ಹೊನ್ನಾಳಿಯಲ್ಲಿ ಬಸವೇಶ್ವರ ಜೋಡಿ ರಥೋತ್ಸವ ಸಂಪನ್ನ

KannadaprabhaNewsNetwork |  
Published : Apr 23, 2026, 01:30 AM IST
22ಎಚ್.ಎಲ್.ಐ1 ತಾಲೂಕಿನ ಅರಬಗಟ್ಟೆ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿಯ ಜೋಡಿ ರಥೋತ್ಸವ   ಸಾವಿರಾರು ಭಕ್ತರ  ಸಮ್ಮುಖದಲ್ಲಿ ಬಹಳ ವಿಜೃಂಭ್ರಣೆಯಿಂದ ನಡೆಯಿತು | Kannada Prabha

ಸಾರಾಂಶ

ತಾಲೂಕಿನ ಅರಬಗಟ್ಟೆ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿಯ ಜೋಡಿ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಅರಬಗಟ್ಟೆ ಗ್ರಾಮದ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಆಂಜನೇಯ ಸ್ವಾಮಿಯ ಜೋಡಿ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಮಂಗಳವಾರ ಬೆಳಗ್ಗೆ ಗ್ರಾಮದ ಶ್ರೀ ಜೋಡಿ ಬಸವಣ್ಣನಿಗೆ ವಿಶೇಷ ಪೂಜಾ ಕೈಂಕಾರ್ಯಗಳು ನೆರವೇರಿಸಿದ ನಂತರ ಜೋಡಿ ಬಸವೇಶ್ವರ ದೇವರು,ಬೀರಲಿಂಗೇಶ್ವರ ದೇವರು,ಆಂಜನೇಯಸ್ವಾಮಿ,ಮಾದನಭಾವಿ ಗ್ರಾಮದ ಬೀರಲಿಂಗೇಶ್ವರ ದೇವರ ಉತ್ಸವ ಮೂರ್ತಿಗಳನ್ನು ಗ್ರಾಮದ ಬೂದಿಗೌಡ್ರು ಮತ್ತು ಪಲ್ದಾರ್ ಗೌಡ್ರು ಮನೆಯಿಂದ ಬಲಿ ಅನ್ನದ ಹೆಡಿಗೆಯನ್ನು ಮೇರವಣಿಗೆ ಮೂಲಕ ತಂದು ಜೋಡಿ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ರಥಕ್ಕೆ ಬಲಿ ಅನ್ನ ನೈವೇದ್ಯ ಮಾಡಿದರು.

ಗ್ರಾಮದ ಗುರುಗಳ ಮಂತ್ರಘೋಷದೊಂದಿಗೆ ರಥೋತ್ಸವಕ್ಕೆ ಪೂಜೆ ಮಂತ್ರಾಕ್ಷತೆ ನಂತರ ಒಂದು ರಥೋತ್ಸವದಲ್ಲಿ ಜೋಡಿ ಶ್ರೀ ಬಸವೇಶ್ವರ ಮೂರ್ತಿ.ಇನ್ನೂಂದರಲ್ಲಿ ಶ್ರೀ ಆಂಜನೇಯಸ್ವಾಮಿಯನ್ನು ಪ್ರತಿಷ್ಠಾಪಿಸಿ ತರುವಾಯ ಭಕ್ತರು ಶ್ರೀಬಸವೇಶ್ವರ ಸ್ವಾಮಿಗೆ ಜೈಕಾರದೊಂದಿಗೆ ರಥವನ್ನು ಗ್ರಾಮದ ಅಗಸೆ ಬಾಗಿಲಿನವರಗೆ ಎಳೆದರು ರಥೋತ್ಸವ ಮುಂದೆ ಹೊಗುತ್ತಿದ್ದಂತೆ ಭಕ್ತರು ಮಂಡಕ್ಕಿ ಮೆಣಸಿನ ಕಾಳು ಜೋತೆಗೆ ಬಾಳೆಹಣ್ಣು ಎಸೆದು ತೆಂಗಿನಕಾಯಿ ಹೊಡೆದು ಭಕ್ತಿ ಸಮರ್ಪಿಸಿದರು.

ರಥೋತ್ಸವದ ಅಂಗವಾಗಿ ಗ್ರಾಮದಲ್ಲಿರುವ ವಿವಿಧ ದೇವಸ್ಥಾನಗಳಿಗೆ ತಳಿರು ತೋರಣಗಳು ಹಾಗೂ ವಿವಿಧ ಹಬೂವುಗಳಿಂದ ಸಿಂಗರಿಸಲಾಗಿತ್ತು. ಒಳ-ಹೊರಾಂಗಣದಲ್ಲಿ ವಿಶೇಷ ಹೂವಿನ ಹಾಗೂ ವಿದ್ಯುತ್ ದೀಪಾಲಂಕಾರ ಹಾಗೂ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು.

ರಾಜ ಬೀದಿಗಳಲ್ಲಿ ಕೊಂಬು, ಕಹಳೆ, ತಮಟೆ, ವೀರಗಾಸೆ ಹಾಗೂ ಮಂಗಳ ವಾದ್ಯದೊಂದಿಗೆ ದೇವರ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಸಲಾಯಿತು,

ರಥೋತ್ಸದಲ್ಲಿ ದೇವಸ್ಥಾನ ಕಮಿಟಿಯ ಮುಖಂಡರು, ಗ್ರಾಮಸ್ಥುರು, ಸಹಸ್ರಾರು ಭಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಆಟೋಟದ ಜೊತೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಕೆ.ಎಸ್.ಆನಂದ್‌
ಹಳೆಯ ನೆನಪು ಮರು ಕಳಿಸಿದ ಸ್ನೇಹ ಸಮ್ಮಿಲನ: ಕೆ.ಎಸ್.ಮನೋಹರ್