ದೇವತಾ ಉತ್ಸವಗಳಿಂದ ಬಾಂಧವ್ಯ ಗಟ್ಟಿ

KannadaprabhaNewsNetwork |  
Published : Nov 04, 2025, 12:00 AM IST
೩ಶಿರಾ೨: ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಲಕ್ಷ್ಮಿಪುರ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ವಿಗ್ರಹ ಕಳಶ ಪ್ರತಿಷ್ಠಾಪನ ಮಹೋತ್ಸವ ಜರುಗಿತು. ಕಾಗಿನೆಲೆ ಶ್ರೀ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿಗಳು, ಸಿದ್ದರಾಮದೇಶಿ ಕೇಂದ್ರ ಮಹಾ ಸ್ವಾಮಿಗಳಾದ ಶ್ರೀ ಜ್ಞಾನಪ್ರಭು ಸ್ವಾಮಿಜಿಗಳು, ಶಾಸಕ ಸಿ.ಬಿ.ಸುರೇಶ್ ಬಾಬು ಸೇರಿದಂತೆ ಹಲವರು ಭಾಗವಹಿಸಿದ್ದರು. | Kannada Prabha

ಸಾರಾಂಶ

ದೇವತಾ ಉತ್ಸವಗಳು ಪರಸ್ಪರ ಸ್ನೇಹ ಸಂಬಂಧ, ಬಾಂಧವ್ಯಗಳನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಕಾಗಿನೆಲೆ ಶ್ರೀ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿಗಳು ನುಡಿದರು

ಕನ್ನಡಪ್ರಭ ವಾರ್ತೆ ಶಿರಾ

ದೇವತಾ ಉತ್ಸವಗಳು ಪರಸ್ಪರ ಸ್ನೇಹ ಸಂಬಂಧ, ಬಾಂಧವ್ಯಗಳನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಕಾಗಿನೆಲೆ ಶ್ರೀ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿಗಳು ನುಡಿದರು.

ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಲಕ್ಷ್ಮಿಪುರ ಗ್ರಾಮದಲ್ಲಿ ಸೋಮವಾರ ನಡೆದ ಬಸವೇಶ್ವರ ಸ್ವಾಮಿ ವಿಗ್ರಹ ಕಳಶ ಪ್ರತಿಷ್ಠಾಪನ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಭಾರತೀಯ ಧಾರ್ಮಿಕ ಸಂಸ್ಕೃತಿ ಮತ್ತು ಪರಂಪರೆ ನಮ್ಮ ಜೀವನ ಶೈಲಿಯನ್ನು ಗಟ್ಟಿಗೊಳಿಸಿದೆ. ಆಧ್ಯಾತ್ಮಿಕತೆ ಬದುಕಿನ ಮೌಲ್ಯವನ್ನು ಕಲಿಸಿದರೆ, ಧಾರ್ಮಿಕತೆ ದೈವದ ಮೇಲಿನ ನಂಬಿಕೆಯನ್ನು ನಿಮ್ಮ ಹೃದಯದಲ್ಲಿ ತುಂಬುವಂತಹ ಕೆಲಸ ಮಾಡುತ್ತದೆ. ಮನುಷ್ಯ ಮತ್ತೊಬ್ಬರಿಗೆ ಸಹಾಯ ಮಾಡುವಂತಹ , ಅವರ ಕಷ್ಟಗಳಿಗೆ ಸ್ಪಂದಿಸುವಂತಹ ಗುಣವನ್ನು ರೂಡಿಸಿಕೊಂಡು ಸೇವೆಯಲ್ಲಿ ಭಗವಂತನನ್ನು ಕಾಣಬೇಕು ಎಂದರು.

ಗ್ರಾಮ ಬಸವೇಶ್ವರ ಸ್ವಾಮಿಯನ್ನು ದೇವಸ್ಥಾನ ಎಲ್ಲರೂ ಒಗ್ಗೂಡಿ ಭವ್ಯವಾಗಿ ನಿರ್ಮಾಣ ಮಾಡಿದ್ದೀರಿ, ಶ್ರದ್ಧೆ , ಭಕ್ತಿ ಜೊತೆಗೆ ಮುಗ್ಧ ಮನಸ್ಸಿನಿಂದ ಶ್ರೀ ಬಸವೇಶ್ವರ ಸ್ವಾಮಿ ಆರಾಧಿಸಿದರೆ, ಸ್ವಾಮಿ ನಿಮ್ಮ ಸಂಕಷ್ಟಗಳನ್ನು ದೂರ ಮಾಡಿ ನಿಮ್ಮ ಹೃದಯ ಮಂದಿರದಲ್ಲಿ ನೆಲೆಸಲಿದ್ದಾರೆ ಎಂದರು.

ಶ್ರೀ ಜ್ಞಾನಪ್ರಭು ಸ್ವಾಮಿಜಿ ಮಾತನಾಡಿ ನಮ್ಮ ದೇಶದ ಜೀವನ ಶೈಲಿಯನ್ನು ವಿದೇಶದಲ್ಲಿ ಮೆಚ್ಚುತ್ತಾರೆ ಎಂದರೆ ನಮ್ಮಲ್ಲಿರುವ ಆಹಾರ ಪದ್ಧತಿ, ಧಾರ್ಮಿಕ ನಂಬಿಕೆ, ಸರಳ ಜೀವನ ಶೈಲಿ ಕಾರಣ, ಹಲವಾರು ಗ್ರಾಮಗಳ ಭಕ್ತರು ಒಗ್ಗೂಡಿ ಶ್ರೀ ಬಸವೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ, ಶಕ್ತಿ ದೇವತೆ ನಿಮ್ಮ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡಿ ನಾಡಿಗೆ ಸುಭಿಕ್ಷೆ ಕರುಣಿಸಲಿ ಎಂದರು.

ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ಲಕ್ಷ್ಮಿಪುರ ಗ್ರಾಮದಲ್ಲಿ ಬಸವೇಶ್ವರ ಸ್ವಾಮಿ ದೇವಸ್ಥಾನವನ್ನು ಅದ್ಭುತವಾಗಿ ನಿರ್ಮಿಸಿದ್ದು ದೇವಸ್ಥಾನಕ್ಕೆ ಒಂದು ಸಮುದಾಯ ಭವನ ನಿರ್ಮಾಣ ಮಾಡುವಂತೆ ಬೇಡಿಕೆ ಇದ್ದು, ಸಮುದಾಯ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದರು.

ಶ್ರೀಬಸವೇಶ್ವರ ಸ್ವಾಮಿ ವಿಗ್ರಹ ಕಳಶ ಪ್ರತಿಷ್ಠಾಪನ ಮಹೋತ್ಸ ಮಹಿಳೆಯರು ಆರತಿ ಉತ್ಸವ ಹೋಮ ಅನ್ನ ಸಂತರ್ಪಣೆ ನೆರವೇರಿಸುವ ಮೂಲಕ ಶ್ರೀ ಬಸವೇಶ್ವರ ಸ್ವಾಮಿ ಭ ಕ್ತಿ ಸಮರ್ಪಸಿದ್ದು ಆಕರ್ಷಕವಾಗಿತ್ತು. ಗ್ರಾಮ ದೇವತೆಗಳು ಹಾಗೂ ಊರಿನ ಗ್ರಾಮಸ್ಥರು ಕೈವಾಡಸ್ತರು ಭಕ್ತಾದಿಗಳು ಭಾಗವಹಿಸಿದ್ದರು.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ