ಕಡೂರಿನಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಯಶಸ್ವಿ: ಶಂಕರ ರಾಮಲಿಂಗಯ್ಯ

KannadaprabhaNewsNetwork |  
Published : Jan 01, 2025, 12:00 AM IST
31ೆಕೆಿಕೆಡಿಯು1. | Kannada Prabha

ಸಾರಾಂಶ

ಕಡೂರು, ಕರ್ನಾಟಕ ಭೀಮ್ ಸೇನೆಯ ರಾಜ್ಯ ಘಟಕ ಹಾಗೂ ಕಡೂರು ತಾಲೂಕು ಘಟಕಗಳಿಂದ ಕೋರೆಗಾಂವ್ ವಿಜಯೋತ್ಸವ ಹಾಗೂ ತಾಲೂಕು ಘಟಕದ ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ಕರ್ನಾಟಕ ಭೀಮ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ ರಾಮಲಿಂಗಯ್ಯ ತಿಳಿಸಿದರು.

ರಾಜ್ಯ ಸಮಿತಿ ಕಾರ್ಯದರ್ಶಿಯಾಗಿ ಕುಂಕಾನಾಡು ಮಂಜುನಾಥ್ ನೇಮಕ

ಕನ್ನಡಪ್ರಭ ವಾರ್ತೆ,ಕಡೂರು

ಕರ್ನಾಟಕ ಭೀಮ್ ಸೇನೆಯ ರಾಜ್ಯ ಘಟಕ ಹಾಗೂ ಕಡೂರು ತಾಲೂಕು ಘಟಕಗಳಿಂದ ಕೋರೆಗಾಂವ್ ವಿಜಯೋತ್ಸವ ಹಾಗೂ ತಾಲೂಕು ಘಟಕದ ಪದಗ್ರಹಣ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದು ಕರ್ನಾಟಕ ಭೀಮ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಶಂಕರ ರಾಮಲಿಂಗಯ್ಯ ತಿಳಿಸಿದರು.ಮಂಗಳವಾರ ಪಟ್ಟಣದ ಆದಿತ್ಯ ಕಂಫರ್ಟ್ ನಲ್ಲಿ 207 ನೇ ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಪದಗ್ರಹಣ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 1818 ಜನವರಿ 1 ರಂದು ಪೇಶ್ವೆಗಳ ನಡುವೆ ಕೋರೆಗಾಂವ್ ಭೀಮಾದಲ್ಲಿ ನಡೆದ ಯುದ್ಧವನ್ನು ಅಂಬೇಡ್ಕರ್ ಅನುಯಾಯಿಗಳು ಪೇಶ್ವೆಗಳ ಅನ್ಯಾಯ, ಅಹಿಂಸೆ ವಿರುದ್ಧದ ವಿಜಯವೆಂದು ಪರಿಗಣಿಸಿ ಅಂದಿನಿಂದ ಕೋರೆಗಾಂವ್ ಭೀಮ ವಿಜಯೋತ್ಸವ ಆಚರಣೆ ಮಾಡಲಾಗುತ್ತಿದೆ ಎಂದರು. ನಮ್ಮ ಕರ್ನಾಟಕ ಭೀಮ್ ಸೇನೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಕುಂಕಾನಾಡು ಮಂಜುನಾಥ್ ಅವರ ಸಂಘಟನೆ ಮತ್ತು ಸೇವೆ ಯನ್ನು ಪರಿಗಣಿಸಿ ಅವರನ್ನು ರಾಜ್ಯ ಸಮಿತಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ಘೋಷಿಸಿದರು.ರಾಜ್ಯ ಸಮಿತಿ ಕಾರ್ಯದರ್ಶಿ ಪರಿಸರ ಪ್ರೇಮಿ ದೇವಿಕುಮಾರ್ ಮಾತನಾಡಿ, ನಮ್ಮ ಸಂಘಟನೆಯಲ್ಲಿ ಯಾವುದೇ ಜಾತಿ, ಧರ್ಮವಿಲ್ಲದೆ ಎಲ್ಲರ ಸದಸ್ಯತ್ವ ಮಾಡಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ಆದರ್ಶ, ತತ್ವಗಳನ್ನು ಅಳವಡಿಸಿ ಕೊಂಡು ಸಮಾಜಮುಖಿಯಾಗಿ ಕೆಲಸ ಮಾಡಲು ರಾಜ್ಯದ 31 ಜಿಲ್ಲೆಗಳಲ್ಲಿಯೂ ಸಂಘಟನೆ ನಡೆಯುತ್ತಿದೆ ಎಂದರು.ರಾಜ್ಯ ಘಟಕದ ನೂತನ ಕಾರ್ಯದರ್ಶಿ ಕುಂಕಾನಾಡು ಮಂಜುನಾಥ್ ಮಾತನಾಡಿ, ಕರ್ನಾಟಕ ಭೀಮಾ ಸೇನೆ ಸಂಘಟನೆಗೆ ಒತ್ತು ನೀಡಿದ್ದು ಜಾತಿ ಬೇಧ ಭಾವಗಳಿಲ್ಲದೇ ಎಲ್ಲ ವರ್ಗದವರನ್ನು ಸೇರ್ಪಡೆಗೊಳಿಸಿ ಸಮ ಸಮಾಜದ ಪರಿಕಲ್ಪನೆ ಸಾಕಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಹಾಗಾಗಿ ಇದೊಂದು ದಲಿತ ಸಂಘಟನೆ ಎಂದು ಯಾರು ಭಾವಿಸ ಬಾರದು ಅಂಬೇಡ್ಕರ್ ಅವರ ಅನುಯಾಯಿಗಳಿಗಾಗಿ ಸಂಘಟನೆ ಬೆಳೆಯುತ್ತಿದೆ. ರಾಜ್ಯ ಸಂಘ ನನ್ನನ್ನು ರಾಜ್ಯ ಸಮಿತಿಗೆ ಆಯ್ಕೆಮಾಡಿ ಕಾರ್ಯದರ್ಶಿ ಸ್ಥಾನ ನೀಡಿರುವುದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.ರಾಜ್ಯ ಸಮಿತಿ ಉಪಾಧ್ಯಕ್ಷ ಕುಮಾರ್, ಬೆಂಗಳೂರು ಗ್ರಾ.ಜಿಲ್ಲಾಧ್ಯಕ್ಷ ಮಂಜುನಾಥ್, ತಮ್ಮಯ್ಯು ಎಂ.ಬಿ. ಮತ್ತಿತರರು ಇದ್ದರು. -- ಬಾಕ್ಸ್ --- ಕರ್ನಾಟಕ ಭೀಮ್ ಸೇನೆ ಕಡೂರು ತಾಲೂಕು ಘಟಕದ ನೂತನ ಅಧ್ಯಕ್ಷ ರಂಗನಾಥ್ ಅವರಿಗೆ ಪ್ರಮಾಣ ಪತ್ರ ನೀಡಲಾಯಿತು. ಉಪಾಧ್ಯಕ್ಷರಾಗಿ ಎಂ.ಆರ್.ನಾಗರಾಜು, ಕಾರ್ಯದರ್ಶಿ ಮರವಂಜಿ ಓಬಳಪ್ಪ, ಸದಸ್ಯರಾಗಿ ಎಂ. ನಾಗರಾಜು, ಅಂಜನ್‍ಕುಮಾರ್ ಮಲ್ಲಿದೇವಿಹಳ್ಳಿ, ಹೋಚಿಹಳ್ಳಿ ಮಾರುತಿ, ಎಂ.ಎಂ.ರಮೇಶ್ ಮತ್ತಿತರ ಆಯ್ಕೆಯನ್ನು ರಾಜ್ಯಾಧ್ಯಕ್ಷ ಶಂಕರ ರಾಮಲಿಂಗಯ್ಯ ಘೋಷಿಸಿದರು.31ಕೆಕೆಡಿಯು1.

ಕಡೂರು ತಾಲೂಕು ಕರ್ನಾಟಕ ಭೀಮ್ ಸೇನೆ ನೂತನ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಶಂಕರ ರಾಮಲಿಂಗಯ್ಯ ಘೋಷಿಸಿದರು. ರಾಜ್ಯ ಸಮಿತಿ ಕುಂಕಾನಾಡು ಮಂಜುನಾಥ್, ದೇವಿಕುಮಾರ್,ಕುಮಾರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ