ಹುಕ್ಕುಂದದಲ್ಲಿ ಪಂ.ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಕಾರ್ಯಕ್ರಮ
ರಾಷ್ಟ್ರ ಮೊದಲು ಎಂಬ ಧ್ಯೇಯದೊಂದಿಗೆ ಸ್ಥಾಪಿತಗೊಂಡಿರುವ ಏಕೈಕ ರಾಜಕೀಯ ಪಕ್ಷ ಭಾಜಪ. ರಾಷ್ಟ್ರೀಯ ಹಿತಚಿಂತನೆ ಹಾಗೂ ದೇಶಸೇವೆಯೇ, ಜನಾರ್ಧನ ಸೇವೆ ಎಂಬ ನಂಬಿಕೆ ಮತ್ತು ವಿಶ್ವಾಸದಡಿ ಸಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.ತಾಲೂಕಿನ ಹುಕ್ಕುಂದ ಗ್ರಾಮದಲ್ಲಿ ಪಂ.ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಗ್ರಾಮಾಂತರ ಮಂಡಳ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಕಾಂಗ್ರೆಸ್ ಸರ್ಕಾರದಿಂದ ಮುನ್ನೆಡೆದಿಲ್ಲ. ಸರ್ವರ ಹೊಂದಾಣಿಕೆ ಮೇರೆಗೆ ರಾಷ್ಟ್ರೀಯ ಸರ್ಕಾರವಾಗಿತ್ತು. ಅಲ್ಲದೇ ರಾಷ್ಟ್ರದ ಸಂಸ್ಕೃತಿ, ಪರಂಪರೆಯನ್ನು ಬೆಂಬಲಿಸುತ್ತಿರಲಿಲ್ಲ. ಬ್ರಿಟೀಷರ ಆಳ್ವಿಕೆಯಂತೆ ವರ್ತಿಸುತ್ತಿತ್ತು. ಇದನ್ನು ವಿರೋಧಿಸಿ ಸರ್ಕಾರದಲ್ಲಿ ಸಚಿವರಾಗಿದ್ಧ ಶ್ಯಾಮ್‌ಪ್ರಕಾಶ್ ಮುಖರ್ಜಿ ಹಾಗೂ ಅಂಬೇಡ್ಕರ್ ಸ್ಥಾನ ತ್ಯಜಿಸಿ ಹೊರಬಂದಿದ್ದರು ಎಂದರು.ದೇಶದ ಅವಿಭಾಜ್ಯ ಅಂಗವಾದ ಕಾಶ್ಮಿರಕ್ಕೆ ಪ್ರತ್ಯೇಕ ಪ್ರಧಾನಿ, ಕಾನೂನು ಹಾಗೂ ಧ್ವಜವನ್ನು ಕಾಂಗ್ರೆಸ್ ಆಡಳಿತದಲ್ಲಿ ನೀಡಿತ್ತು. ಇದನ್ನು ವಿರೋಧಿಸಿಕೊಂಡೇ ಬಂದಿದ್ಧ ಮುಖರ್ಜಿಯವರು ಒಂದೇ ದೇಶದಲ್ಲಿ ಎರಡು ಕಾನೂನು, ಧ್ವಜ ಖಂಡಿಸಿ ಜನಸಂಘ ಸ್ಥಾಪಿಸುವ ಮುಖೇನಾ ಪ್ರತಿಭಟನಾ ಹೋರಾಟ ರೂಪಿಸುತ್ತಿದ್ದರು ಎಂದು ಹೇಳಿದರು.ಅಂದಿನ ಕಾಲಘಟ್ಟದಲ್ಲಿ ದೇಶದ ಹಿತಕ್ಕಾಗಿ ಜನಸಂಘ ವಿಸರ್ಜಿಸಿ, ಜನತಾಪಾರ್ಟಿ ಎಂಬ ರಾಜಕೀಯ ಪಕ್ಷ ಕಟ್ಟಿ ಈ ಪಕ್ಷ ಜಿಲ್ಲೆಯಲ್ಲೂ ಶಕ್ತಿ ತುಂಬಿಸಿದೆ. ಆರಂಭದಲ್ಲಿ ಜನಸಂಘ ಜಿಲ್ಲೆಯ ನಗರಸಭೆ, ಪುರಸಭೆಗಳಲ್ಲಿ ನಾಲ್ಕೈದು ಸ್ಥಾನಗಳನ್ನು ಪಡೆದುಕೊಂಡಿತು. ಈ ಗೆಲುವಿನ ಹಿಂದೆ ಲಾಲ್ ಕೃಷ್ಣ ಅಡ್ವಾಣಿ ಜಿಲ್ಲೆಗೆ ಭೇಟಿ ನೀಡಿ ಸಭೆ ನಡೆಸಿದ ಪರಿಣಾಮವೂ ಒಂದು ಎಂದರು.ಪ್ರಶಿಕ್ಷಣ ಮಹಾಭಿಯಾನ ರಾಜ್ಯ ಸಂಚಾಲಕ ವಿಕಾಸ್ ಪುತ್ತೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾಜಪ ಇತರೆ ಎಲ್ಲಾ ಪಕ್ಷಕ್ಕಿಂತ ಭಿನ್ನ. ಈ ಸಿದ್ಧಾಂತವನ್ನು ಜನರೇ ಒಪ್ಪಿಕೊಂಡು ಚುನಾವಣೆಗಳಲ್ಲಿ ವಿಶ್ವಾಸದ ಬಲ ಮತ್ತು ಆಶೀರ್ವದಿಸಿ ದ್ವಿಗುಣಗೊಳಿಸಿದೆ. ಅಲ್ಲದೇ ಪಕ್ಷದ ಮೇಲಿರುವ ಅಚಲವಾದ ನಂಬಿಕೆ ಸಹ ಒಂದು ಕಾರಣ ಎಂದರು.ಪ್ರಪಂಚದಲ್ಲೇ ಭಾಜಪ ಅತಿದೊಡ್ಡ ಹಾಗೂ 15 ಕೋಟಿಗೂ ಹೆಚ್ಚು ಸದಸ್ಯತ್ವ ಹೊಂದಿದ ಏಕೈಕ ಪಕ್ಷ. ಪ್ರಜಾಪ್ರಭುತ್ವದ ಆಧಾರದಲ್ಲಿ ನೆಲೆಕಂಡಿರುವ ಬಿಜೆಪಿ ಕೇವಲ ಅಧಿಕಾರವನ್ನೇ ಗುರಿಯಾಗಿಸದೇ, ಜನ ಸೇವೆ ಹಾಗೂ ಕಾರ್ಯಕರ್ತರಿಗೆ ಪ್ರಶಿಕ್ಷಣ ಅಭಿಯಾನ ಹಮ್ಮಿಕೊಂಡು ರಾಷ್ಟ್ರದ ಸದ್ವಿಚಾರವನ್ನು ಕಾರ್ಯಾಗಾರದ ಮೂಲಕ ಪರಿಚಯಿಸುತ್ತಿದೆ ಎಂದು ತಿಳಿಸಿದರು.ರಾಷ್ಟ್ರದಲ್ಲಿ ಅನೇಕ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳಿವೆ. ಆದರೆ ಕಾರ್ಯಕರ್ತರು, ಮುಖಂಡರಿಗೆ ರಾಷ್ಟ್ರಚಿಂತನೆ ಬೋಧಿಸುವುದು ಕೇವಲ ಬಿಜೆಪಿ ಹೊರತು, ಬೇರೆ ಯಾವ ಪಕ್ಷದಲಿಲ್ಲ. ಇತರೆ ಪಕ್ಷಗಳು ಕುಟುಂಬ ರಾಜಕಾರಣಕ್ಕೆ ಸೀಮಿತ ವಾದರೆ, ಭಾಜಪ ರಾಷ್ಟçದ ಉಜ್ವಲ ಭವಿಷ್ಯದ ಉಳಿವಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.ಕಾಂಗ್ರೆಸ್‌ನ ದುರಾಡಳಿತದಲ್ಲಿ ಭಾರತೀಯ ಸಂಸ್ಕೃತಿ ಎತ್ತಿಹಿಡಿಯಲು ಜನಸಂಘವನ್ನು, ಜನತಾ ಪಾ ರ್ಟಿಯಾಗಿ ಪರಿವರ್ತನೆ ಮಾಡಿತು. ಶ್ರೀರಾಮನ ಮಂದಿರ ಹೋರಾಟ, ದೇಶದ ಭಾಗ ಕಾಶ್ಮೀರಕ್ಕೆ ಇತರೆ ಸ್ಥಾನಮಾನ ವಿರೋಧಿಸಿ ಚಳುವಳಿ ನಡೆಸಿ ಕೊಂಡು ಬಂದಿತ್ತು. ಈ ಚಳುವಳಿ ಪ್ರತಿಫಲವಾಗಿ ಪ್ರಧಾನಿ ನರೇಂದ್ರ ಮೋದಿ ಕಾಲಘಟ್ಟದಲ್ಲಿ ಈಡೇರಿಸಿದ್ದು ಇನ್ನೂ ಅನೇಕ ಕಾರ್ಯಗಳು ಬಾಕಿಯಿವೆ ಎಂದರು.ಪ್ರಶಿಕ್ಷಣ ಅಭಿಯಾನ ಇದೀಗ ಮೂರು ವರ್ಗಗಳಾಗಿ ವಿಂಗಡಿಸಿದ್ದು ಇಲ್ಲಿ ಕಾರ್ಯಕರ್ತರಿಗೆ ಪಕ್ಷ ದ ಸಿದ್ದಾಂತ, ಕೇಂದ್ರ ಸರ್ಕಾರ ಹಾಗೂ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರದ ಸಾಧನೆ ಮನದಟ್ಟಾಗಿ ಸಿ ಬೂತ್ ಮಟ್ಟದಲ್ಲಿ ಜನಸಾಮಾನ್ಯರಿಗೆ ಅರಿವು ಮೂಡಿಸಲು ನಡೆಸಲಾಗುತ್ತಿದೆ. ಜವಾಬ್ದಾರಿಯಿಂದ ಪಾಲ್ಗೊಂಡು ದೇಶದ ಉತ್ತಮ ಭವಿಷ್ಯಕ್ಕೆ ಸಹಕರಿಸಬೇಕು ಎಂದು ತಿಳಿಸಿದರು. ಚಿಕ್ಕಮಗಳೂರು ಕ್ಷೇತ್ರದ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ರಾಜೀವ್ ಮಾತನಾಡಿ, ಕಸಬಾ, ಜಾಗರ, ಕಳಸಾಪುರ ಮಹಾಶಕ್ತಿ ಕೇಂದ್ರದ ಗ್ರಾಮಾಂತರ ಮಂಡಲದಿಂದ ಪ್ರಶಿಕ್ಷಣ ಮಹಾ ಭಿಯಾನ ಹಮ್ಮಿಕೊಂಡಿದ್ದು ದಿನಪೂರ್ತಿ ಕಾರ್ಯಾಗಾರ ದಲ್ಲಿ ಕಾರ್ಯಕರ್ತರಿಗೆ ಸಂಪೂರ್ಣ ವಿವರ ತಿಳಿಸಿ ಕೊಡಲಾಗುವುದು ಎಂದರು.ಈ ವೇಳೆ ಪ್ರಶಿಕ್ಷಣ ಮಹಾಭಿಯಾನ ವರ್ಗದ ಪ್ರಮುಖ್ ಈಶ್ವರಹಳ್ಳಿ ಮಹೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಕನಕರಾಜ್ ಅರಸ್, ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್‌ಕುಮಾರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್, ಜಿ.ಪಂ. ಮಾಜಿ ಉಪಾಧ್ಯಕ್ಷ ಬಿ.ಜಿ.ಸೋಮಶೇಖರ್ ಉಪಸ್ಥಿತರಿದ್ದರು.