ವಿದ್ಯಾರ್ಥಿಗಳ ಭವಿಷ್ಯದ ಜತೆ ಆಟ ಆಡಬೇಡಿ

KannadaprabhaNewsNetwork |  
Published : Oct 29, 2026, 02:30 AM IST
ಹೂವಿನಹಡಗಲಿ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥ ದರ್ಜೆ ಕಾಲೇಜಿನಲ್ಲಿ ಜರುಗಿದ ಪಠ್ಯೇತರ ಚಟುವಟಿಕೆಗಳಿಗೆ ಚಾಲನೆ ನೀಡಿದ ಶಾಸಕ ಕೃಷ್ಣನಾಯ್ಕ.ಹೂವಿನಹಡಗಲಿ ಎಸ್‌ಆರ್‌ಎಂಪಿಪಿ ಕಾಲೇಜಿನಲ್ಲಿ ಶೇ.90 ರಷ್ಟು ಕನ್ನಡ ವಿಷಯದಲ್ಲಿ ಅಂಕ ಗಳಿಸಿದ 7 ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕ ಸತೀಶ್‌ ಪಾಟೀಲ್‌  ತಲಾ 2 ಸಾವಿರ ನಗದು ಬಹುಮಾನ ನೀಡಿದರು.  | Kannada Prabha

ಸಾರಾಂಶ

ವಿದ್ಯಾರ್ಥಿಗಳು ಶಿಕ್ಷಣದ ಗುರಿ ಸಾಧನೆ ಮಾಡಲು ಪರಿಶ್ರಮದಿಂದ ಅಭ್ಯಾಸ ಮಾಡಬೇಕು, ಕನಿಷ್ಠ 5 ವರ್ಷ ಅಭ್ಯಾಸದಕ್ಕೆ ಮೀಸಲಿಟ್ಟರೇ ನೀವು ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.

ಹೂವಿನಹಡಗಲಿ: ಪಟ್ಟಣದಲ್ಲಿ ಎಸ್‌ಆರ್‌ಎಂಪಿಪಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಗ್ರಾಮೀಣ ಪ್ರದೇಶದಿಂದ ಬಡ ರೈತರ ಮಕ್ಕಳು ಉನ್ನತ ವಿದ್ಯಾಭ್ಯಾಸಕ್ಕೆ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಸಣ್ಣ ಪುಟ್ಟ ಸಮಸ್ಯೆ ಬದಿಗೊತ್ತಿ ಪ್ರಾಚಾರ್ಯರು, ಉಪನ್ಯಾಸಕರು ಗುಣಮಟ್ಟದ ಶಿಕ್ಷಣ ಕೊಡಿ, ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳ ಭವಿಷ್ಯದ ಜತೆಗೆ ಆಟ ಆಡಬೇಡಿ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ಎಸ್‌ಆರ್‌ಎಂಪಿಪಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ಪಠ್ಯೇತರ ಚಟುವಟಿಕೆ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿ ಉನ್ನತ ಶಿಕ್ಷಣ ಅರಸಿ ಬೇರೆ ಕಡೆಗೆ ಹೋಗದಂತೆ ಎಲ್ಲ ರೀತಿಯ ಹೊಸ ಕೋರ್ಸ್‌ ತರುತ್ತೇವೆ. ಜತೆಗೆ ₹60 ರಿಂದ 70 ಲಕ್ಷ ಅನುದಾನ ತಂದು ಅಭಿವೃದ್ಧಿ ಮಾಡುತ್ತಿದ್ದೇವೆ. ಇದು ಸದ್ಭಳಕೆ ಮಾಡಿಕೊಳ್ಳಿ ಉಪನ್ಯಾಸಕರು ಹೆಚ್ಚು ಆಸಕ್ತಿ ವಹಿಸಿ ಬೋಧನೆ ಮಾಡಬೇಕೆಂದು ಹೇಳಿದರು.

ವಿದ್ಯಾರ್ಥಿಗಳು ಶಿಕ್ಷಣದ ಗುರಿ ಸಾಧನೆ ಮಾಡಲು ಪರಿಶ್ರಮದಿಂದ ಅಭ್ಯಾಸ ಮಾಡಬೇಕು, ಕನಿಷ್ಠ 5 ವರ್ಷ ಅಭ್ಯಾಸದಕ್ಕೆ ಮೀಸಲಿಟ್ಟರೇ ನೀವು ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಅಭಿವೃದ್ಧಿ ಅಂದರೇ ಕೇವಲ ರಸ್ತೆ, ಚರಂಡಿ ಮಾಡುವುದು ಅಲ್ಲ, ಶೈಕ್ಷಣಿಕ ಕ್ರಾಂತಿ ಮಾಡಿದರೇ ಇದರಿಂದ ಕುಟುಂಬ ಅಭಿವೃದ್ಧಿ ಜತೆಗೆ ಇಡೀ ಸಮಾಜ ಮತ್ತು ಗ್ರಾಮ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎಂದರು.

ಇದೇ ವೇಳೆ ಕನ್ನಡ ವಿಷಯದಲ್ಲಿ ಶೇ. 90 ರಷ್ಟು ಅಂಕ ಗಳಿಸಿದ 7 ವಿದ್ಯಾರ್ಥಿಗಳಿಗೆ ಕನ್ನಡ ಪ್ರಾಧ್ಯಾಪಕ ಸತೀಶ ಪಾಟೀಲ್‌ ವೈಯಕ್ತಿಕವಾಗಿ ತಲಾ ₹2 ಸಾವಿರ ನಗದು ಬಹುಮಾನ ನೀಡಿ ವಿದ್ಯಾರ್ಥಿಗಳನ್ನು ಸತ್ಕರಿಸಿದರು. ಜತೆಗೆ ನಿವೃತ್ತ ಪ್ರಾಚಾರ್ಯ ಅಬ್ದುಲ್‌ ಮುತಾಲಿಬ್‌ ಠೇವಣಿ ಮಾಡಿದ್ದ ಹಣದಿಂದ ಬಂದ ಬಡ್ಡಿ ಹಣ ಶೈಕ್ಷಣಿಕ ಸಾಧನೆ ಮಾಡಿರುವ ಇಬ್ಬರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.

ಕಾಲೇಜು ಪ್ರಾಚಾರ್ಯ ವಿಜಯಕುಮಾರ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ, ಮಂಜುನಾಥ ಜೈನ್‌, ಎಚ್‌.ಡಿ.ಜಗ್ಗೀನ್‌, ಟಿ. ಮಹಾಂತೇಶ, ಜೆ.ಶಿವರಾಜ, ವಿಲ್ಸನ್‌ ಸ್ವಾಮಿ, ಮೀರಾಬಾಯಿ, ಸೌಮ್ಯ, ಕಾಲೇಜು ಉಪನ್ಯಾಸಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್