ಕನ್ನಡಪ್ರಭ ವಾರ್ತೆ ತಿಪಟೂರು
೨೩ನೇ ಗುರುವಾರ ಬೆಳಿಗ್ಗೆ ಧ್ವಜಾರೋಹಣದೊಂದಿಗೆ ಪ್ರಾರಂಭವಾಗಿ ಪ್ರತಿದಿನ ಬೆಳಿಗ್ಗೆ ಮತ್ತು ರಾತ್ರಿ ಸಾಂಸ್ಕೃತಿಗೆ ಕಾರ್ಯಕ್ರಮಗಳು ನಡೆಯಲಿದ್ದು, ೨೪ನೇ ಶುಕ್ರವಾರ ಧಾರ್ಮಿಕ ಸಮಾರಂಭ ನಡೆಯಲಿದ್ದು ಸಾನ್ನಿಧ್ಯವನ್ನು ಕೆರೆಗೋಡಿ-ರಂಗಾಪುರ ಶ್ರೀ ಗುರು ಪರದೇಶಿಕೇಂದ್ರ ಸ್ವಾಮೀಜಿ ಹಾಗೂ ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಮತ್ತು ದೇವಾಂಗ ಗುರುಗಳಾದ ರುದ್ರಂ ಭಾವ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಉದ್ಘಾಟನೆಯನ್ನು ತುರುವೇಕೆರೆ ಮಾಜಿ ಶಾಸಕ ಎಂ.ಡಿ. ಲಕ್ಷ್ಮಿ ನಾರಾಯಣ್ ನೆರವೇರಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್. ಪ್ರಶಾಂತ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೇಂದ್ರ ಜಲ ಶಕ್ತಿ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ, ಶಾಸಕ ಕೆ. ಷಡಕ್ಷರಿ, ಮಾಜಿ ಸಚಿವ ಬಿ.ಸಿ. ನಾಗೇಶ್, ಮಾಜಿ ಶಾಸಕ ಬಿ. ನಂಜಾಮರಿ, ಬಿಜೆಪಿ ಮುಖಂಡ ಲೋಕೇಶ್ವರ್, ಕೆಪಿಸಿಸಿ ಸದಸ್ಯ ಯೋಗೇಶ್, ಜೆಡಿಎಸ್ ಮುಖಂಡ ಕೆ,ಟಿ, ಶಾಂತಕುಮಾರ್, ತುಮುಲ್ ನಿರ್ದೇಶಕ ಎಂ. ಕೆ. ಪ್ರಕಾಶ್, ವೈದ್ಯರಾದ ನಾಗರಾಜು, ಶ್ರೀಧರ್, ಸೋಮಶೇಖರ್, ಮಧುಸೂದನ್ ಆಗಮಿಸಲಿದ್ದಾರೆ.
೨೫ ನೇ ಶನಿವಾರ ಮಧ್ಯಾಹ್ನ ೧೨ ಗಂಟೆಗೆ ಧಾರ್ಮಿಕ ಸಮಾರಂಭ ಪ್ರಾರಂಭವಾಗಲಿದ್ದು ದಿವ್ಯ ಸಾನ್ನಿಧ್ಯವನ್ನು ಹಂಪೆ ಹೇಮಕೂಟ, ಶ್ರೀ ಗಾಯಿತ್ರಿ ಪೀಠಾಧ್ಯಕ್ಷರಾದ ಶ್ರೀ ದಯಾನಂದಪುರಿ ಸ್ವಾಮೀಜಿ ಹಾಗೂ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ, ಮುದನೂರು ಮಠದ ಈಶ್ವರಾನಂದ ಸ್ವಾಮೀಜಿ ವಹಿಸಲಿದ್ದು ಉದ್ಘಾಟನೆಯನ್ನು ದೇವಾಂಗ ಸಂಘದ ಅಧ್ಯಕ್ಷ ಜಿ. ರಮೇಶ್ ನೆರವೇರಿಸುವರು. ಅಧ್ಯಕ್ಷತೆಯನ್ನು ಬನಶಂಕರಿ ಸೇವಾ ಸಂಘದ ಶಿವಾನಂದ್ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ನಾರಾಯಣ್, ಚಲನಚಿತ್ರ ನಟಿ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ದೇವಾಂಗ ಸಂಘದ ಉಪಾಧ್ಯಕ್ಷ ವಿಜಯ್ ಕುಮಾರ್, ಜಿಲ್ಲಾ ದೇವಾಂಗ ಸಂಘದ ಅಧ್ಯಕ್ಷ ರಾಮಕೃಷ್ಣಯ್ಯ, ಕೋಶಾಧಿಕಾರಿ ಲಕ್ಷ್ಮಿ ನಾರಾಯಣ್, ಸಮಾಜದ ಮುಖಂಡ ಎಂ.ಪಿ. ಉಮಾಶಂಕರ್ ಧನಂಜಯ, ರೇವಣ್ಣ ಕುಮಾರ್, ರವಿ, ಗಿರೀಶ್, ಶಿವ ಶಂಕರ್ ಭಾಗವಹಿಸಲಿದ್ದಾರೆ.೨೬ನೇ ಭಾನುವಾರ ಮಧ್ಯಾನ ೧೨ ಗಂಟೆಗೆ ಬ್ರಹ್ಮ ರಥೋತ್ಸವ ನಡೆಯಲಿದೆ. ೨೭ನೇ ಸೋಮವಾರ ಬನಶಂಕರಿ ದೇವಿಗೆ ವಿವಿಧ ಅಲಂಕಾರ ಮತ್ತು ಓಕಳಿ ಉತ್ಸವ ನಡೆಯಲಿದ್ದು ೨೮ನೇ ಮಂಗಳವಾರ ರಾತ್ರಿ ೧೦ ಗಂಟೆಗೆ ಉತ್ಸವ ಹಾಗೂ ಬಲಿಶಾಂತಿ ನಡೆಯಲಿದೆ. ಬೆಂಗಳೂರಿನಲ್ಲಿ ಅಪಾರ ಭಕ್ತ ಸಮೂಹವಿದ್ದು ಅವರ ಅನುಕೂಲಕ್ಕಾಗಿ ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಓಡಾಡುವ ಎಲ್ಲಾ ಬಸ್ ಗಳಿಗೂ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.