ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ದಿನಪತ್ರಿಕೆ ಡಿಸ್ಟ್ರಿಬ್ಯೂಟರ್ ಚಾರಿಟಬಲ್ ಟ್ರಸ್ಟ್ ಹಾಗೂ ಬೆಳಗಾವಿ ದಿನಪತ್ರಿಕೆ ವಿತರಕರ ಸಂಘದ ಸಂಯುಕ್ತಾಶ್ರಯದಲ್ಲಿ ನ.11ರಂದು ಬೆಳಗಾವಿಯ ಅಶೋಕ ನಗರದ ಧರ್ಮರಾಮ್ ಭವನದಲ್ಲಿ 6ನೇ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನ-2026 ನಡೆಯಲಿದೆ.

ಬೆಳಗಾವಿ : ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ದಿನಪತ್ರಿಕೆ ಡಿಸ್ಟ್ರಿಬ್ಯೂಟರ್ ಚಾರಿಟಬಲ್ ಟ್ರಸ್ಟ್ ಹಾಗೂ ಬೆಳಗಾವಿ ದಿನಪತ್ರಿಕೆ ವಿತರಕರ ಸಂಘದ ಸಂಯುಕ್ತಾಶ್ರಯದಲ್ಲಿ ನ.11ರಂದು ಬೆಳಗಾವಿಯ ಅಶೋಕ ನಗರದ ಧರ್ಮರಾಮ್ ಭವನದಲ್ಲಿ 6ನೇ ರಾಜ್ಯ ಪತ್ರಿಕಾ ವಿತರಕರ ಸಮ್ಮೇಳನ-2026 ನಡೆಯಲಿದೆ. ಅದರ ಅಂಗವಾಗಿ ನೀಡಲಾಗುವ 2026ನೇ ಸಾಲಿನ ಮಾಧ್ಯಮ ಸೇವಾ ರತ್ನ, ಪತ್ರಿಕಾ ವಿತರಕರ ಸೇವಾ ರತ್ನ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪ್ರತಿಭಾ ಪುರಸ್ಕಾರಗಳ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ತಿಳಿಸಿದೆ.

ಮಾಧ್ಯಮ ಸೇವಾ ರತ್ನ ಪ್ರಶಸ್ತಿ:

ವಿಜಯ ಕರ್ನಾಟಕದ ಸುರೇಶ ಶಾನಭಾಗ, ವಿಜಯವಾಣಿಯ ಮಹೇಶ ವಿಜಾಪುರೆ, ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್‌ನ ಸಂತೋಷ ಚಿಕ್ಕೋಡಿ, ಸಂಯುಕ್ತ ಕರ್ನಾಟಕದ ರಾಮಚಂದ್ರ ಕುಲಕರ್ಣಿ, ಕನ್ನಡಪ್ರಭದ ಬ್ರಹ್ಮಾನಂದ ಹಡಗಲಿ ಮತ್ತು ಮಂಜುನಾಥ ಕೊಸನಲಾಳ, ಹೊಸದಿಗಂತದ ಸಂದೀಪ ಮಾಲಿಮನಿ, ಲೋಕದರ್ಶನದ ವೈಭವ ಕುಬ್ಬದ, ಉದಯವಾಣಿಯ ಮಾರುತಿ ಕೂಳೇಕರ, ವಿಶ್ವವಾಣಿಯ ರವಿ ಪೂಜಾರ, ದಿ ಹಿಂದೂ ಪತ್ರಿಕೆಯ ಮಂಜುನಾಥ ಕೊಸಗಿ, ಇಂಡಿಯನ್ ಎಕ್ಸ್‌ಪ್ರೆಸ್‌ನ ಅಪ್ಪಣ್ಣ ಮೇತ್ರಿ, ತರುಣ ಭಾರತದ ಕಿರಣ ಠಾಕೂರ, ಸಕಾಳ ಪತ್ರಿಕೆಯ ಮಲ್ಲಿಕಾರ್ಜುನ ಮುಗಳಿ ಹಾಗೂ ಪುಧಾರಿ ಪತ್ರಿಕೆಯ ಗೋಪಾಲ ಗೌಡ ಸೇರಿ ಒಟ್ಟು 15 ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಪತ್ರಿಕಾ ವಿತರಕರ ಸೇವಾ ರತ್ನ ಪ್ರಶಸ್ತಿ:

ಅಥಣಿ -ರಾಜು ಗಾಳಿ, ಬೈಲಹೊಂಗಲ - ಯಾಸಿನ್ ಕಿತ್ತೂರು, ಸಂಜಯ್ ಕದಂ, ಚಿಕ್ಕೋಡಿ - ಮಾಳಿ, ಗೋಕಾಕ್ - ವೀರೇಂದ್ರ ಕಿತ್ತೂರು, ಹುಕ್ಕೇರಿ/ಹತ್ತರಗಿ-ಪ್ರಭು ಖೋತ್, ಖಾನಾಪುರ / ನಂದಗಡ-ಕಿರಣ್ ಬಿಡಕರ್, ರಾಯಬಾಗ - ಶಿವಾಜಿ ಮೇತ್ರಿ, ರಾಮದುರ್ಗ - ಪ್ರಕಾಶ್ ಅಸುಂಡಿ, ಸವದತ್ತಿ - ಬಾಳೋಜಿ (ನೂರ್), ಕಿತ್ತೂರು - ನಾಗರಾಜ್ ಜೋಲಾಪುರ, ನಿಪ್ಪಾಣಿ - ಉದಯ್ ದೇಸಾಯಿ, ಕಾಗವಾಡ - ಗುಂಡು ಪಾಟೀಲ್ (ಸೋನೋಲಿ), ಮೂಡಲಗಿ - ಕೃಷ್ಣಪ್ಪ ಗಿರೆಣ್ಣವರ್, ಯರಗಟ್ಟಿ - ವಿರಕ್ತಿಮಠ, ಬೆಳಗಾವಿ - ರಾಜು ಮುಚ್ಚಂಡಿ, ಬೆಳಗಾವಿ - ನಾಗೇಶ್ ಕುಲಕರ್ಣಿ, ಬೆಳಗಾವಿ - ಸುಭಾಷ್ ಪಾಟೀಲ್, ಬೆಳಗಾವಿ - ಸುಧೀರ್ ಕುಲಕರ್ಣಿ, ಬೆಳಗಾವಿ - ಬಾಳು ಮಾಯಣ್ಣಾಚೆ (ವಿಕಲಚೇತನರು), ಬೆಳಗಾವಿ - ಜಗನ್ನಾಥ್ ಮಾಂಜ್ರೇಕರ್, ಬೆಳಗಾವಿ - ಅಶೋಕ್ ಶಿಂಧೆ, ಬೆಳಗಾವಿ - ಪ್ರಫುಲ್ ಕುಡಲೆ, ಬೆಳಗಾವಿ - ದೀಪಕ ಘೋರ್ಪಡೆ, ಬೆಳಗಾವಿ - ಸರೋದೆ (ಮಹಿಳೆ) ಹೀಗೆ 25 ಪತ್ರಿಕಾ ವಿತರಕರನ್ನು ಗೌರವಿಸಲಾಗುವುದು. ವಿಶೇಷವಾಗಿ ಮಹಿಳೆ ಹಾಗೂ ವಿಕಲಚೇತನ ವಿತರಕರಿಗೂ ಪ್ರಶಸ್ತಿ ನೀಡಲಾಗುತ್ತಿದೆ. ಇದಲ್ಲದೆ ಪತ್ರಿಕೆ ವಿತರಕರಾದ ವಿಶ್ವನಾಥ ಪಾಟೀಲ, ಪ್ರಭಾಕರ ಹುಲಿ, ಚಂದ್ರಕಾಂತ ಮುತಗೇಕರ ಮತ್ತು ಆದಿತ್ಯ ಮಾಯೇಂಕರ ಅವರನ್ನು ಗೌರವಿಸಲಾಗುವುದು.

ಪ್ರತಿಭಾ ಪುರಸ್ಕಾರ: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಸಾಧನೆ ಮಾಡಿದ ಸಮರ್ಥ ಸಿದ್ದಪ್ಪ ಡೊಳ್ಳಿ, ಭವನ ಎಸ್., ರೀಶಾ ದೇವರಾಜ ಹೆಣೇಕರ, ಕಿರಣ ಮಹಾಂತೇಶ ರಾಜಗೋಳಿ, ಮಹಾಲಕ್ಷ್ಮೀ ಶಿವಪ್ರಭು ಈಸರಗೊಂಡ, ಚಂದ್ರಶೇಖರ ವಿಠ್ಠಲ ಯಡ್ರಾವಿ, ರಾಘವೇಂದ್ರ ಕೆ.,ನಿಖಿತಾ ಹಣಮಂತ ಹಂಡಗಿ, ಐಶ್ವರ್ಯ ಎಸ್., ಕೆ.ಎನ್. ಕೀರ್ತನಾ, ಓಂಕಾರ ದೇವರಾಜ ಹೆಣೇಕರ, ಪೂರ್ವಿಕ ಆರ್., ಭೂಮಿಕ ವಿ., ಓಂಕಾರ್ ಹೀಗೆ 14 ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಸಮ್ಮೇಳನದಲ್ಲಿ ಪತ್ರಿಕಾ ವಿತರಕರ ಸೇವೆ, ಮಾಧ್ಯಮ ಕ್ಷೇತ್ರಕ್ಕೆ ಅವರ ಕೊಡುಗೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಗೌರವಿಸಲಾಗುವುದು ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಹಾಗೂ ಬೆಳಗಾವಿ ದಿನಪತ್ರಿಕೆ ವಿತರಕರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.