ಅಮೆರಿಕದ ಸ್ಯಾನ್‌ ಓಸೆ ನಗರದಲ್ಲಿ ಜು.3 ರಿಂದ 5 ರ ವರೆಗೆ ವಿಶ್ವ ಒಕ್ಕಲಿಗರ ಸಮ್ಮೇಳನ

Published : Mar 24, 2025, 10:15 AM IST
Nirmalanandanatha Swamiji

ಸಾರಾಂಶ

ಅಮೆರಿಕದ ಸ್ಯಾನ್‌ ಓಸೆ ನಗರದಲ್ಲಿ ಜು.3 ರಿಂದ 5 ರ ವರೆಗೆ ನಡೆಯಲಿರುವ 18 ನೇ ವಿಶ್ವ ಒಕ್ಕಲಿಗರ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿವೆ.

ಬೆಂಗಳೂರು : ಅಮೆರಿಕದ ಸ್ಯಾನ್‌ ಓಸೆ ನಗರದಲ್ಲಿ ಜು.3 ರಿಂದ 5 ರ ವರೆಗೆ ನಡೆಯಲಿರುವ 18 ನೇ ವಿಶ್ವ ಒಕ್ಕಲಿಗರ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿವೆ.

ಅಮೆರಿಕ ಒಕ್ಕಲಿಗರ ಪರಿಷತ್ತಿನ ಪಶ್ಚಿಮ ಶಾಖೆ ಆಶ್ರಯದಲ್ಲಿ ಸಮ್ಮೇಳನ ನಡೆಯಲಿದ್ದು, ಜಗತ್ತಿನಾದ್ಯಂತ ವಿಸ್ತರಿಸಿರುವ ಒಕ್ಕಲಿಗ ಸಮುದಾಯ ಒಂದುಗೂಡಿಸುವ, ಸಂಸ್ಕೃತಿ ಪರಂಪರೆ ಸಾರುವ, ಉದ್ಯಮ ಅವಕಾಶಗಳ ವಿಸ್ತರಣೆಯ ಉದ್ದೇಶವನ್ನು ಸಮ್ಮೇಳನ ಹೊಂದಿದೆ.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಕರ್ನಾಟಕದಿಂದ 200ಕ್ಕೂ ಅಧಿಕ ಗಣ್ಯರು, ಉದ್ಯಮಿಗಳು, ರಾಜಕಾರಣಿಗಳು, ಕಲಾವಿದರು, ವಿವಿಧ ಕ್ಷೇತ್ರಗಳ ಸಾಧಕರು ಭಾಗವಹಿಸಲಿದ್ದಾರೆ. ಭಾರತ ಮತ್ತು ಅಮೆರಿಕ ದೇಶಗಳಷ್ಟೇ ಅಲ್ಲದೆ, ಯುರೋಪ್, ಆಸ್ಟ್ರೇಲಿಯ, ಕೆನಡಾ, ದುಬೈ ಹಾಗೂ ಇನ್ನಿತರ ಭಾಗಗಳಲ್ಲಿರುವ ಒಕ್ಕಲಿಗರು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ನಾಯಕತ್ವ ಕುರಿತು ಕಾರ್ಯಾಗಾರ, ಸಂಪರ್ಕ ವಿಸ್ತರಣೆಗೆ ಇರುವ ಅವಕಾಶ, ಉದ್ಯಮಿಗಳೊಂದಿಗೆ ಸಂವಾದ, ಕರ್ನಾಟಕ ದ ಫಸ್ಟ್ ಸರ್ಕಲ್‌ನಿಂದ ಚರ್ಚೆ, ಉದ್ಯಮ ವಿಸ್ತರಣೆಗೆ ಸರ್ಕಾರದ ವಿವಿಧ ಯೋಜನೆಗಳ ಪರಿಚಯ ಮತ್ತು ಪ್ರಚಾರ, ಕವನ ವಾಚನ ಮತ್ತು ಪುಸ್ತಕ ಬಿಡುಗಡೆ, ಲೇಖಕರು, ಕವಿಗಳೊಂದಿಗೆ ಸಂವಾದ, ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗೋಷ್ಠಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಆಸಕ್ತರು ಹೆಚ್ಚಿನ ವಿವರಗಳಿಗೆ https://myvpa.org/2025 ಹಾಗೂ ಮೊ: 9980765001 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

PREV

Recommended Stories

ಕೆಆರ್‌ಎಸ್‌ ಕಟ್ಟಿಸಿದ್ದೇ ಟಿಪ್ಪು ಅಂತ ಹೇಳಿಲ್ಲ : ಮಹದೇವಪ್ಪ
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಪಾವತಿ ಅಸಾಧ್ಯ : ಸಿಎಂ