ಧಾರವಾಡ: ಇಲ್ಲಿಯ ಶಿವಕೃಪಾ ಟ್ರಸ್ಟ್ ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಭಾನುವಾರ ನಗರದ ಆದರ್ಶ ಬಾಲಿಕಿಯರ ಪ್ರೌಢಶಾಲೆಯ ಸಭಾಭವನದಲ್ಲಿ ರಕ್ತದಾನ ಶಿಬಿರ ಆಯೋಜಿಸಿತ್ತು.
ರಕ್ತದಲ್ಲಿ ಬಿಳಿ ರಕ್ತಕಣ, ಪ್ಲಾಸ್ಮಾ ಹೀಗೆ ವಿಂಗಡಿಸಲಿದೆ. ಕೇವಲ ಒಬ್ಬ ವ್ಯಕ್ತಿ ಮಾಡುವ ರಕ್ತದಾನ, ಹಲವು ರೋಗಿಗಳಿಗೆ ಅನುಕೂಲ ಆಗಲಿದೆ. ಹೀಗಾಗಿ ವರ್ಷಕ್ಕೆ ಎರಡ್ಮೂರು ಸಲ ರಕ್ತದಾನ ಮಾಡಬೇಕು ಎಂದು ಹೇಳಿದರು.ರಕ್ತಹೀನತೆ, ವಿವಿಧ ಕಾಯಿಲೆಗಳಿಂದ ಬಳಲುವರು, ಅಪಘಾತದ ತುರ್ತು ಸಂದರ್ಭಗಳಿಗೆ ರಕ್ತದ ಅಗತ್ಯವಿದೆ. ಹೀಗಾಗಿ ಪರೋಪಕಾರ ಉದ್ದೇಶವುಳ್ಳ ಇಂತಹ ರಕ್ತದಾನ ಶಿಬಿರ ಹೆಚ್ಚೆಚ್ಚು ನಡೆಯಬೇಕು ಎಂದರು.
ಶಿಬಿರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಹಾಗೂ ಹಲವು ಯುವಕರು ರಕ್ತದಾನ ಮಾಡಿದರು. ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆದ ಶಿಬಿರದಲ್ಲಿ ಒಟ್ಟು 25 ಯುನಿಟ್ ರಕ್ತ ಸಂಗ್ರಹ ಮಾಡಲಾಯಿತು. ಶಿವಕೃಪಾ ಟ್ರಸ್ಟ್ ಅಧ್ಯಕ್ಷ ಅಮರನಾಥ ಟಿಕಾರೆ, ರಾಷ್ಟ್ರೋತ್ಥಾನ ರಕ್ತದಾನ ಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ, ವೆಂಕಟೇಶ ಕರಿಕಲ್ಲ, ಆರ್.ಎಂ. ಕುಲಕರ್ಣಿ, ರವಿ ಕಾಮತ್ ಪಾಲ್ಗೊಂಡಿದ್ದರು.