- ಇಂದು ದೊಡ್ಡಪೇಟೆ, ಕಾಯಿಪೇಟೆ ಬಸವೇಶ್ವರ ದೇವಸ್ಥಾನಗಳಲ್ಲಿ ದಾಸೋಹ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದೊಡ್ಡಪೇಟೆಯ ಶ್ರೀ ಬಸವೇಶ್ವರ ಸೇವಾ ಸಂಘದಿಂದ ಶ್ರೀ ಬಸವೇಶ್ವರ, ದಾನಮ್ಮ ದೇವಿ ದೇವಸ್ಥಾನದಲ್ಲಿ 113ನೇ ವರ್ಷದ ಬಸವೇಶ್ವರರ ಜಯಂತ್ಯುತ್ಸವ ಅಂಗವಾಗಿ ಗುರುವಾರ ಪ್ರಾತಃಕಾಲ ವಚನಾಭಿಷೇಕ, ಗಣಾರಾಧನೆ ನಡೆಯಿತು. ಶುಕ್ರವಾರ ಮುಂಜಾನೆ ವಿವಿಧ ಪೂಜೆಗಳು, ನಂತರ ಮಹಿಳೆಯರಿಂದ ತೊಟ್ಟಿಲು ಪೂಜೆ ಕಾರ್ಯಕ್ರಮ ನಡೆಯಿತು. ಸಂಜೆ ಬಸವಣ್ಣನವರ ಬೆಳ್ಳಿ ಮೂರ್ತಿಯ ಅಡ್ಡ ಪಲ್ಲಕ್ಕಿ ಉತ್ಸವವು ಕೀಲು ಕುದುರೆ, ವಾದ್ಯ ಮೇಳಗಳು ಸೇರಿದಂತೆ ಜಾನಪದ ಕಲಾ ತಂಡಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಿತು.
ಮೇ 11ರ ಶನಿವಾರ ಮಧ್ಯಾಹ್ನ 12.30 ರಿಂದ ಹಿರಿಯ ಲೆಕ್ಕ ಪರಿಶೋಧಕರು, ಸಂಘದ ಅಧ್ಯಕ್ಷರಾದ ಡಾ.ಅಥಣಿ ಎಸ್.ವೀರಣ್ಣ ಮತ್ತು ಸಹೋದರರಿಂದ ಮಹಾದಾಸೋಹ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ರಾಜೇಶ ಬೇತೂರು ತಿಳಿಸಿದರು.ಕಾಯಿಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಂಘದಿಂದ ಬಸವೇಶ್ವರ ಜಯಂತಿ ಅಂಗವಾಗಿ ಮುಂಜಾನೆ ತೊಟ್ಟಿಲು ಪೂಜೆ ನಡೆಯಿತು. ಸಂಜೆ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ಹೂವಿನ ಮಂಟಪದಲ್ಲಿ ಶ್ರೀ ಬಸವೇಶ್ವರ ಮೂರ್ತಿ ಮೆರವಣಿಗೆ ನಡೆಯಿತು. ಸಂಘದಿಂದ ಮೇ 11ರಂದು ಅನ್ನ ಸಂತರ್ಪಣೆ ನಡೆಯಲಿದೆ ಎಂದು ಸಂಘದ ಮುಖಂಡರು ತಿಳಿಸಿದರು.
ಬಸವರಾಜ ಪೇಟೆಯ ಶ್ರೀ ಬಸವೇಶ್ವರ, ಶ್ರೀ ವೀರೇಶ್ವರ ದೇವಸ್ಥಾನ ಸಮಿತಿಯಿಂದ ಬಸವ ಜಯಂತಿ ಅಂಗವಾಗಿ ಶುಕ್ರವಾರ ನಡೆದ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಮಾಲೀಕರಾದ ಬಿ.ಸಿ.ಉಮಾಪತಿ ಚಾಲನೆ ನೀಡಿದರು. ಸಂಜೆ ಶ್ರೀ ಬಸವೇಶ್ವರ ಮೆರವಣಿಗೆ ನಡೆಯಿತು ಎಂದು ಸಮಿತಿ ಅಧ್ಯಕ್ಷ ಮಲ್ಲಪ್ಪ ಬಿರಾದಾರ, ಪ್ರಧಾನ ಕಾರ್ಯದರ್ಶಿ ಎಂ.ದೊಡ್ಡಪ್ಪ, ಕುಂಟೋಜಿ ಚನ್ನಪ್ಪ, ಅಕ್ಕಿ ಪ್ರಭು, ಸಿದ್ದೇಶ್ ಅಪ್ಪಾಜಿ, ವೀರೇಶ್ ಇದ್ದರು.ವಕ್ಕಲಿಗರ ಪೇಟೆಯ ಭಜನೆ ಮಂದಿರ ಸೇರಿದಂತೆ ವಿವಿಧೆಡೆ ದೇವಸ್ಥಾನಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿದರು. ವಿನೋಬನಗರ ಸೇರಿದಂತೆ ವಿವಿಧೆಡೆ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
- - - -10ಕೆಡಿವಿಜಿ61ಃ: ದಾವಣಗೆರೆಯ ದೊಡ್ಡಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅಲಂಕಾರ.- - -
-10ಕೆಡಿವಿಜಿ62ಃ: ದಾವಣಗೆರೆ ಕಾಯಿಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅಲಂಕಾರ.- - -
-10ಕೆಡಿವಿಜಿ63ಃ: ದಾವಣಗೆರೆ ಬಸವರಾಜ ಪೇಟೆಯಲ್ಲಿರುವ ಶ್ರೀ ಬಸವೇಶ್ವರ ಸ್ವಾಮಿಗೆ ಅಲಂಕಾರ.- - -
-10ಕೆಡಿವಿಜಿ64ಃ: ದಾವಣಗೆರೆ ದೊಡ್ಡಪೇಟೆಯ ಶ್ರೀ ಬಸವೇಶ್ವರ ಸ್ವಾಮಿಯ ಅಡ್ಡ ಪಲ್ಲಕ್ಕಿ ಮೆರವಣಿಗೆ ನಡೆಯಿತು.- - -
-10ಕೆಡಿವಿಜಿ65ಃ: ದಾವಣಗೆರೆಯ ಬಸವರಾಜ ಪೇಟೆಯಲ್ಲಿ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಬಿ.ಎಸ್.ಚನ್ನಬಸಪ್ಪ ಅಂಡ್ ಸನ್ಸ್ ಮಾಲೀಕರಾದ ಬಿ.ಸಿ.ಉಮಾಪತಿ ಚಾಲನೆ ನೀಡಿದರು.- - -