ʻಬಿಜೆಪಿ ಸಂಕಲ್ಪ ಪತ್ರʼ ವಿಕಸಿತ ಭಾರತದ ನೀಲನಕ್ಷೆಯಾಗಿದೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

KannadaprabhaNewsNetwork |  
Published : Apr 15, 2024, 01:19 AM IST
ಕ್ಯಾಪ್ಟನ್‌ ಬ್ರಿಜೇಶ್‌ ಚೌಟ | Kannada Prabha

ಸಾರಾಂಶ

ದೂರದೃಷ್ಟಿಯ ʻಬಿಜೆಪಿ ಸಂಕಲ್ಪ ಪತ್ರʼ ಭಾರತದ ಪ್ರಗತಿಯ ಹಾದಿಯನ್ನು ಮತ್ತಷ್ಟು ವಿಸ್ತರಿಸುವ ಜೊತೆಗೆ ಫಾರ್ಮಾ ಹಬ್, ಎಲೆಕ್ಟ್ರಾನಿಕ್ ಹಬ್, ಆಟೋಮೊಬೈಲ್ ಹಬ್, ಸೆಮಿ ಕಂಡಕ್ಟರ್ ಹಬ್ ಹಾಗೂ ಗ್ರೀನ್‌ ಎನೆರ್ಜಿ ಹಬ್‌ನ ಜೊತೆಗೆ ಇತರೆ ಆವಿಷ್ಕಾರಗಳ ಕೇಂದ್ರವಾಗಲು ಅನುಕೂಲವಾಗಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಬಿಡುಗಡೆ ಮಾಡಿದ ಬಿಜೆಪಿಯ ಪ್ರಣಾಳಿಕೆ ʻಬಿಜೆಪಿ ಸಂಕಲ್ಪ ಪತ್ರʼ ಪ್ರಧಾನಿ ಅವರ ಸಾಮಾಜಿಕ ಕಳಕಳಿಯನ್ನು ಬಿಂಬಿಸುವ ಹಾಗೂ ʻಸಬ್‌ ಕಾ ಸಾತ್‌-ಸಬ್‌ ಕಾ ವಿಕಾಸ್ʼ ಎಂಬ ಅಭಿವೃದ್ಧಿಯೊಂದಿಗಿನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಪ್ರಣಾಳಿಕೆಯು ಕ್ಲಸ್ಟರ್‌ಗಳ ಮೂಲಕ ಆಹಾರ ಸಂಸ್ಕರಣಾ ಉದ್ಯಮಕ್ಕೆ ಉತ್ತೇಜನ, ಪ್ರವಾಸೋದ್ಯಮ ಕೇಂದ್ರೀಕೃತ ಅಭಿವೃದ್ಧಿಯು ಬೃಹತ್ ಆರ್ಥಿಕ ಬೆಳವಣಿಗೆಯ ಜೊತೆಗೆ ಮಹಿಳೆಯರಿಗೆ ಹೋಮ್ ಸ್ಟೇಗಳಿಗೆ ವಿಶೇಷ ಸಾಲ, ಮೀನುಗಾರಿಕೆ ವಲಯವನ್ನು ಬಲಪಡಿಸುವುದು ಹಾಗೂ ವಿಶೇಷ ಯೋಜನೆಗಳು ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಬಹುದೊಡ್ಡ ಕೊಡುಗೆ ನೀಡಲಿದೆ ಎಂದರು.

ರಾಮರಾಜ್ಯದ ಕಲ್ಪನೆಯನ್ನು ನೆನಪಿಸುವ ಸಂಕಲ್ಪ ಪತ್ರವಾಗಿದೆ, ಟ್ರಕ್ ಡ್ರೈವರ್‌ಗಳಿಗೆ ವಿಶ್ರಾಂತಿ ಗೃಹಗಳನ್ನು ರೂಪಿಸುವುದರಿಂದ ಭೂಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು, ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ತೃತೀಯ ಲಿಂಗಿ ಸಮುದಾಯ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರನ್ನು ಸೇರಿಸುವುದು, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ದಿವ್ಯಾಂಗ ಜನರಿಗೆ ಆದ್ಯತೆ, ಎಲ್ಲವೂ ಸಮಗ್ರ ಅಭಿವೃದ್ಧಿಯ ಸಮೃದ್ಧ ಭಾರತದ ಕಲ್ಪನೆಗೆ ಶಂಕುಸ್ಥಾಪನೆ ಮಾಡುವಂತಾಗಲಿದೆ. ಈ ಸಂಕಲ್ಪ ಪತ್ರ 100 ಕೋಟಿ ಭಾರತೀಯರ ಕನಸುಗಳನ್ನು ನನಸಾಗಿಸುವ ಮಾರ್ಗಸೂಚಿಯಾಗಿದೆ.

ದೂರದೃಷ್ಟಿಯ ʻಬಿಜೆಪಿ ಸಂಕಲ್ಪ ಪತ್ರʼ ಭಾರತದ ಪ್ರಗತಿಯ ಹಾದಿಯನ್ನು ಮತ್ತಷ್ಟು ವಿಸ್ತರಿಸುವ ಜೊತೆಗೆ ಫಾರ್ಮಾ ಹಬ್, ಎಲೆಕ್ಟ್ರಾನಿಕ್ ಹಬ್, ಆಟೋಮೊಬೈಲ್ ಹಬ್, ಸೆಮಿ ಕಂಡಕ್ಟರ್ ಹಬ್ ಹಾಗೂ ಗ್ರೀನ್‌ ಎನೆರ್ಜಿ ಹಬ್‌ನ ಜೊತೆಗೆ ಇತರೆ ಆವಿಷ್ಕಾರಗಳ ಕೇಂದ್ರವಾಗಲು ಅನುಕೂಲವಾಗಲಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು