ಮೋದಿ ಸರ್ಕಾರದಲ್ಲಿ ಹಸಿರು ಭವಿಷ್ಯಕ್ಕೆ ಶಕ್ತಿ

Published : Jun 07, 2025, 11:48 AM ISTUpdated : Jun 07, 2025, 11:49 AM IST
PM Modi

ಸಾರಾಂಶ

ಭಾರತವು ಇಂದು ವಿಶ್ವದ ಮುಂಚೂಣಿ ಸ್ವಚ್ಛ ಇಂಧನ ನಾಯಕರಲ್ಲಿ ಒಂದಾಗಿದೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ.

 ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ.

ಭಾರತವು ಇಂದು ವಿಶ್ವದ ಮುಂಚೂಣಿ ಸ್ವಚ್ಛ ಇಂಧನ ನಾಯಕರಲ್ಲಿ ಒಂದಾಗಿದೆ. ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ. ಕಳೆದ 11 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ 11 ಪರಿವರ್ತನಾತ್ಮಕ ಸುಧಾರಣೆಗಳನ್ನು ಕಾಣಬಹುದಾಗಿದೆ. ಪ್ರತಿಯೊಂದು ಸುಧಾರಣೆಯೂ ನಮ್ಮ ಆತ್ಮನಿರ್ಭರತೆ ಒಳಗೊಳ್ಳುವ ಬೆಳವಣಿಗೆ ಮತ್ತು ಸುಸ್ಥಿರತೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. 

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಭಾರತವು ನವೀಕರಿಸಬಹುದಾದ ಇಂಧನ ವಲಯದಲ್ಲಿ ಕೇವಲ ಮಹತ್ವಾಕಾಂಕ್ಷೆಯ ಗುರಿಗಳನ್ನುಮಾತ್ರ ಇರಿಸಿಲ್ಲ, ಬದಲಿಗೆ ದೃಢಸಂಕಲ್ಪ, ನಾವೀನ್ಯತೆ ಮತ್ತು ಅಪ್ರತಿಮ ಪ್ರಮಾಣದೊಂದಿಗೆ ಅವುಗಳನ್ನು ಸಾಧಿಸಿದೆ. ಇಂದು ಭಾರತವು ವಿಶ್ವದ ಮುಂಚೂಣಿ ಸ್ವಚ್ಛ ಇಂಧನ ನಾಯಕರಲ್ಲಿ ಒಂದಾಗಿದೆ. ಸೌರಶಕ್ತಿಯಲ್ಲಿ ಮೂರನೇ, ಪವನ ವಿದ್ಯುತ್‌ನಲ್ಲಿ ನಾಲ್ಕನೇ ಮತ್ತು ಒಟ್ಟಾರೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ. 232 ಗಿಗಾವ್ಯಾಟ್ ಗಿಂತಲೂ ಅಧಿಕ ನವೀಕರಿಸಬಹುದಾದ ಸಾಮರ್ಥ್ಯವನ್ನು ಸ್ಥಾಪಿಸಿದ್ದು, ಮತ್ತೊಂದು 176 ಗಿಗಾವ್ಯಾಟ್ ನಿರ್ಮಾಣ ಹಂತದಲ್ಲಿದೆ.

ನಾವು ಕೇವಲ ನಮ್ಮ ಇಂಧನ ಅಗತ್ಯಗಳನ್ನು ಪೂರೈಸುವುದಲ್ಲದೆ, ಇಂಧನ ಪರಿವರ್ತನೆಯ ಕುರಿತಾದ ಜಾಗತಿಕ ಚರ್ಚೆಯನ್ನು ಸಕ್ರಿಯವಾಗಿ ರೂಪಿಸುತ್ತಿದ್ದೇವೆ. ಈ ಪ್ರಗತಿಯು ಕೇವಲ ಕಾಕತಾಳೀಯವಲ್ಲ, ಬದಲಾಗಿ ಕಳೆದ 11 ವರ್ಷಗಳಲ್ಲಿ ಮೋದಿ ಅವರ ನಾಯಕತ್ವದಲ್ಲಿ ಸ್ಥಿರವಾಗಿ ಅನುಸರಿಸಲಾದ ದಿಟ್ಟ ಸುಧಾರಣೆಗಳು, ಸಮಯೋಚಿತ ನಿರ್ಧಾರಗಳು ಸ್ಪಷ್ಟವಾದ ದೂರ ದೃಷ್ಟಿಯ ಫಲಿತಾಂಶವಾಗಿದೆ. ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿ ಆಗಿದ್ದಾಗ, ಸ್ವಚ್ಛ ಇಂಧನವು ಜಾಗತಿಕ ಆದ್ಯತೆ ಅಗುವ ಮೊದಲೇ ಅವರು ದೊಡ್ಡ ಪ್ರಮಾಣದ ಸೌರ ಯೋಜನೆಗಳಿಗೆ ಮುಂದಾಳತ್ವ ವಹಿಸಿದ್ದರು. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಅವರು ಆದೃಷ್ಟ ಕೋನವನ್ನು ರಾಷ್ಟ್ರವ್ಯಾಪಿ ವಿಸ್ತರಿಸಿದರು. ಇದರ ಪರಿಣಾಮವಾಗಿ, ಇಂದು ಭಾರತವು ಸೌರ, ಪವನ ಮತ್ತು ಸ್ವಚ್ಛ ಇಂಧನ ನಾವೀನ್ಯತೆಯಲ್ಲಿ ಜಾಗತಿಕ ನಾಯಕನಾಗಿ ಗುರುತಿಸಿಕೊಂಡಿದೆ. ಒಂದು ರಾಷ್ಟ್ರ ಒಂದು ಗ್ರಿಡ್‌

ಕಳೆದ 1 ವರ್ಷದಲ್ಲಿಯೇ, ನಾವು ರಾಷ್ಟ್ರೀಯ ಗ್ರಿಡ್‌ ದಾಖಲೆಯ 29 ಗಿಗಾ ವ್ಯಾಟ್‌ನ ನವೀಕರಿಸಬಹುದಾದ ಇಂಧನವನ್ನು ಸೇರಿಸಿದ್ದೇವೆ. 2014ರಲ್ಲಿ ಕೇವಲ2.63 ಗಿಗಾ ವ್ಯಾಟ್‌ ಇದ್ದ ಸೌರಸಾಮರ್ಥ್ಯವು 2025 ರಲ್ಲಿ ಬೃಹತ್‌ ಪ್ರಮಾಣದಲ್ಲಿ 41 ಪಟ್ಟು ಹೆಚ್ಚಾಗಿ 108 ಗಿಗಾವ್ಯಾಟ್ ಗಿಂತಲೂ ಹೆಚ್ಚಾಗಿದೆ. ಪವನ ಶಕ್ತಿಯ ಸಾಮರ್ಥ್ಯವು ಸಹ 51 ಗಿಗಾವ್ಯಾಟ್‌ಗಳನ್ನು ಮೀರಿದೆ. ದೇಶದಾದ್ಯಂತ ಹರಡಿರುವ ಈ ಯೋಜನೆಗಳನ್ನು ಈಗ ಏಕೀಕೃತ ಪ್ರಸರಣ ವ್ಯವಸ್ಥೆಯ ಮೂಲಕ ಜೋಡಿಸಲಾಗುತ್ತಿದೆ. ಇದರಿಂದಾಗಿ ಒಂದು ರಾಷ್ಟ್ರ ಒಂದು ಗ್ರಿಡ್‌ ಎಂಬ ಕನಸು ನನಸಾಗುತ್ತಿದೆ. ಇದರ ಮೂಲಕ ಭೌಗೋಳಿಕ ತಡೆಗಳಿಲ್ಲದೆ ಪ್ರತಿಯೊಬ್ಬ ಭಾರತೀಯನು ವಿಶ್ವಾಸಾರ್ಹ ವಿದ್ಯುತ್ಅನ್ನು ಪಡೆಯಬಹುದು. ಎರಡು ಬಾರಿ ಗ್ರಿಡ್‌ ವೈಫಲ್ಯ

ಆದರೆ ಈ ಪರಿವರ್ತನೆಯ ಪ್ರಮಾಣವನ್ನು ಅರಿಯಲು, ನಾವು ಎಲ್ಲಿಂದ ಪ್ರಾರಂಭಿಸಿದ್ದೇವೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. 2014ರಲ್ಲಿ, ಭಾರತದ ವಿದ್ಯುತ್‌ ವಲಯವು ತೀವ್ರ ಬಿಕ್ಕಟ್ಟಿನಲ್ಲಿತ್ತು. ವಿದ್ಯುತ್‌ ಕೊರತೆ ದೀರ್ಘಕಾಲೀನ ಸಮಸ್ಯೆಯಾಗಿತ್ತು. 2012ರಲ್ಲಿ ಸಂಭವಿಸಿದ ಎರಡು ಬಾರಿ ಗ್ರಿಡ್‌ ವೈಫಲ್ಯವು, ಮೊದಲು ಉತ್ತರ ಪ್ರದೇಶದಲ್ಲಿ 36,000 ಮೆಗಾ ವ್ಯಾಟ್‌ ಉಷ್ಣವನ್ನು ಉಂಟುಮಾಡಿತು. ನಂತರ ಉತ್ತರ, ಪೂರ್ವ ಮತ್ತು ಈಶಾನ್ಯ ಗ್ರಿಡ್‌ಗಳ ಕುಸಿತಕ್ಕೆ ಕಾರಣವಾಗಿ 48,000 ಮೆಗಾ ವ್ಯಾಟ್‌ಗಳ ಮೇಲೆ ಪರಿಣಾಮ ಬೀರಿತು. ಅದು ಇನ್ನೂ ನಮ್ಮ ನೆನಪಿನಲ್ಲಿ ಹಸಿರಾಗಿದೆ. ಭಾರತವು ಇಂಧನ ಕೊರತೆಯಿಂದ ಇಂಧನ ಆತ್ಮನಿರ್ಭರತೆಯತ್ತ ಸಾಗಿದೆ. ಹಿಂದೆ ಬಿದ್ದಿದ್ದ ನಾವು ಈಗ ಇತರರಿಗೆ ಮಾದರಿಯಾಗಿದ್ದೇವೆ. ಮೋದಿ ಸರ್ಕಾರದ ಅಡಿಯಲ್ಲಿ ಕಳೆದ 11 ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿನ 11 ಪರಿವರ್ತನಾತ್ಮಕ ಸುಧಾರಣೆಗಳನ್ನು ನಾನು ಎತ್ತಿತೋರಿಸುತ್ತೇನೆ. ಪ್ರತಿಯೊಂದು ಸುಧಾರಣೆಯೂ ನಮ್ಮ ಆತ್ಮನಿರ್ಭರತೆ ಒಳಗೊಳ್ಳುವ ಬೆಳವಣಿಗೆ ಮತ್ತು ಸುಸ್ಥಿರತೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಬಿಡ್ಡಿಂಗ್‌ ಪ್ರಕ್ರಿಯೆ ಬದಲಾವಣೆ ಮೊದಲನೆಯದಾಗಿ, ಫೀಡ್-ಇನ್ಸುಂಕಗಳಿಂದ ಪಾರದರ್ಶಕ, ಮಾರುಕಟ್ಟೆ-ಚಾಲಿತ ಬಿಡ್ಡಿಂಗ್‌ ಪ್ರಕ್ರಿಯೆ ಬದಲಾವಣೆ ಒಂದು ಮಹತ್ವದ ತಿರುವು. ಸ್ಪರ್ಧಾತ್ಮಕ ಬಿಡ್ಡಿಂಗ್‌ ಮತ್ತು ಸುಂಕದ ತರ್ಕಬದ್ಧಗೊಳಿಸುವಿಕೆಯಿಂದಾಗಿ ಸೌರಶಕ್ತಿಯ ಸುಂಕವು 2010 ರಲ್ಲಿ ಪ್ರತಿ ಯುನಿಟ್‌ಗೆ ₹10.95 ರಿಂದ 2021ರ ವೇಳೆಗೆ ₹1.99ಕ್ಕೆ ಇಳಿಯಿತು. ಇದು ಭಾರತವನ್ನು ಸೌರಶಕ್ತಿಯಲ್ಲಿ ಜಾಗತಿಕ ಬೆಲೆನಾಯಕನಾಗಿ ಸ್ಥಾನಾಂತರಿಸಿತು.

ಪ್ರಸರಣ ವವ್ಯಸ್ಥೆಯ ಶುಲ್ಕಗಳ ರದ್ದತಿ ಎರಡನೆಯದಾಗಿ, ಮತ್ತೊಂದು ಪ್ರಮುಖ ಸೌಲಭ್ಯವೆಂದರೆ ಅಂತರ ರಾಜ್ಯ ಪ್ರಸರಣ ವ್ಯವಸ್ಥೆಯ (ISTS) ಶುಲ್ಕಗಳ ರದ್ದತಿ. ಈ ಶುಲ್ಕಗಳನ್ನು ತೆಗೆದು ಹಾಕುವ ಮೂಲಕ, ಸರ್ಕಾರವು ಯೋಜನಾ ಅಭಿವರ್ಧಕರಿಗೆ ಇದ್ದ ಒಂದು ಪ್ರಮುಖ ಅಡಚಣೆಯನ್ನು ನಿವಾರಿಸಿತು. ಕಡಲಾಚೆಯ ಪವನ ವಿದ್ಯುತ್‌ಗೆ 2032ರವರೆಗೆ ಮತ್ತು ಹಸಿರು ಜಲಜನಕಕ್ಕೆ 2030ರವರೆಗೆ ವಿಸ್ತರಿಸಲಾದ ಈ ನೀತಿಯು ನವೀಕರಿಸಬಹುದಾದ ಇಂಧನ ನಿಯೋಜನೆಯನ್ನು ಭೌಗೋಳಿಕ ಮಿತಿಗಳಿಂದ ಪರಿಣಾಮಕಾರಿಯಾಗಿ ಮುಕ್ತಗೊಳಿಸಿತು ಮತ್ತು ಪ್ಯಾನ್‌ ಇಂಡಿಯಾ ಇಂಧನ ಹರಿವನ್ನು ಪ್ರೋತ್ಸಾಹಿಸಿತು.

ಪ್ರೋತ್ಸಾಹ ಯೋಜನೆ ಮೂರನೆಯದಾಗಿ, ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಉದ್ಯೋಗಗಳನ್ನು ಸೃಷ್ಟಿಸಲು, ಸರ್ಕಾರವು ಸೌರ ಉತ್ಪಾದನೆಗಾಗಿ ₹24,000 ಕೋಟಿ ಪ್ರೋತ್ಸಾಹಧನಗಳೊಂದಿಗೆ ಉತ್ಪಾದನೆ ಸಂಬಂಧಿತ ಪ್ರೋತ್ಸಾಹ (Production Linked Incentive - PLI) ಯೋಜನೆಯನ್ನು ಪರಿಚಯಿಸಿತು. ಇದು ದೇಶೀಯ ಉತ್ಪಾದನಾ ಹೆಚ್ಚಳಕ್ಕೆ ಕಾರಣವಾಗಿದೆ, 2014ರಲ್ಲಿ 2.3 GW ಇದ್ದ ಮಾಡ್ಯೂಲ್‌ ಸಾಮರ್ಥ್ಯವು 2025ರ ವೇಳೆಗೆ 88 GWಗೆ ಹೆಚ್ಚಿದೆ ಮತ್ತು ಸೆಲ್‌ ಸಾಮರ್ಥ್ಯದಿಂದ 25 GW ಗೆ ಬೆಳೆದಿದೆ.

ಅನುಮೋದಿತ ಪಟ್ಟಿ ಜಾರಿ ನಾಲ್ಕನೆಯದಾಗಿ, ಸ್ವಾವಲಂಬನೆಯನ್ನು ಉತ್ತೇಜಿಸಲು ಮತ್ತು ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು, ಸರ್ಕಾರವು ಮಾದರಿಗಳು ಮತ್ತು ತಯಾರಕರ ಅನುಮೋದಿತಪಟ್ಟಿ (ALMM), ಘಟಕಗಳು ಮತ್ತು ತಯಾರಕರ ಅನುಮೋದಿತ ಪಟ್ಟಿ (ALCM) ಹಾಗೂ ದೇಶೀಯ ಅಂಶ ಅಗತ್ಯತೆಗಳನ್ನು (DCR) ಜಾರಿಗೊಳಿಸಿದೆ.

ಪಿಎಂ-ಸೂರ್ಯಘರ್ ಯೋಜನೆ ಐದನೆಯದಾಗಿ, ಪ್ರಧಾನ ಮಂತ್ರಿಯವರ ದೃಷ್ಟಿಯಡಿಯಲ್ಲಿ, ಪಿಎಂ-ಸೂರ್ಯಘರ್ ಮುಫತ್‌ ಬಿಜ್ಲಿ ಯೋಜನೆ ಒಂದು ಪರಿವರ್ತನಾತ್ಮಕ ಉಪಕ್ರಮವಾಗಿ ಮಾರ್ಪಟ್ಟಿದೆ. ಇದು 1 ಕೋಟಿ ಮನೆಗಳಲ್ಲಿ ಮೇಲ್ಛಾವಣಿ ಸೌರ ಸ್ಥಾಪನೆಯನ್ನು ಗುರಿಯಾಗಿಸಿಕೊಂಡು 30 ಗಿಗಾ ವ್ಯಾಟ್ವಿ ಕೇಂದ್ರೀಕೃತ ಸಾಮರ್ಥ್ಯವನ್ನು ಸೃಷ್ಟಿಸುತ್ತದೆ. ಈಗಾಗಲೇ ಸುಮಾರು 13.75 ಲಕ್ಷ ಮನೆಗಳನ್ನು ಇದರೊಂದಿಗೆ ಜೋಡಿಸಲಾಗಿದೆ.

ಪಿಎಂ-ಕುಸುಮ ಯೋಜನೆ ಆರನೆಯದಾಗಿ, ಪಿಎಂ-ಕುಸುಮ ಯೋಜನೆಯು ರೈತರು ವಿಕೇಂದ್ರೀಕೃತ ಸೌರವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ಅನುವುಮಾಡಿಕೊಡುವ ಮೂಲಕ ಕೃಷಿಯನ್ನು ಸೌರೀಕರಣಗೊಳಿಸುತ್ತಿದೆ. 11 ಲಕ್ಷಕ್ಕೂ ಹೆಚ್ಚುಪಂಪ್ ಗಳನ್ನು ಸೌರೀಕರಣಗೊಳಿಸಲಾಗಿದೆ.

ವಿದೇಶಿ ನೇರಹೂಡಿಕೆ ಏಳನೆಯದಾಗಿ, ಭಾರತವು ಈಗ ಸ್ವಚ್ಛ ಇಂಧನದಲ್ಲಿ ಇಡೀ ವಿಶ್ವವನ್ನು ಹಿಂಬಾಲಿಸುತ್ತಿಲ್ಲ, ಬದಲಿಗೆ ಮುನ್ನಡೆಸುತ್ತಿದೆ. 2014 ರಲ್ಲಿ ಸಾಧಾರಣ ವಿದೇಶಿ ನೇರಹೂಡಿಕೆ (FDI) ಒಳಹರಿವಿನಿಂದ, ಭಾರತವು ಏಪ್ರಿಲ್ 2020ರಿಂದ ಸೆಪ್ಟೆಂಬರ್ 2024 ರ ಅವಧಿಯಲ್ಲಿ ನವೀಕರಿಸಬಹುದಾದ ಇಂಧನ (RE) ಕ್ಷೇತ್ರದಲ್ಲಿ $19.98 ಬಿಲಿಯನ್ FDI ಅನ್ನು ಆಕರ್ಷಿಸಿದ್ದು, ಇಂದು ಭಾರತದಲ್ಲಿ ಅತಿಹೆಚ್ಚು FDI ಆಕರ್ಷಿಸುವ ಕ್ಷೇತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ.

ಪ್ರಸರಣ ಮೂಲ ಸೌಕರ್ಯ ಎಂಟನೆಯದಾಗಿ, ಪ್ರಸರಣ ಮೂಲ ಸೌಕರ್ಯವು ಪರಿವರ್ತನೆಯ ಬೆನ್ನೆಲುಬಾಗಿ ಉಳಿದಿದೆ. ಭಾರತವು ಹಸಿರು ಇಂಧನ ಕಾರಿಡಾರ್‌ಗಳು ಮತ್ತು 2030ರ ಪ್ರಸರಣ ಮಾರ್ಗಸೂಚಿಯಲ್ಲಿನ ಹೂಡಿಕೆಯು ನವೀಕರಿಸಬಹುದಾದ ಇಂಧನ ಯೋಜನೆಗಳು ಗ್ರಿಡ್‌ಗೆ ಸಮರ್ಥವಾಗಿ ಮತ್ತು ವಿಶ್ವಾಸಾರ್ಹವಾಗಿ ಸಂಪರ್ಕಗೊಳ್ಳಲು ಸಾಧ್ಯವಾಗಿಸುತ್ತದೆ.

ಕಡಲಾಚೆಯ ಗಾಳಿ ವಿದ್ಯುತ್ ಒಂಬತ್ತನೇಯದಾಗಿ, ಭಾರತದ ಕರಾವಳಿ ಪ್ರದೇಶಗಳ ಅಪಾರ ಸಾಮರ್ಥ್ಯವನ್ನೂ ಸರ್ಕಾರ ಬಳಸಿಕೊಳ್ಳುತ್ತಿದೆ. ಕಡಲಾಚೆಯ ಗಾಳಿ ವಿದ್ಯುತ್ (Offshore wind) ಯೋಜನೆಗಳು, 2030ರ ವೇಳೆಗೆ 37 GW ಟೆಂಡರ್‌ಗಳನ್ನು ಯೋಜಿಸಿದ್ದು, ಕಾರ್ಯಸಾಧ್ಯತಾ ಅಂತರನಿಧಿ (viability gap funding) ಮತ್ತು ಸದೃಢ ಸ್ಥಳ ಸಮೀಕ್ಷೆಗಳಿಂದ ಬೆಂಬಲಿತವಾಗಿವೆ.

24/7 ಸ್ವಚ್ಛ ಇಂಧನ ಪರಿಹಾರ ನಿರ್ಮಾಣ ಹತ್ತನೆಯದಾಗಿ, ಮಧ್ಯಂತರ ವಿದ್ಯುತ್‌ ಪೂರೈಕೆಯ ಸವಾಲನ್ನು ಅರಿತುಕೊಂಡು, ಭಾರತವು ಹೈಬ್ರಿಡ್‌ ಮತ್ತು ದಿನದ 24 ಗಂಟೆಯೂ ವಿದ್ಯುತ್‌ ಪೂರೈಸುವ ನೀತಿಯೊಂದಿಗೆ ನಿರ್ಣಾಯಕ ಹೆಜ್ಜೆ ಇಟ್ಟಿದೆ. ಗಾಳಿ-ಸೌರಹೈಬ್ರಿಡ್ ಗಳನ್ನು ಮತ್ತು ದೃಢ ಹಾಗೂ ವಿತರಿಸಬಹುದಾದ ನವೀಕರಿಸಬಹುದಾದ ಇಂಧನವನ್ನು ಉತ್ತೇಜಿಸುವ ಮೂಲಕ, ಭಾರತವು 24/7 ಸ್ವಚ್ಛ ಇಂಧನ ಪರಿಹಾರಗಳನ್ನು ನಿರ್ಮಿಸುತ್ತಿದೆ.

ಪಿಎಂ ಜನಮನ್ ಮೂಲಕ ವಿದ್ಯುತ್‌ ಹನ್ನೊಂದನೆಯದಾಗಿ, ಬುಡಕಟ್ಟು ಮತ್ತು ದೂರದ ಪ್ರದೇಶಗಳಲ್ಲಿ, ಹಿಂದೆ ಎಂದಿಗೂ ವಿದ್ಯುತ್ ಇರದಿದ್ದ ಮನೆಗಳಿಗೆ ನಾವು ವಿದ್ಯುತ್‌ ತಲುಪಿಸುತ್ತಿದ್ದೇವೆ. ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಿಗಾಗಿ ವಿಶೇಷ ಸೌರಕಾರ್ಯಕ್ರಮಗಳ ಮೂಲಕ ಮತ್ತು ಪಿಎಂ ಜನಮನ್ (PM JANMAN) ಮಿಷಶ್‌ ಹಾಗೂ ಸಿಪಿಎಸ್ ಯು ಯೋಜನೆ ಹಂತ-II (CPSU Scheme Phase-II) ಅಡಿಯಲ್ಲಿ, ಸಾವಿರಾರು ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ.

ಒಂದು ಸೂರ್ಯ ಒಂದು ಜಗತ್ತು ಒಂದು ಗ್ರಿಡ್ ಭಾರತ ಕೇವಲ ದೇಶದಲ್ಲಿ ಮಾತ್ರ ಪ್ರಗತಿ ಸಾಧಿಸುತ್ತಿಲ್ಲ. ನಾವು ಜಾಗತಿಕವಾಗಿ ಮುನ್ನಡೆಸುತ್ತಿದ್ದೇವೆ. ಪ್ರಧಾನಮಂತ್ರಿ ಮೋದಿಯವರು ಪ್ರಾರಂಭಿಸಿದ ಅಂತಾರಾಷ್ಟ್ರೀಯ ಸೌರ ಒಕ್ಕೂಟವು 100ಕ್ಕೂ ಹೆಚ್ಚು ದೇಶಗಳನ್ನು ಒಟ್ಟು ಗೂಡಿಸಿದೆ. ''''ಒಂದು ಸೂರ್ಯ ಒಂದು ಜಗತ್ತು ಒಂದು ಗ್ರಿಡ್'''' ಎಂಬ ದೂರ ದೃಷ್ಟಿಯು ಸೌರಶಕ್ತಿಯು ರಾಷ್ಟ್ರಗಳನ್ನು ಹೇಗೆ ಒಂದು ಗೂಡಿಸಬಹುದು ಎಂದು ಜಗತ್ತಿಗೆ ತೋರಿಸುತ್ತಿದೆ. ಇದು ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಮೊದಲ ಅಂತಾರಾಷ್ಟ್ರೀಯ ಮತ್ತು ಅಂತರ-ಸರ್ಕಾರಗಳ ಸಂಸ್ಥೆಯಾಗಿದೆ.

ಇತ್ತೀಚೆಗೆ 2025ರ ಮೇ 24ರಂದು ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ ಸಭೆಯಲ್ಲಿ ಮೋದಿ ಅವರು ಶುದ್ಧ ಇಂಧನ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕುರಿತು ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ವಿವರವಾದ ಚರ್ಚೆ ನಡೆಸಿದರು. ಭವಿಷ್ಯದ ಸಿದ್ಧ ಹಸಿರು ಕಾರ್ಯಪಡೆಯನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿರುವ ಪ್ರಮುಖ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಾಗಿ ಸೂರ್ಯಮಿತ್ರ, ವಾಯುಮಿತ್ರ ಮತ್ತು ಜಲ್ಊರ್ಜಾಮಿತ್ರ ದಂತಹ ಉಪಕ್ರಮಗಳನ್ನು ಎತ್ತಿತೋರಿಸಲಾಯಿತು. ನರೇಂದ್ರಮೋದಿ ಅವರು 2030ರ ವೇಳೆಗೆ 500 ಗಿಗಾ ವ್ಯಾಟ್‌ ಪಳೆಯುಳಿಕೆ ರಹಿತ ವಿದ್ಯುತ್‌ ಸಾಮರ್ಥ್ಯವನ್ನು ಗುರಿಯಾಗಿಟ್ಟು ಕೊಂಡಿದ್ದಾರೆ. ಸದ್ಯಕ್ಕೆ, ನಾವು ಈಗಾಗಲೇ 228 ಗಿಗಾವ್ಯಾಟ್ ಗಳನ್ನುಹೊಂದಿದ್ದೇವೆ. ಮತ್ತೊಂದು 176 ಗಿಗಾ ವ್ಯಾಟ್ ಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ ಮತ್ತು 72 ಗಿಗಾ ವ್ಯಾಟ್‌ಗಳ ಟೆಂಡರ್‌ ಪ್ರಕ್ರಿಯೆಯಲ್ಲಿದೆ.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ