;Resize=(412,232))
ಕೆಂಗೇರಿ: ತಾವರೆಕೆರೆ ಬೆಸ್ಕಾಂ ಉಪವಿಭಾಗದ ಸೀಗೇಹಳ್ಳಿ ಘಟಕದ ಸುತ್ತಮುತ್ತ ನ.7ರಿಂದ 11ರವರೆಗೆ ನಾಲ್ಕು ದಿನ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಕೊಡಿಗೆಹಳ್ಳಿಯ 66/11 ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೀಡರ್ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಚಿಕ್ಕಗೊಲ್ಲರಹಟ್ಟಿ, ಮಾಚೋಹಳ್ಳಿ, ಕಾಚೋಹಳ್ಳಿ, ಬೈಲಕೊನೇನಹಳ್ಳಿ ಸೇರಿದಂತೆ ವಿವಿದೆಡೆ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ.
ಚಿಕ್ಕಗೊಲ್ಲರಹಟ್ಟಿ, ಮಾಚೋಹಳ್ಳಿ, ಕಾಚೋಹಳ್ಳಿ, ಬೈಲಕೊನೇನಹಳ್ಳಿ ಬೈಯಂಡನಹಳ್ಳಿ, ವಡ್ಡರಹಳ್ಳಿ, ಜನಪ್ರಿಯ, ರಾಶಿ ರೆಸಿಡೆನ್ಸಿ ಸೀಗೇಹಳ್ಳಿ, ಕಡಬಗೆರೆ, ಕಾಚೋಹಳ್ಳಿ ಕೈಗಾರಿಕಾ ಪ್ರದೇಶ, ಚಿಕ್ಕಗೊಲ್ಲರಹಟ್ಟಿ, ಮಾಚೋಹಳ್ಳಿ ಕೈಗಾರಿಕಾ ಪ್ರದೇಶ, ಕಾಚೋಹಳ್ಳಿ, ಕಾಲ್ಪಾ ಕೈಗಾರಿಕಾ ಪ್ರದೇಶ, ಫಾರೆಸ್ಟ್ ಗೇಟ್ ಕೈಗಾರಿಕಾ ಪ್ರದೇಶ, ಪೈಪ್ ಲೈನ್ ಕೈಗಾರಿಕ ಪ್ರದೇಶ, ಕೆ.ಜಿ ಲಕ್ಕೆನಹಳ್ಳಿ ಮತ್ತು ಈ ವ್ಯಾಪ್ತಿಯಲ್ಲಿ ಬರುವ ವಸತಿ, ವಾಣಿಜ್ಯ ಮತ್ತು ಕೈಗಾರಿಕ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ತಾವರೆಕೆರೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.