ದೇವನಹಳ್ಳಿ: ಪಟ್ಟಣದ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ ಹಾಗೂ ನ.2ರಂದು ತಾಲೂಕಿನ ಯಲಿಯೂರು ಗ್ರಾಮದಲ್ಲಿ ೨೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ತಹಸೀಲ್ದಾರ್ ಎಂ.ಅನಿಲ್ ಹೇಳಿದರು
ದೇವನಹಳ್ಳಿ: ಪಟ್ಟಣದ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ ಹಾಗೂ ನ.2ರಂದು ತಾಲೂಕಿನ ಯಲಿಯೂರು ಗ್ರಾಮದಲ್ಲಿ ೨೯ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ತಹಸೀಲ್ದಾರ್ ಎಂ.ಅನಿಲ್ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಭವನದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ತಾಲೂಕು ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತದ ಸಹಯೋಗದಲ್ಲಿ ನ.1ರಂದು ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಧ್ವಜಾರೋಹಣ ನೆರವೇರಿಸುವರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧ, ಜಿಪಂ ಸಿಇಒ ವಾಸಂತಿ ಅಮರ್ ಹಾಗೂ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಭಾಗವಹಿಸುವರು. ಶಾಲಾ ಮಕ್ಕಳಿಂದ ನಾಡು ನುಡಿ ಸಂಸ್ಕೃತಿ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಕೋಶಾಧ್ಯಕ್ಷ ಡಾ.ಮುನಿರಾಜು ಅಪ್ಪಯ್ಯ ಮಾತನಾಡಿ, ನ.೨ರಂದು ಬೆಳಿಗ್ಗೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರು ನಾಡ ಧ್ವಜಾರೋಹಣ ನೆರವೇರಿಸುವರು. ಜಿಲ್ಲಾಧ್ಯಾಕ್ಷರು ಪರಿಷತ್ ಧ್ವಜಾರೋಹಣ ಮಾಡುವರು. ಬಳಿಕ ಬೆಳ್ಳಿ ರಥದಲ್ಲಿ ಸಮ್ಮಳನಾಧ್ಯಕ್ಷರನ್ನು ವಿವಿಧ ವಾದ್ಯ ಕಲಾತಂಡಗಳೊಂದಿಗೆ ವೇದಿಕೆಗೆ ಕರೆತರಲಾಗುವುದು ಎಂದು ಹೇಳಿದರು.ಕಮಲಾ ಹಂಪನಾ ವೇದಿಕೆಯಲ್ಲಿ ಬೆಳಗ್ಗೆ ೯ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸಮ್ಮೇಳನವನ್ನು ಉದ್ಘಾಟಿಸುವರು. ಬಳಿಕ ಗಣ್ಯರ ಭಾಷಣ, ಸಮ್ಮೇಳನಾದ್ಯಕ್ಷರ ನುಡಿ, ವಿಚಾರಗೋಷ್ಠಿ, ಕವಿಗೋಷ್ಠಿ ನಿರ್ಣಯಗಳು ಮಂಡನೆಯಾಗಲಿವೆ. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು.
ಸಭೆಯಲ್ಲಿ ತಾಪಂ ಇಒ ಎನ್.ಮುನಿರಾಜು, ದೇವನಹಳ್ಳಿ ಪುರಸಭೆ ಶ್ರೀದೇವಿ, ಕಸಾಪ ಕೋಶಾಧ್ಯಕ್ಷ ಮುನಿರಾಜ್ ಅಪ್ಪಯ್ಯ, ಜಿಲ್ಲಾ ಸಹಕಾರ್ಯದರ್ಶಿ, ಎಸ್.ರಮೇಶ್ ಕುಮಾರ್, ತಾಲೂಕು ಕಸಾಪ ಅಧ್ಯಕ್ಷ ಯಲಿಯೂರು ದೇವರಾಜ್, ತಾಲೂಕು ಕೋಶಾಧ್ಯಕ್ಷ ಜೊನ್ನಹಳ್ಳಿ ರಾಮಾಂಜಿನಪ್ಪ, ರಂಗಸ್ವಾಮಿ, ಮುನಿರಾಜು, ಭೈರೇಗೌಡ, ವೇಣು, ರಮೇಶ್, ಮಧುಸೂದನ್, ರಾಮಣ್ಣ, ಮಂಜುನಾಥ್, ರಮೇಶ್ ಕುಮಾರ್ ರವಿಕುಮಾರ್ ಇತರರಿದ್ದರು.೨೯ ದೇವನಹಳ್ಳಿ ಚಿತ್ರಸುದ್ದಿ:
ದೇವನಹಳ್ಳಿ ತಾಲೂಕು ೨೯ನೇ ಕನ್ನಡ ಸಾಹಿತ್ಯ ಸಮ್ಮೇಳನ ಆಚರಣೆ ಕುರಿತು ಆಹ್ವಾನ ಪತ್ರಿಕೆಯನ್ನು ತಹಸೀಲ್ದಾರ್ ಅನಿಲ್, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ಕೃಷ್ಣಪ್ಪ, ಕೋಶಾಧ್ಯಕ್ಷ ಡಾ.ಮುನಿರಾಜು ಅಪ್ಪಯ್ಯ, ತಾಲೂಕು ಅಧ್ಯಕ್ಷ ಯಲಿಯೂರು ದೇವರಾಜ್ ಬಿಡುಗಡೆ ಮಾಡಿದರು.