ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇನ್ನು ಮುಂದೆ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ ಬಳಕೆ ಕಡ್ಡಾಯ

ಸಾರಾಂಶ

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ ಬಳಕೆ ಮಾಡಬೇಕು ಎಂದು ಕೆಪಿಎಸ್‌ಸಿ ತಿಳಿಸಿದೆ

ಬೆಂಗಳೂರು : ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇನ್ನು ಮುಂದೆ ಕಡ್ಡಾಯವಾಗಿ ನೀಲಿ ಬಣ್ಣದ ಬಾಲ್ ಪಾಯಿಂಟ್ ಪೆನ್ ಬಳಕೆ ಮಾಡಬೇಕು ಎಂದು ಕೆಪಿಎಸ್‌ಸಿ ತಿಳಿಸಿದೆ.

ಈವರೆಗಿನ ಪರೀಕ್ಷೆಗಳಲ್ಲಿ ಕಪ್ಪು ಬಣ್ಣದ ಬಾಲ್ ಪಾಯಿಂಟ್ ಪೆನ್‌ನಿಂದ ಪರೀಕ್ಷೆ ಬರೆಯಬೇಕು ಎಂದು ಅಭ್ಯರ್ಥಿಗಳಿಗೆ ಸೂಚಿಸಲಾಗುತ್ತಿತ್ತು. ಆದರೀಗ ಸೂಚನೆಯಲ್ಲಿ ಮಾರ್ಪಾಡು ಮಾಡಿ ಫೆ.16ರಿಂದ ಕೆಪಿಎಸ್‌ಸಿ ನಡೆಸುವ ಎಲ್ಲಾ ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ನೀಲಿ ಬಣ್ಣದ ಪೆನ್ ಮಾತ್ರ ಬಳಸಬೇಕು ಎಂದು ಕೆಪಿಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಾಮಾನ್ಯವಾಗಿ ಬಹುತೇಕ ಎಲ್ಲೆಡೆ ನೀಲಿ ಪೆನ್ ಬಳಕೆಯಲ್ಲಿದೆ. ಆದರೆ, ಕೆಪಿಎಸ್‌ಸಿ ಪರೀಕ್ಷೆಗೆ ಮಾತ್ರ ಕಪ್ಪು ಬಣ್ಣದ ಪೆನ್ ಬಳಕೆಗೆ ನಿರ್ದೇಶನ ನೀಡುವುದರಿಂದ ಅಭ್ಯರ್ಥಿಗಳು ಅನಗತ್ಯವಾಗಿ ಗೊಂದಲಕ್ಕೆ ಒಳಗಾಗುತ್ತಾರೆ. ಅಲ್ಲದೇ, ಸೂಚನೆಯ ಹೊರತಾಗಿಯುವ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ನೀಲಿ ಸೇರಿದಂತೆ ಕಪ್ಪು ಹೊರತಾದ ಪೆನ್ ಬಳಸುತ್ತಿದ್ದಾರೆ. ಹೀಗಾಗಿ, ಆಯೋಗದ ಸದಸ್ಯರು ‘ಸಾಮಾನ್ಯವಾಗಿ ಬಳಕೆ’ಯಲ್ಲಿರುವ ನೀಲಿ ಪೆನ್ ಬಳಕೆಗೆ ಸಲಹೆ ನೀಡಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬಂದಿದೆ.

Share this article