ಶಿಕ್ಷಕರ ಹಿತಾಸಕ್ತಿಗಾಗಿ ಮತಷ್ಟು ಶ್ರಮಿಸಲು ಹೊಸ ಉತ್ಸಾಹ ತುಂಬಿದೆ
ಹೊಸಪೇಟೆ: ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ.ನಮೋಶಿ ಐದನೇ ಬಾರಿಗೆ ಗೆಲವು ಸಾಧಿಸಿರುವ ಹಿನ್ನೆಲೆ ನಗರದ ಡಾ.ಪುನೀತ್ ರಾಜ್ಕುಮಾರ್ ವೃತ್ತದಲ್ಲಿ ಮಂಗಳವಾರ ರಾತ್ರಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ, ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂದೀಪ್ ಸಿಂಗ್ ಮಾತನಾಡಿ, ವಿದ್ಯಾವಂತ ಯುವ ಪೀಳಿಗೆ ಸಮಾಜಕ್ಕೆಉತ್ತಮ ವಿದ್ಯಾವಂತರನ್ನಾಗಿ ರೂಪಿಸುವ ಶಿಕ್ಷಕರು. ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಮೂಲಕ ತಮ್ಮ ಮತ ಚಲಾಯಿಸಿ ನ್ಯಾಯ ಯುತವಾದ ಫಲಿತಾಂಶ ನೀಡಿದ್ದಾರೆ. ಇದು ನಮ್ಮ ಮುಂಬರುವ ಚುನಾವಣೆಗೆ ದಿಕ್ಸೂಚಿಯಾಗಿದೆ. ಶಶೀಲ್ ಜಿ.ನಮೋಶಿ ಅವರನ್ನು ಗೆಲ್ಲಿಸುವ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ದಿಗೆ ಹಾಗೂ ಶಿಕ್ಷಕರ ಹಿತಾಸಕ್ತಿಗಾಗಿ ಮತಷ್ಟು ಶ್ರಮಿಸಲು ಹೊಸ ಉತ್ಸಾಹ ತುಂಬಿದೆ ಎಂದು ಹೇಳಿದರು.
ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಉಪಾಧ್ಯಕ್ಷ ಜಿವರತ್ನಂ, ಸದಸ್ಯರುಗಳಾದ ಆನಂದ್, ದ್ವಾರಕೀಶ, ರಮೇಶ್ ಗುಪ್ತ, ಸ್ಥಳೀಯ ಬಿಜೆಪಿ ಹಿರಿಯ ಮುಖಂಡ ಅಶೋಕ್ ಜೀರೇ, ಆರ್. ಕೊಟ್ರೇಶ್, ಬಿ.ಎಸ್. ಜಂಬಯ್ಯ ನಾಯಕ, ಅಯ್ಯಾಳಿ ತಿಮ್ಮಪ್ಪ, ರೇವಣಸಿದ್ದಪ್ಪ, ಮಂಡಲ ಅಧ್ಯಕ್ಷ ಶಂಕರ್ ಮೇಟಿ, ನಟರಾಜ, ಮಧುರ ಚನ್ನ ಶಾಸ್ತ್ರಿ, ರಾಘವೇಂದ್ರ, ರಾಜೇಶ್ ಬೋಜ, ಗುಜ್ಜಲ್ ಹನುಮೇಶ್, ಈಶ್ವರ್ ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.