ಕಾಡಿನಿಂದ ನಾಡಿಗೆ ಬಂದ ಕರಡಿಗಳು

KannadaprabhaNewsNetwork |  
Published : Apr 28, 2025, 11:48 PM IST
ಕಾಡಿನಿಂದ ನಾಡಿಗೆ ಬಂದ ಎರಡು ಕರಡಿಗಳು | Kannada Prabha

ಸಾರಾಂಶ

ಕೊರಟಗೆರೆ: ಕಾಡಿನಿಂದ ನಾಡಿಗೆ ಬಂದ ಎರಡು ಕರಡಿಗಳನ್ನು ಕಂಡು ವಾಲ್ಮೀಕಿ ನಗರದ ಜನರು ಭೀತಿಯಿಂದ ಮನೆಯೊಳಗೆ ಅಡಗಿರುವ ಘಟನೆ ಕೊರಟಗೆರೆ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಕೊರಟಗೆರೆ: ಕಾಡಿನಿಂದ ನಾಡಿಗೆ ಬಂದ ಎರಡು ಕರಡಿಗಳನ್ನು ಕಂಡು ವಾಲ್ಮೀಕಿ ನಗರದ ಜನರು ಭೀತಿಯಿಂದ ಮನೆಯೊಳಗೆ ಅಡಗಿರುವ ಘಟನೆ ಕೊರಟಗೆರೆ ಪಟ್ಟಣದಲ್ಲಿ ಭಾನುವಾರ ರಾತ್ರಿ ನಡೆದಿದೆ. ಕೊರಟಗೆರೆ ಪಟ್ಟಣದ ೧೫ನೇ ವಾರ್ಡಿನ ವಾಲ್ಮೀಕಿ ನಗರಕ್ಕೆ ಎರಡು ಕರಡಿಗಳು ಬಂದಿದ್ದು, ಸಾರ್ವಜನಿಕರು ಮನೆಯೊಳಗೆ ಹೋಗಿದ್ದಾರೆ, ಸುಮಾರು ೧೦ ಗಂಟೆಯವರೆಗೂ ಕರಡಿಗಳು ಅಲ್ಲಿಯೇ ಓಡಾಡುತ್ತಿದ್ದವು, ಪಟ್ಟಣದ ಹೊರವಲಯದ ಬೈಲಾಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಸಂಜೆಯಾದರೆ ಸಾಕು ಕರಡಿ, ಚಿರತೆಗಳು ಪ್ರತ್ಯಕ್ಷವಾಗುತ್ತಿದ್ದು ಸಾರ್ವಜನಿಕರು ಮನೆಯಿಂದ ಹೊರಬರಲು ಹೆದರುವಂತೆ ಮಾಡಿವೆ. ಕರಡಿ ಬಂದಿರುವ ಮಾಹಿತಿಯನ್ನು ಅರಣ್ಯ ಇಲಾಖೆಯ ಆರ್‌ಎಫ್‌ಒ ಸುರೇಶ್ ಅವರಿಗೆ ತಿಳಿಸಿದ ತಕ್ಷಣ ಸಿಬ್ಬಂದಿ ಆಗಮಿಸಿ ಪಟಾಕಿ ಸಿಡಿಸಿ ಕರಡಿಗಳು ಅಲ್ಲಿಂದ ಹೋಗುವಂತೆ ಮಾಡಿದ್ದಾರೆ. ಈ ಭಾಗದಲ್ಲಿ ಪದೇಪದೇ ಕರಡಿ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು ಅರಣ್ಯ ಅಧಿಕಾರಿಗಳು ಬೋನುಗಳನ್ನ ಇಟ್ಟು ಕರಡಿಗಳನ್ನು ಸೆರೆಹಿಡಿಯುವಂತೆ ವಾಲ್ಮೀಕಿ ನಗರದ ಜನರು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!