₹25 ಲಕ್ಷ ಮೀರಿದ ಇವಿ ಕ್ಯಾಬ್‌ಗಳಿಗೆ 10% ತೆರಿಗೆ - 10 ಲಕ್ಷ ರು.ವರೆಗಿನ ಕ್ಯಾಬ್‌ಗಳಿಗೆ ಶೇ.5ರಷ್ಟು ತೆರಿಗೆ

Published : Mar 22, 2025, 09:20 AM IST
electric vehicles

ಸಾರಾಂಶ

ರಾಜ್ಯದಲ್ಲಿ ಇನ್ನು ಮುಂದೆ ರಸ್ತೆಗಿಳಿಯುವ 25 ಲಕ್ಷ ರು.ಮೀರಿದ ವಿದ್ಯುತ್‌ಚಾಲಿತ ಕ್ಯಾಬ್‌ಗಳಿಗೆ ಶೇ.10ರಷ್ಟು ಹಾಗೂ ಹತ್ತು ಲಕ್ಷ ರು.ವರೆಗಿನ ಕ್ಯಾಬ್‌ಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ.

ವಿಧಾನಸಭೆ : ರಾಜ್ಯದಲ್ಲಿ ಇನ್ನು ಮುಂದೆ ರಸ್ತೆಗಿಳಿಯುವ 25 ಲಕ್ಷ ರು.ಮೀರಿದ ವಿದ್ಯುತ್‌ಚಾಲಿತ ಕ್ಯಾಬ್‌ಗಳಿಗೆ ಶೇ.10ರಷ್ಟು ಹಾಗೂ ಹತ್ತು ಲಕ್ಷ ರು.ವರೆಗಿನ ಕ್ಯಾಬ್‌ಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. 

ಈ ಸಂಬಂಧ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕ- 2025’ಕ್ಕೆ ಶುಕ್ರವಾರ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಲಾಗಿದೆ.

ತಿದ್ದುಪಡಿ ವಿಧೇಯಕದಿಂದ ರಾಜ್ಯದಲ್ಲಿ ಇನ್ಮುಂದೆ ನೋಂದಣಿಯಾಗುವ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಇವಿ-ಕ್ಯಾಬ್‌ಗಳಿಗೆ ಶೇ.10ರಷ್ಟು ಅಂದರೆ, ಎರಡೂವರೆ ಲಕ್ಷ ರು.ತೆರಿಗೆ ವಿಧಿಸಲಾಗುತ್ತದೆ. ಇದು ಜೀವತಾವಧಿ ತೆರಿಗೆಯಾಗಿದ್ದು, ಹಳದಿ ನಾಮಫಲಕ (ಯೆಲ್ಲೋ ಬೋರ್ಡ್) ಹೊಂದಿರುವ ವಾಹನಗಳಿಗೆ ಅನ್ವಯವಾಗಲಿದೆ. ಈ ತಿದ್ದುಪಡಿ ವಿಧೇಯಕದ ಮೂಲಕ ವಾರ್ಷಿಕ 112.5 ಕೋಟಿ ರು.ಹೆಚ್ಚುವರಿ ಆದಾಯ ಹರಿದು ಬರುವ ಇದೆ ಎಂದು ಮೂಲಗಳು ತಿಳಿಸಿವೆ.

ಅದೇ ರೀತಿ, ಹೊಸದಾಗಿ ರಸ್ತೆಗಿಳಿಯುವ ಹತ್ತು ಲಕ್ಷ ರು.ವರೆಗಿನ ಮೌಲ್ಯದ ಬಾಡಿಗೆ ಮೋಟಾರು ವಾಹನ (ಹಳದಿ ನಾಮಫಲಕ ಹೊಂದಿರುವ ಕ್ಯಾಬ್)ಗಳಿಗೆ ಶೇ.5ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದೇ ವೇಳೆ, ನಿರ್ಮಾಣ ವಲಯದ ಉಪಕರಣಗಳನ್ನು ಸಾಗಿಸುವ ವಾಹನಗಳಿಗೆ ಜೀವಿತಾವಧಿ ತೆರಿಗೆಯನ್ನು ಶೇ. 6ರಿಂದ ಶೇ.8ಕ್ಕೆ ಹೆಚ್ಚಿಸಲಾಗಿದೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ