ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ: ತಡೆಗೋಡೆ ನಿರ್ಮಿಸಲು 10.67 ಕೋಟಿ ರು. ಅನುದಾನ ಮಂಜೂರು

KannadaprabhaNewsNetwork |  
Published : Dec 07, 2025, 04:00 AM IST
32 | Kannada Prabha

ಸಾರಾಂಶ

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಕಡೆಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಲು ಸರ್ಕಾರದಿಂದ 10.67 ಕೋಟಿ ರು. ಅನುದಾನ ಮಂಜೂರಾಗಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಕಡೆಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಲು ಸರ್ಕಾರದಿಂದ 10.67 ಕೋಟಿ ರು. ಅನುದಾನ ಮಂಜೂರಾಗಿದೆ.

ತಾಲೂಕಿನ ನಾನಾ ಗ್ರಾಮಗಳಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಕಳೆದ ಮಳೆಗಾಲದಲ್ಲಿ ಪ್ರವಾಹ ಸ್ಥಿತಿ ಏರ್ಪಟ್ಟಿತ್ತು. ಇದರಿಂದ ಹಲವೆಡೆ ಸಾರ್ವಜನಿಕ ಸಂಪರ್ಕ ರಸ್ತೆಗಳು, ಸೇತುವೆ, ಕಾಲುಸಂಕ,ಕಟ್ಟಡ ಇತ್ಯಾದಿ ಸ್ಥಳಗಳಲ್ಲಿ ಅಪಾಯಕಾರಿ ಪರಿಸ್ಥಿತಿ ಏರ್ಪಟ್ಟಿತ್ತು. ಇಂತಹ ಸ್ಥಳಗಳನ್ನು ಗುರುತಿಸಿ ಶಾಸಕ ಹರೀಶ್ ಪೂಂಜ ಈ ಸ್ಥಳಗಳಲ್ಲಿ ತಡೆಗೋಡೆಗಳನ್ನು ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಕಂದಾಯ ಇಲಾಖೆಯ ಕಾರ್ಯದರ್ಶಿ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದರು.ಇದೀಗ ಸರಕಾರ 10.67 ಕೋಟಿ ರೂ.ಅನುದಾನ ಮಂಜೂರುಗೊಳಿಸಿದೆ. ಕುಸಿತಗಳು ಉಂಟಾಗುವ ಸ್ಥಳಗಳಲ್ಲಿ ಇನ್ನಷ್ಟು ಅಪಾಯ ಎದುರಾಗದಂತೆ, ಮುಂದಿನ ಮಳೆಗಾಲದಲ್ಲಿ ಸಮಸ್ಯೆಗಳು ಉಂಟಾಗದಂತೆ ಈ ಕ್ರಮ ಸೂಕ್ತವಾಗಿದ್ದು ಕಾಮಗಾರಿ ಶೀಘ್ರ ನಡೆಯಬೇಕಾದ ಅಗತ್ಯ ಇದೆ.

ತಡೆಗೋಡೆ ನಿರ್ಮಾಣಗೊಳ್ಳುವ ಸ್ಥಳಗಳು: ಇಳಂತಿಲ- ಕೊಯ್ಯೂರು- ರಸ್ತೆ ಬದಿ 50 ಲಕ್ಷ ರು., ಗೋಳಿ ಅಂಗಡಿ- ಅಳದಂಗಡಿ-ಬೆಳ್ತಂಗಡಿ ರಸ್ತೆ ಬದಿ 75 ಲಕ್ಷ ರು. ಅನುದಾನದಲ್ಲಿ ಈ ಎರಡು ಕಾಮಗಾರಿಗಳು ಲೋಕೋಪಯೋಗಿ ಇಲಾಖೆಯಿಂದ ನಡೆಯಲಿದೆ. ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಬರ್ಕದ ಬೈಲು 42 ಲಕ್ಷ ರು. ಈ ಕಾಮಗಾರಿ ಪಟ್ಟಣ ಪಂಚಾಯಿತಿ ವತಿಯಿಂದ ನಡೆಯಲಿದೆ.ಆರಂಬೋಡಿ ಗ್ರಾಮದ ಕುದುಂಬುಡ ರಸ್ತೆ ಬದಿ 1 ಕೋಟಿ ರು., ಮಲವಂತಿಗೆ ಗ್ರಾಮದ ಪರಾರಿ ರಸ್ತೆ 90 ಲಕ್ಷ ರು., ಎಳನೀರು ಗಡಿ ಉಕ್ಕುಡ ರಸ್ತೆ ಬದಿ 75 ಲಕ್ಷ ರೂ. ಕಜಕ್ಕೆ 20 ಲಕ್ಷ ರು., ಕುಮೇರು 40ಲಕ್ಷ ರು., ಎಳನೀರು ಅಂಗನವಾಡಿ ಬಳಿ 35 ಲಕ್ಷ ರು., ಶಿಶಿಲ ಗ್ರಾಮದ ನಾಗನಡ್ಕ 50 ಲಕ್ಷ ರು., ನಾವೂರು ಗ್ರಾಮದ ಪಂಚಾಯಿತಿ ಬಳಿ 25 ಲಕ್ಷ ರು., ಕೈಕಂಬ- ಕಾರಿಂಜೆ ಎಂಬಲ್ಲಿ 50 ಲಕ್ಷ ರು., ಧರ್ಮಸ್ಥಳ ಕನ್ಯಾಡಿ ಅಂಗನವಾಡಿ ಬಳಿ 50 ಲಕ್ಷ ರು., ಮರೋಡಿ ಗ್ರಾಮದ ಕನ್ಯಾದೋಡೀ ಸೇತುವೆ ಬಳಿ 15ಲಕ್ಷ ರು. ಉಜಿರೆ ಗ್ರಾಪಂ ವ್ಯಾಪ್ತಿಯ ಪಾಣ್ಯಾಲು 20 ಲಕ್ಷ ರು.,ಪಡಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೊಯ್ಯೆ ಗುಡ್ಡೆ 40 ಲಕ್ಷ ರು., ಮಾಲಾಡಿ ಗ್ರಾಮದ ಮೊದಲೆ 35 ಲಕ್ಷ ರು. ಅಂಡಿಂಜೆ ಗ್ರಾಮದ ಕುತ್ಲೂರು 50 ಲಕ್ಷ ರು., ಕಲ್ಮಂಜ ಗ್ರಾಮದ ಗುಮ್ಮಡ ಬೈಲು 30 ಲಕ್ಷ ರು., ಗುತ್ತು ಬೈಲು 35 ಲಕ್ಷ ರು., ನಡ ಗ್ರಾಮದ ಸುರ್ಯ ದೇವಸ್ಥಾನ ರಸ್ತೆ 30 ಲಕ್ಷ ರು., ನಾವೂರು ಗ್ರಾಮದ ಬೋಂಟ್ರಪಾಲು 30 ಲಕ್ಷ ರು.,ರೆಖ್ಯಾ ಗ್ರಾಮದ ಗುಡ್ರಾಡಿ 10 ಲಕ್ಷ ರು., ನಿಡ್ಲೆ ಗ್ರಾಮದ ಮಚ್ಚಳೆ 30 ಲಕ್ಷ ರು.,ಇಳಂತಿಲ ಕೊಯ್ಯೂರು ರಸ್ತೆಯ ಕುಂಟಾಲ ಫಲ್ಕೆ 30 ಲಕ್ಷ ರು.,ಮುಂಡಾಜೆ ಗ್ರಾಮದ ಪೆಲತ್ತಡ್ಕ 10 ಲಕ್ಷ ರು. ವೆಚ್ಚದಲ್ಲಿ ತಡೆಗೋಡೆ ಕಾಮಗಾರಿಗಳಿಗೆ ಅನುದಾನ ಮಂಜೂರುಗೊಂಡಿದ್ದು ಈ ಕೆಲಸಗಳು ಪಂಚಾಯಿತಿ ರಾಜ್ ಇಂಜಿನಿಯರಿಂಗ್ ಇಲಾಖೆ ವ್ಯಾಪ್ತಿಗೆ ಒಳಪಟ್ಟಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಭಾ ಕಾರಂಜಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೂ ದಾರಿ: ಕೃಷ್ಣಪ್ಪ
ಕುಂದಚೇರಿ ಗ್ರಾಮಸಭೆಗೆ ಹಲವು ಅಧಿಕಾರಿಗಳು ಗೈರು : ಗ್ರಾಮಸ್ಥರ ಅಸಮಾಧಾನ