ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಬೆಳೆಯುತ್ತಿರುವ ಬೆಳಗಾವಿಗೆ ಇಂತಹ ಮೇಳಗಳು ಅಗತ್ಯವಾಗಿವೆ. ರಿಯಲ್ ಎಸ್ಟೇಟ್ ವಲಯದ ಪ್ರಮುಖ ಬಿಲ್ಡರ್‌ಗಳು, ವಾಸ್ತುಶಿಲ್ಪಿಗಳು, ಎಂಜಿನಿಯರ್‌ಗಳು ಹಾಗೂ ತಜ್ಞರು ಒಂದಾಗಿ ಈ ಪ್ರದರ್ಶನವನ್ನು ಆಯೋಜಿಸಿದ್ದು ಯಶಸ್ವಿಯಾಗಲಿದೆ. ಸಾರ್ವಜನಿಕರು ಮನೆ, ಪ್ಲಾಟ್, ವಾಣಿಜ್ಯ ಸಂಕೀರ್ಣಗಳು, ಹೊಸ ನಿರ್ಮಾಣ ಸಾಮಗ್ರಿ ಹಾಗೂ ಒಳಾಂಗಣ ವಿನ್ಯಾಸ ಮಾದರಿಗಳನ್ನು ಒಂದೇ ಸ್ಥಳದಲ್ಲಿ ವೀಕ್ಷಿಸಲು ಅವಕಾಶ ದೊರೆಯುತ್ತದೆ ಎಂದರು.ಚಲನಚಿತ್ರ ನಟಿ ಸೋನಾಲಿ ಕುಲಕರ್ಣಿ ಮಾತನಾಡಿ, ಇದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ಬೆಳಗಾವಿಯ ಅಭಿವೃದ್ಧಿಗೆ ಕ್ರೆಡಾಯ್ ಬೆಳಗಾವಿ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಒಂದೇ ಸೂರಿನಡಿ ಮನೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ವಸ್ತುಗಳು ಲಭ್ಯವಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ಪ್ರದರ್ಶನದಲ್ಲಿನ ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ವಸ್ತುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಆಸೀಫ್ ಸೇಠ್, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಮಾತನಾಡಿದರು. ಕರ್ನಾಟಕ ಕ್ರೆಡಾಯ್ ಅಧ್ಯಕ್ಷ ಬಾಸ್ಕರ್ ನಾಗೇಂದ್ರಪ್ಪ, ಪ್ರಶಾಂತ ವಾಂಡಕರ್, ಸುಧೀರ ಪನಾರೆ, ಪ್ರಶಾಂತ ಪಾಟೀಲ, ಸಚಿನ ಬೈಲವಾಡ, ಆನಂದ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.