ಕನ್ನಡಪ್ರಭ ವಾರ್ತೆ ತಾಳಿಕೋಟೆ
ಪೆಟ್ರೋಲ್, ಡೀಸೆಲ್, ಹಾಲಿನ ದರದ ಜೊತೆಗೆ ಎಲ್ಲ ವಸ್ತುಗಳ ಬೆಲೆಯ ಮೇಲೆ ತೆರಿಗೆ ಹೆಚ್ಚಿಸಿರುವುದನ್ನು ಖಂಡಿಸಿ ತಾಳಿಕೋಟೆಯ ಭಾರತೀಯ ಜನತಾ ಪಕ್ಷದ ನಗರ ಘಟಕದ ವತಿಯಿಂದ ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು.ಪ್ರತಿಭಟನಾ ಸಮಯದಲ್ಲಿ ಕಾರ್ಯಕರ್ತರು ಟೈರ್ಗೆ ಬೆಂಕಿ ಹಚ್ಚಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಭಾವಚಿತ್ರ ದಹಿಸಿ, ಕೆಲ ಗಂಟೆಕಾಲ ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು, ದಿನಬಳಿಕೆ ವಸ್ತುಗಳ ಬೆಲೆ ರಾಜ್ಯ ಸರ್ಕಾರವು ಹೆಚ್ಚಿಸುತ್ತಾ ಸಾಗಿದೆ. ಬಡವರು ಜೀವನ ನಡೆಸುವುದೇ ದುಸ್ತರವಾಗಿದೆ. ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಒಂದೇ ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಎರಡು ಬಾರಿ ಹೆಚ್ಚಿಸಿದೆ. ಹಾಲಿನ ದರ ಹೆಚ್ಚಿಸಿ ರೈತರಿಗೆ ಪ್ರೋತ್ಸಾಹದ ಹೆಚ್ಚಿಸುತ್ತೇವೆಂದು ಹೇಳಿ ಕಳೆದ ೩ ತಿಂಗಳ ಹಿಂದೆ ಬೆಲೆ ಏರಿಸಿದ್ದಾರೆ. ಮತ್ತೆ ಈಗ ಹಾಲಿನ ದರವನ್ನು ಹೆಚ್ಚಿಸಿ ಗ್ಯಾರಂಟಿಗೆ ಹಣ ಹೊಂದಿಸುತ್ತಿದ್ದಾರೆ. ಮಹಿಳೆಯರಿಗೆ ಒಂದು ಕಡೆ ಕೊಟ್ಟಂತೆ ಮಾಡಿ ಪುರುಷರಿಂದ ಇನ್ನೊಂದು ಕೈಯಿಂದ ಕಸಿದುಕೊಳ್ಳುವಂತಹ ಕಾರ್ಯ ನಡೆಸಿದ್ದಾರೆ. ಮನೆಗಳಿಗೆ ವಿದ್ಯುತ್ ಉಚಿತವಾಗಿ ನೀಡುತ್ತಿದ್ದೇವೆಂದು ಹೇಳುವ ಮುಖ್ಯಮಂತ್ರಿಗಳು ವಿದ್ಯುತ್ ದರವನ್ನು ಹೆಚ್ಚಿಸಿ ಮತ್ತೊಂದು ಕಡೆಯಿಂದ ಜನರಿಂದ ವಸೂಲಿಗೆ ಇಳಿದು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಸುವರ್ಣಾ ಬಿರಾದಾರ, ಶಶಿಧರ ಡಿಸಲೆ, ಮಂಜು ಶೆಟ್ಟಿ, ಪ್ರಕಾಶ ಹಜೇರಿ, ಮಾನಸಿಂಗ್ ಕೊಕಟನೂರ, ಶರಣಗೌಡ ಗೊಟಗುಣಕಿ, ದ್ಯಾಮನಗೌಡ ಪಾಟೀಲ, ಸಂತೋಷ ಹಜೇರಿ, ಮಹಾಂತೇಶ ಮುರಾಳ, ಕಿರಣ ಬಡಿಗೇರ, ನಾಗರಾಜ ಬಳಿಗಾರ, ಮುದಕಪ್ಪ ಬಡಿಗೇರ, ಜಯಸಿಂಗ್ ಮೂಲಿಮನಿ, ಶಂಕರಯ್ಯ ಹಿರೇಮಠ, ರವಿ ಕಟ್ಟಿಮನಿ, ವಾಸುದೇವ ಹೆಬಸೂರ, ವಿಠ್ಠಲ ಮೋಹಿತೆ, ಪ್ರಕಾಶ ಪಾಟೀಲ, ರಾಘು ಮಾನೆ, ಪ್ರಭು ನಾಯಕ, ವಿರೇಶ ಸಾಸನೂರ, ರಾಘವೇಂದ್ರ ಬಿಜಾಪೂರ, ನಾಗರಾಜ ಬಳಿಗಾರ, ಮಂಜು ಮೈಲೇಶ್ವರ, ಮಂಜು ಬಡಿಗೇರ, ನದೀಂ ಕಡು, ಶ್ರೀಶೈಲ ದೊಡಮನಿ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಶೋಕ ರಾಠೋಡ, ಮಂಡಲ ಯುವ ಮೋರ್ಚಾ ಅಧ್ಯಕ್ಷ ಗಿರೀಶಗೌಡ ಪಾಟೀಲ, ರವೀಂದ್ರ ಬಿರಾದಾರ, ಸಂತೋಷ ಬಾದರಬಂಡಿ ಇತರರು ಇದ್ದರು.