ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಬಸವಲಿಂಗ ಶ್ರೀ ಮೆರವಣಿಗೆ

KannadaprabhaNewsNetwork |  
Published : Feb 20, 2024, 01:46 AM IST
೧೯ವೈಎಲ್‌ಬಿ೨:ಯಲಬುರ್ಗಾದ ಬಸವಲಿಂಗೇಶ್ವರ ಸ್ವಾಮೀಜಿಯ ೨೨ನೇ ವರ್ಷದ ಪೀಠಾರೋಹಣ ನಿಮಿತ್ತ ಸೋಮವಾರ ನವಲಗುಂದದ ಮ.ನಿ.ಷ.ಬಸವಲಿಂಗ ಸ್ವಾಮೀಜಿಯವರ ಅಡ್ಡಪಲ್ಲಕ್ಕಿ ಮಹೋತ್ಸವ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ಬಸವಲಿಂಗೇಶ್ವರ ಸ್ವಾಮೀಜಿಯ ಪೀಠಾರೋಹಣ ಅಂಗವಾಗಿ ಗವಿಮಠದ ನವಲಗುಂದ ಪೂಜ್ಯ ಮ.ನಿ.ಷ.ಬಸವಲಿಂಗ ಸ್ವಾಮೀಜಿಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಸೋಮವಾರ ಪಟ್ಟಣದ ವಿವಿಧ ವೃತ್ತಗಳ ಮೂಲಕ ಮೆರವಣಿಗೆ ಜರುಗಿತು

ಯಲಬುರ್ಗಾ: ಬಸವಲಿಂಗೇಶ್ವರ ಸ್ವಾಮೀಜಿಯ ಪೀಠಾರೋಹಣ ಅಂಗವಾಗಿ ಗವಿಮಠದ ನವಲಗುಂದ ಪೂಜ್ಯ ಮ.ನಿ.ಷ.ಬಸವಲಿಂಗ ಸ್ವಾಮೀಜಿಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಕೂರಿಸಿ ಸೋಮವಾರ ಪಟ್ಟಣದ ವಿವಿಧ ವೃತ್ತಗಳ ಮೂಲಕ ಮೆರವಣಿಗೆ ಜರುಗಿತು.

ಪಟ್ಟಣದ ಶ್ರೀಮಠದಲ್ಲಿ ಬೆಳಿಗ್ಗೆ ಲಿಂ.ಶ್ರೀಬಸವಲಿಂಗೇಶ್ವರ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಧಾರ್ಮಿಕ ರುದ್ರಾಭೀಷೇಕ ಪೂಜೆ ಹಾಗೂ ಶಿವ ದೀಕ್ಷಾ ಕಾರ್ಯಕ್ರಮ ಜರುಗಿತು. ಕುಂಭ ಕಳಸ ವಿವಿಧ ವಾದ್ಯ ವೈಭವದೊಂದಿಗೆ ಅದ್ಧೂರಿ ಮಹೋತ್ಸವ ನಡೆಯಿತು.ಶ್ರೀಧರ ಮುರಡಿ ಹಿರೇಮಠದ ಪೀಠಾಧಿಪತಿ ಬಸವಲಿಂಗೇಶ್ವರ ಸ್ವಾಮೀಜಿ, ಆಡ್ನೂರ-ರಾಜೂರ ಅಭಿನವ ಪಂಚಾಕ್ಷರ ಸ್ವಾಮೀಜಿ, ಜಿಗೇರಿಯ ಗುರುಸಿದ್ಧೇಶ್ವರ ಸ್ವಾಮೀಜಿ, ಕುಕನೂರಿನ ಅನ್ನದಾನೇಶ್ವರ ಮಠದ ಡಾ.ಮಹಾದೇವ ದೇವರು, ಚಿಕ್ಕಮ್ಯಾಗೇರಿ-ಇಟಗಿಯ ಡಾ.ಗುರುಶಾಂತವೀರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಬಸವಲಿಂಗಪ್ಪ ಕೊತ್ತಲ, ಬಸವರಾಜ ಸಾದರ, ಅಡಿವೆಯ್ಯ ಪ್ರಜಾರ, ಮಹೇಶ ಹುಬ್ಬಳ್ಳಿ, ಶಿವಕುಮಾರ ಭೂತೆ, ಈಶಪ್ಪ ಬನ್ನಿಕೊಪ್ಪ, ಮಲ್ಲಪ್ಪ ಬನ್ನಿಕೊಪ್ಪ, ದೊಡ್ಡಬಸವ ಹಕಾರಿ, ಶರಣಪ್ಪ ಬನ್ನಿಕೊಪ್ಪ, ವೀರಭದ್ರಯ್ಯ ಗಂಧದ, ಶಂಕರ ಉಳ್ಳಾಗಡ್ಡಿ, ಶಂಕರ್ ಕಲಬುರ್ಗಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಗ್ರ ಅಭಿವೃದ್ಧಿಗೆ ₹೧೪.೮೨ ಕೋಟಿ ಬಜೆಟ್ ಮಂಡನೆ
ಸ್ಮಶಾನಕ್ಕೆ ಭೂಮಿ, ದಾರಿ ಸಮಸ್ಯೆ ಶೀಘ್ರ ಇತ್ಯರ್ಥಕ್ಕೆ ಸೂಚನೆ