವರು ಎಂದು ವಿಶ್ರಾಂತ ಶಿಕ್ಷಕ, ಸಾಹಿತಿ ಪಿ.ಬಿ. ಕರಾಟೆ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸತೀಶ ನಾರಾಯಣಕರ ನಿವಾಸದಲ್ಲಿ ಹಮ್ಮಿಕೊಂಡ ಮಾಸದ ಮಾತು ಮಾಲಿಕೆಯ 20ನೇ ಕಾರ್ಯಕ್ರಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ ಅವರ 134ನೇ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ದಲಿತರು ಹಾಗೂ ಹಿಂದುಳಿದ ವರ್ಗಗಳ ಉದ್ಧಾರಕ್ಕೆ ಶ್ರಮಿಸಿದರು. ಹಿಂದುಳಿದ ಸಮಾಜದ ಜನರು ಶಿಕ್ಷಣ ಪಡೆದು ಸಮಾಜ ಸುಧಾರಣೆ ಮಾಡುವಲ್ಲಿ ಅಂಬೇಡ್ಕರ್ ಕೊಡುಗೆ ಅಪಾರ ಎಂದರು.

ಡಾ.ಬಿ.ಆರ್. ಅಂಬೇಡ್ಕರ ಕುರಿತು ಶಿಕ್ಷಕ ಎಸ್.ಬಿ. ಮಳಲಿ ಉಪನ್ಯಾಸ ನೀಡಿ, ಮುಂದುವರಿದ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಪಡೆಯಲು ಸಾಕಷ್ಟು ಹೋರಾಟ ಮಾಡಬೇಕಾಯ್ತು. ಆದರೆ ಭಾರತದ ಮಹಿಳೆಯರಿಗೆ ಅಂಬೇಡ್ಕರ್ ಯಾವುದೇ ಹೋರಾಟಕ್ಕೆ ಅವಕಾಶ ನೀಡದೆ ಮತದಾನದ ಹಕ್ಕು ಕೊಟ್ಟು ಸಮಾನತೆ ಸಾಧಿಸಿದರು ಎಂದರು.

ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಾಗರಾಜ ಹಣಗಿ ಮಾತನಾಡಿ, ನಮ್ಮ ರಾಷ್ಟ್ರಧ್ವಜದ ಮಧ್ಯದಲ್ಲಿರುವ ಅಶೋಕ ಚಕ್ರ ಇದು ಅಂಬೇಡ್ಕರ ಕೊಡುಗೆ ಎಂದು ಸ್ಮರಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಈಶ್ವರ ಮೆಡ್ಲೇರಿ ಹಾಗೂ ಸತೀಶ ನಾರಾಯಣಕರ ಮಾತನಾಡಿದರು.

ಹಿರಿಯ ಚಿಂತಕ ಬರಮಗೌಡ್ರು ನಡುವಿನಮನಿ, ಪಿ.ಬಿ. ಕರಾಟೆ, ಎಫ್.ಎಸ್. ತಳವಾರ, ಹಿರಿಯ ಚಿಂತಕ ಓಂಕಾರಪ್ಪ ಗಜಾಕೋಶ, ನಾಗೇಂದ್ರಪ್ಪ ಕರಾಟೆ, ಶಿಕ್ಷಕ ಸಾಹಿತಿ ಫಕ್ಕಿರೇಶ ಮಕರಬ್ಬಿ, ಎಸ್.ಬಿ. ಮಳಲಿ, ಸತೀಶ ನಾರಾಯಣಕರ, ಶ್ರೀನಿಧಿ ಶಿಳ್ಳಿನ, ದಕ್ಷತ್, ಈರಣ್ಣ ಗಾಣಿಗೇರ, ಶಂಕರ ಶಿಳ್ಳಿನ, ವಕೀಲ ಪ್ರಕಾಶ ವಾಲಿ,ಗೀರೀಶ ಕುಬಸದ, ಮಲ್ಲಯ್ಯ ಹಿರೇಮಠ, ವಿಜಯ ಗಜಾಕೋಶ, ರೂಪಾ ಪೋರೆ, ಅಶೋಕ ಛತ್ರದ, ಆನಂದ ಓದುನವರ, ಗಂಟೆಪ್ಪ ಗಜಾಕೋಶ, ಶಶಿಕಾಂತ ಗಜಾಕೋಶ, ಮಂಜು ಗಜಾಕೋಶ, ಪ್ರವೀಣ ಗಜಾಕೋಶ, ರಾಜು ಖರಾಟೆ, ಸಂತೋಷ ಖರಾಟೆ, ಅಕ್ಷಯ ಗಜಾಕೋಶ, ಚೇತನ ಘೋಢಕೆ, ರವಿ ಸಾಥಪುತೆ, ಪ್ರಶಾಂತ ಹಂಜಗಿ ಹಾಗೂ ಇತರರು ಉಪಸ್ಥಿತರಿದ್ದರು.

ಶಿಲ್ಪ ಸತೀಶ ನಾರಾಯಣಕರ ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ಎಂ.ಎಸ್. ಚಾಕಲಬ್ಬಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ವಂದಿಸಿದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...