ಭಗವಾನ್ ಶ್ರೀ ಸತ್ಯ ಸಾಯಿಬಾಬಾರವರ ಜನ್ಮಶತಮಾನೋತ್ಸವ

KannadaprabhaNewsNetwork |  
Published : Dec 07, 2025, 02:30 AM IST
ಭದ್ರಾವತಿ ಭದ್ರಾವತಿ : ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಪ್ರಶಾಂತಿ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಸೇವಾ ಕಾರ್ಯಗಳೊಂದಿಗೆ ಎರುಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮಶತಮಾನೋತ್ಸವಕ್ಕೆ ಶನಿವಾರ ಬೆಳಿಗ್ಗೆ ಅಮೇರಿಕಾದಲ್ಲಿರುವ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ದಂತ ವೈದ್ಯ ಡಾ. ರವಿ ದಬೀರ್ ಧ್ವಜಾರೋಹಣದೊಂದಿಗೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಹಾಗು ಪೌರಕಾರ್ಮಿಕರಿಗೆ ವಸ್ತ್ರಗಳನ್ನು ವಿತರಿಸಿದರು. | Kannada Prabha

ಸಾರಾಂಶ

ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮಶತಮಾನೋತ್ಸವಕ್ಕೆ ಶನಿವಾರ ಬೆಳಿಗ್ಗೆ ಅಮೇರಿಕಾದಲ್ಲಿರುವ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ದಂತ ವೈದ್ಯ ಡಾ. ರವಿ ದಬೀರ್ ಧ್ವಜಾರೋಹಣದೊಂದಿಗೆ ಚಾಲನೆ ನೀಡಿ ವಿದ್ಯಾರ್ಥಿಗಳಿಗೆ ಹಾಗು ಪೌರಕಾರ್ಮಿಕರಿಗೆ ವಸ್ತ್ರಗಳನ್ನು ವಿತರಿಸಿದರು.

ಕನ್ನಡಪ್ರಭ ವಾರ್ತೆ ಭದ್ರಾವತಿ

ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಸಮಿತಿ, ಪ್ರಶಾಂತಿ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಸೇವಾ ಕಾರ್ಯಗಳೊಂದಿಗೆ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಭಗವಾನ್ ಶ್ರೀ ಸತ್ಯ ಸಾಯಿ ಬಾಬಾರವರ ಜನ್ಮಶತಮಾನೋತ್ಸವಕ್ಕೆ ಶನಿವಾರ ಬೆಳಿಗ್ಗೆ ಅಮೇರಿಕಾದಲ್ಲಿರುವ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ದಂತ ವೈದ್ಯ ಡಾ. ರವಿ ದಬೀರ್ ಧ್ವಜಾರೋಹಣದೊಂದಿಗೆ ಚಾಲನೆ ನೀಡಿದರು.

ನಂತರ ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ. ರವಿ ದಬೀರ್-ಹರೀಣಿ ದಂಪತಿ ಸುಮಾರು ೪೦೦ ಮಂದಿ ಪೌರಕಾರ್ಮಿಕರಿಗೆ, ೧೦೦ ವಿಕಲಚೇತನ ಸರ್ಕಾರಿ ಶಾಲೆ ಮಕ್ಕಳಿಗೆ, ಪ್ರಶಾಂತಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ವಿಭಾಗದ ಎಲ್‌ಕೆಜಿ-ಯುಕೆಜಿ ಹಾಗೂ ೧ ರಿಂದ ೫ನೇ ತರಗತಿವರೆಗಿನ ಸುಮಾರು ೨೭೪ ಮಕ್ಕಳಿಗೆ ಹಾಗೂ ಶಿವಮೊಗ್ಗ ಶ್ರೀ ಆನಂದ ಸಾಯಿ ಶಿಕ್ಷಣ ಸಂಸ್ಥೆಯ ೨೫ ಮಂದಿ ಶಾಲಾ ಸಿಬ್ಬಂದಿ ವರ್ಗದವರಿಗೆ ವಸ್ತ್ರ ವಿತರಣೆ ಮಾಡಲಾಯಿತು. ಅಲ್ಲದೆ ಸುಮಾರು ೩೦ ಮಂದಿ ನಿರ್ಗತಿಕರಿಗೆ ಕಂಬಳಿ ವಿತರಣೆ ಮಾಡಲಾಯಿತು. ಈ ನಡುವೆ ೨೭ ಮಂದಿ ರಕ್ತದಾನ ನೆರವೇರಿಸಿದರು. ಮಧ್ಯಾಹ್ನ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.

ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ(ಸೇವೆ) ಡಾ. ಡಿ. ಪ್ರಭಾಕರ ಬೀರಯ್ಯ, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕಿ(ಶಿಕ್ಷಣ) ಕೆ. ಸೌಮ್ಯ ರೂಪ, ಈಶ್ವರಮ್ಮ ಆಂಗ್ಲ ಪ್ರೌಢಶಾಲೆ ಮತ್ತು ಪ್ರಶಾಂತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ ಪ್ರಾಂಶುಪಾಲ ಎಸ್.ಎನ್ ಕೃಷ್ಣ, ಉಪ ಪ್ರಾಂಶುಪಾಲ ಎ.ಎನ್ ಜಯಕುಮಾರ್, ಕನ್ನಡ ಮಾಧ್ಯಮ ಮುಖ್ಯೋಪಾಧ್ಯಾಯ ಎಚ್.ಪಿ ಪ್ರಸನ್ನ ಮತ್ತು ಪ್ರಶಾಂತಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಟಿ.ವಿ ಸುಜಾತ, ಶ್ರೀ ಸತ್ಯ ಸಾಯಿ ಸೇವಾ ಸಮಿತಿ ಸಂಚಾಲಕರಾದ ಜೆ.ಪಿ ಪರಮೇಶ್ವರಪ್ಪ, ಶೀಲಮ್ಮ, ಪ್ರಾಂಶುಪಾಲರಾದ ಮೃತ್ಯುಂಜಯ ಕಾನಿಟ್ಕರ್, ಎಸ್.ಎನ್ ಕೃಷ್ಣ, ಡಾ. ಎನ್. ಸತೀಶ್ಚಂದ್ರ, ದಿನೇಶ್, ಎಂ. ನಿತ್ಯಾ, ಪ್ರಮುಖರಾದ ಸುರೇಶ್(ಕೇರಳ ಸಮಾಜ), ಕೋಡ್ಲುಯಜ್ಞಯ್ಯ ಸೇರಿದಂತೆ ಸೇವಾಕರ್ತರು, ಶಾಲಾ ಶಿಕ್ಷಕ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆ ಕಳ್ಳತನಕ್ಕೆ ಕಳ್ಳರ ವಿಫಲಯತ್ನ
ಕೇಂದ್ರ ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭೇಟಿ