ಬಸವಣ್ಣರ ಸಂದೇಶಗಳು ಸದಾ ಬೆಳಕು: ಗುರುಮಲ್ಲೇಶ್

KannadaprabhaNewsNetwork |  
Published : May 01, 2025, 12:48 AM IST
30ಕೆಎಂಎನ್ ಡಿ28 | Kannada Prabha

ಸಾರಾಂಶ

ವಿಶ್ವಗುರು ಬಸವಣ್ಣರ ಸಂದೇಶಗಳು ಮನುಕುಲಕ್ಕೆ ಸದಾ ಬೆಳಕಾಗಿದೆ. ಸಮಾಜದಲ್ಲಿ ಸಾಮಾಜಿಕ ಸುಧಾರಣೆ ಸಾಕಾರಗೊಳಿಸಿದ ಕ್ರಾಂತಿಪುರಷ ಬಸವಣ್ಣರನ್ನು ಕೇವಲ ಜಯಂತಿಯಂದು ಮಾತ್ರ ನೆನೆಯದೆ ಪ್ರತಿನಿತ್ಯ ಅವರ ವಿಚಾರಧಾರೆಗಳನ್ನು ಸ್ಮರಿಸುವ ಕೆಲಸವಾಗಬೇಕಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ವಿಶ್ವಗುರು ಬಸವಣ್ಣರ ಸಂದೇಶಗಳು ಮನುಕುಲಕ್ಕೆ ಸದಾ ಬೆಳಕಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ನಿರ್ದೇಶಕ ಕೆ.ಜಿ.ಗುರುಮಲ್ಲೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ಶಿವಪುರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಸಮಾಜದಲ್ಲಿ ಸಾಮಾಜಿಕ ಸುಧಾರಣೆ ಸಾಕಾರಗೊಳಿಸಿದ ಕ್ರಾಂತಿಪುರಷ ಬಸವಣ್ಣರನ್ನು ಕೇವಲ ಜಯಂತಿಯಂದು ಮಾತ್ರ ನೆನೆಯದೆ ಪ್ರತಿನಿತ್ಯ ಅವರ ವಿಚಾರಧಾರೆಗಳನ್ನು ಸ್ಮರಿಸುವ ಕೆಲಸವಾಗಬೇಕಾಗಿದೆ ಎಂದರು.

ಇದೇ ವೇಳೆ ನೂರಾರು ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಮುಖಂಡರಾದ ಎಸ್.ಎನ್.ಚಂದ್ರಶೇಖರ್, ರವಿ, ರಾಮಲಿಂಗ, ಚಲುವರಾಜ, ಅಪ್ಪಾಜಿ, ಧನಂಜಯ ಸೇರಿದಂತೆ ಇತರರು ಇದ್ದರು.ದೇಶದಲ್ಲೇ ಕ್ರಾಂತಿ ಮಾಡಿ ಮಹಾನ್ ಪುರುಷ ಬಸವಣ್ಣ: ಸುರೇಶ್ ಕಂಠಿ

ಮದ್ದೂರು: ಬಸವಣ್ಣನವರು 8ನೇ ಶತಮಾನದಲ್ಲಿ ಸಮ ಸಮಾಜ ನಿರ್ಮಾಣಕ್ಕಾಗಿ ವಚನಗಳ ಮೂಲಕ ಇಡೀ ದೇಶದಲ್ಲೇ ಕ್ರಾಂತಿ ಮಾಡಿ ಮಹಾನ್ ಪುರುಷ ಎಂದು ವಿವಿಧೋದ್ದೇಶ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಂಠಿ ಬಣ್ಣಿಸಿದರು.

ತಾಲೂಕಿನ ಮಾಲಗಾರನಹಳ್ಳಿಯ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ವಿಶ್ವಗುರು ಬಸವಣ್ಣರ ಜಯಂತಿಯಲ್ಲಿ ಮಾತನಾಡಿ, ಬಸವಣ್ಣ ಅವರು ಧಾರ್ಮಿಕ, ಆರ್ಥಿಕ, ಸಾಹಿತ್ಯ, ಸಾಮಾಜಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ತಮ್ಮದೆಯಾದ ಅನನ್ಯ ಕೊಡುಗೆ ನೀಡಿದ್ದಾರೆ ಹಾಗೂ ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ಉಣಬಡಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಸಂಘದ ಉಪಾಧ್ಯಕ್ಷೆ ಪಲ್ಲವಿ, ನಿರ್ದೇಶಕರಾದ ರವೀಶ, ರಮೇಶ್, ರಾಮಚಂದ್ರ, ಮರಿಸ್ವಾಮಿ, ಸುಜಯ, ಜಗದೀಶ್, ಮಲ್ಲಣ್ಣ, ಕುಮಾರ್, ಕಾರ್ಯನಿರ್ವಾಹಕ ಅಧಿಕಾರಿ ನಂಜುಂಡಸ್ವಾಮಿ ಹಾಗೂ ನಾಗೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲೇ ಜಿಲ್ಲಾ ಕಸಾಪ ಸಾಕಷ್ಟು ಹೆಸರು ಮಾಡಿದೆ: ವಿ.ಹರ್ಷ ಪಟ್ಟೇದೊಡ್ಡಿ
ಶಾಲಾ ಶೈಕ್ಷಣಿಕ ಪ್ರವಾಸ ವಿದ್ಯಾರ್ಥಿಗಳ ಪಠ್ಯೇತರ ಚಟುವಟಿಕೆಯ ಭಾಗ: ಕೆ.ಎಂ.ಉದಯ್