ಭಾರೀ ಬಿರುಗಾಳಿಗೆ ವೀಳ್ಯದೆಲೆ ತೋಟ ಸಂಪೂರ್ಣ ನಾಶ: ಅಪಾರ ನಷ್ಟ

KannadaprabhaNewsNetwork |  
Published : May 08, 2024, 01:05 AM IST
7ಕೆಎಂಎನ್‌ಡಿ-15ಹಲಗೂರು ಸಮೀಪದ ಬಾಳೆಹೊನ್ನಿಗ ಗ್ರಾಮದಲ್ಲಿ ಭಾರೀ ಗಾಳಿ-ಮಳೆಗೆ ಹಾನಿಗೊಳಗಾದ ವೀಳ್ಯ ದೆಲೆ ತೋಟವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ವೀಕ್ಷಿಸಿದರು. | Kannada Prabha

ಸಾರಾಂಶ

ಮಳೆ ಕೊರತೆ ಎದುರಿಸುತ್ತಿರುವ ದಿನಗಳಲ್ಲಿ ಮಳೆ ಆಗಮಿಸಿದ ಸಂತಸ ಒಂದೆಡೆಯಾದರೆ, ಅದು ಉಂಟುಮಾಡಿದ ನಷ್ಟದ ಸಂಕಷ್ಟ ಮತ್ತೊಂದೆಡೆಯಾಗಿದೆ. ಬಾಳೆಹೊನ್ನಿಗ ಗ್ರಾಮದ ಹಲವಾರು ಕುಟುಂಬಗಳಿಗೆ ಜೀವನಾಧಾರವಾಗಿದ್ದ ವೀಳ್ಯ ದೆಲೆ ತೋಟ ನಾಶವಾಗಿದೆ. ಅವರ ಬದುಕು ಬೀದಿಗೆ ಬಿದ್ದಿದೆ. ಕೆಲವು ಕುಟುಂಬದ ವಾಸದ ಮನೆಯ ಮೇಲ್ಚಾವಣಿಯ ಸೀಟುಗಳು ಹಾರಿ ಹೋಗಿ ಮನೆಯಲ್ಲಿದ್ದ ದವಸ ಧಾನ್ಯಗಳು ಸಾಮಗ್ರಿಗಳು ನಾಶವಾಗಿ ನಷ್ಟವಾಗಿರುತ್ತದೆ.

ಕನ್ನಡಪ್ರಭ ವಾರ್ತೆ ಹಲಗೂರು

ಹಲಗೂರು ಹೋಬಳಿಯ ವ್ಯಾಪ್ತಿಯಲ್ಲಿ ಭಾರೀ ಗಾಳಿ ಮಳೆಗೆ ಹಾನಿಗೊಳಗಾಗಿದ್ದ ಬಾಳೆಹೊನ್ನಿಗ ಗ್ರಾಮದ ಹಲವಾರು ಕುಟುಂಬಗಳ ವಿಳ್ಳೇದೆಲೆ ತೋಟ ಹಾಗೂ ಒಂದು ವಾಸದ ಮನೆಯನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪರಿಶೀಲನೆ ನಡೆಸಿ, ಹಾನಿಗೊಳಗಾದವರಿಂದ ಮಾಹಿತಿ ಪಡೆದುಕೊಂಡರು.

ನಂತರ ಅವರು ಮಾತನಾಡಿ, ಮಳೆ ಕೊರತೆ ಎದುರಿಸುತ್ತಿರುವ ದಿನಗಳಲ್ಲಿ ಮಳೆ ಆಗಮಿಸಿದ ಸಂತಸ ಒಂದೆಡೆಯಾದರೆ, ಅದು ಉಂಟುಮಾಡಿದ ನಷ್ಟದ ಸಂಕಷ್ಟ ಮತ್ತೊಂದೆಡೆಯಾಗಿದೆ. ಬಾಳೆಹೊನ್ನಿಗ ಗ್ರಾಮದ ಹಲವಾರು ಕುಟುಂಬಗಳಿಗೆ ಜೀವನಾಧಾರವಾಗಿದ್ದ ವೀಳ್ಯ ದೆಲೆ ತೋಟ ನಾಶವಾಗಿದೆ. ಅವರ ಬದುಕು ಬೀದಿಗೆ ಬಿದ್ದಿದೆ. ಕೆಲವು ಕುಟುಂಬದ ವಾಸದ ಮನೆಯ ಮೇಲ್ಚಾವಣಿಯ ಸೀಟುಗಳು ಹಾರಿ ಹೋಗಿ ಮನೆಯಲ್ಲಿದ್ದ ದವಸ ಧಾನ್ಯಗಳು ಸಾಮಗ್ರಿಗಳು ನಾಶವಾಗಿ ನಷ್ಟವಾಗಿರುತ್ತದೆ. ಬಡ ಬೆಳೆಗಾರರು ಬೆಳೆ ಕಳೆದು ಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ನಷ್ಟಕ್ಕೊಳಗಾದ ಬೆಳೆಗಾರರಿಗೆ ಸರ್ಕಾರದಿಂದ ಸಾಂದರ್ಭಿಕ ಪರಿಹಾರದ ಜೊತೆಗೆ ನಷ್ಟವಾಗಿರುವ ಬೆಳೆಗೆ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಣ್ಣ, ಯೂತ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೆ.ಕೃಷ್ಣಮೂರ್ತಿ, ಎಂ. ಡಿ.ಸಿ.ಸಿ .ಬ್ಯಾಂಕಿನ ನಿರ್ದೇಶಕರಾದ ಎಚ್.ವಿ.ಅಶ್ವಿನ್ ಕುಮಾರ್, ಮುಖಂಡರಾದ ಸಾಗ್ಯ ಕೆಂಪಯ್ಯ, ಕುಂತೂರು ಗೋಪಾಲ್, ಎಚ್. ವಿ.ರಾಜು, ಶಿವಸ್ವಾಮಿ ಚಂದ್ರಕುಮಾರ್, ಕುಮಾರ್, ಪ್ರಕಾಶ್, ಕೃಷ್ಣ, ಮಹೇಶ್ ಕುಮಾರ್, ಮರಿಸ್ವಾಮಿ, ಜೀವನ್ ಕುಮಾರ್, ರವೀಶ್ ಸೇರಿದಂತೆ ಹಲವರು ಇದ್ದರು.

ಶಾಸಕರಿಂದ 1 ಲಕ್ಷ ರು. ಪರಿಹಾರ

ಮಂಡ್ಯ:ಭಾರೀ ಗಾಳಿ-ಮಳೆಗೆ ಕಾರೊಂದರ ಮೇಲೆ ಮರ ಬಿದ್ದು ಮೃತಪಟ್ಟ ಯುವಕನ ಕುಟುಂಬಕ್ಕೆ ಶಾಸಕ ಪಿ.ರವಿಕುಮಾರ್‌ ಮಂಗಳವಾರ ಸಾಂತ್ವನ ಹೇಳಿ ವೈಯಕ್ತಿಕವಾಗಿ 1 ಲಕ್ಷ ರು. ಪರಿಹಾರ ನೀಡಿದರು.

ಮರಬಿದ್ದು ಯುವಕ ಸಾವನ್ನಪ್ಪಿರುವ ವಿಷಯ ತಿಳಿದು ಮಿಮ್ಸ್‌ ಶವಾಗಾರದ ಬಳಿ ಆಗಮಿಸಿದ ಶಾಸಕರು ಕುಟುಂಬದ ವರ್ಗದವರಿಗೆ ಸಮಾಧಾನ ಹೇಳಿ ಸ್ಥಳದಲ್ಲೇ ಪರಿಹಾರ ಹಣ ವಿತರಿಸಿದರು.

PREV

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ