ತೆರಿಗೆ ವಂಚನೆ ಮಾಡುತ್ತಿದ್ದ ಬಸ್ಸುಗಳ ವಶ

KannadaprabhaNewsNetwork |  
Published : Dec 16, 2025, 01:45 AM IST
15ಕೆಜಿಎಫ್‌3 | Kannada Prabha

ಸಾರಾಂಶ

ಕೆಜಿಎಫ್ ಎಆರ್‌ಟಿಓ ಕಚೇರಿ ವ್ಯಾಪ್ತಿಗೆ ಬರುವ ೫೦ ಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಹುತೇಕ ಶಾಲಾ ವಾಹನಗಳು ಸುಪ್ರೀಂ ಕೋರ್ಟ್ ಅದೇಶವನ್ನು ಪಾಲಿಸುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ದಂಡ ವಿಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ತೆರಿಗೆ ಕಟ್ಟದೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಒಂದೇ ನಂಬರ್‌ ಪ್ಲೇಟನ್ನು ಎರಡೆರಡು ಬಸ್ಸುಗಳಿಗೆ ಅಳವಡಿಸಿಕೊಂಡು ಸರ್ಕಾರಕ್ಕೆ ಲಕ್ಷಾಂತರ ರುಪಾಯಿಗಳ ತೆರಿಗೆ ವಂಚನೆ ಮಾಡುತ್ತಿದ್ದ ಎರಡು ಬಸ್ಸುಗಳನ್ನು ಕೆಜಿಎಫ್ ಎಆರ್‌ಟಿಒ ಕಚೇರಿಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.ಸಾರಿಗೆ ಇಲಾಖೆಯ ನಿಯಮಗಳನ್ನು ಉಲ್ಲಂಘಿಘಿಸಿ ರಾಜರೋಷವಾಗಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೆಎಲ್‌೦೫ ಆರ್೭೫೨೨ ಸಂಖ್ಯೆಯ ಪ್ಲೇಟನ್ನು ಎರಡು ಬಸ್ಸುಗಳಿಗೆ ಅಳವಡಿಸಲಾಗಿತ್ತು. ಎಆರ್‌ಟಿಒ ಅಧಿಕಾರಿಯಾದ ಪೂಜಾ ಅವರು ಕಾರ್ಯಾಚರಣೆ ನಡೆಸಿ ಕೋಟಿಲಿಂಗೇಶ್ವರ ಬಳಿ ಬಸ್ಸುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಪರ್ಮಿಟ್‌ ಇಲದೆ ಬಸ್‌ ಸಂಚಾರ

ಸಾರಿಗೆ ಜಂಟಿ ಆಯುಕ್ತರಾದ ಗಾಯತ್ರಿದೇವಿ ಸೂಚನೆ ಮೇರೆಗೆ ಕೆಜಿಎಫ್‌ನ ಉಪ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಪರ್ಮಿಟ್ ಇಲ್ಲದೆ ಹಾಗೂ ಪರ್ಮಿಟ್ ಇದ್ದರೂ ತೆರಿಗೆ ಕಟ್ಟದೆ ಯಾವುದೋ ರಾಜ್ಯದ ನೋಂದಣಿ, ಇನ್ಯಾವುದೋ ರಾಜ್ಯದಲ್ಲಿತೆರಿಗೆ ವಂಚಿಸಿ ಓಡಾಟ.. ಹೀಗೆ ಅಕ್ರಮಗಳನ್ನು ನಡೆಸಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಕೋಚ್ ಬಸ್ ಗಳಿಗೆ ಶಾಕ್ ವಶಪಡಿಸಿಕೊಂಡು ಕ್ರಮ ವಹಿಸುವಂತೆ ಸೂಚನೆ ನೀಡಿದರು. ಕೆಜಿಎಫ್ ಎಆರ್‌ಟಿಓ ಕಚೇರಿ ವ್ಯಾಪ್ತಿಗೆ ಬರುವ ೫೦ ಕ್ಕೂ ಹೆಚ್ಚು ಶಾಲಾ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬಹುತೇಕ ಶಾಲಾ ವಾಹನಗಳು ಸುಪ್ರೀಂ ಕೋರ್ಟ್ ಅದೇಶವನ್ನು ಪಾಲಿಸುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು. ಆರ್‌ಟಿಓ ತಪಾಸಣೆ ಒಳಗಾಗದ ವಾಹನಗಳು, ಬಸ್‌ನ ಕಿಟಿಕಿಗಳಿಗೆ ಕಬ್ಬಿಣದ ಕವಚ, ಶಾಲಾ ವಾಹನದಲ್ಲಿ ಅಯಾ ಶಾಲೆಯ ಒಬ್ಬ ಸಿಬ್ಬಂದಿ, ಮಕ್ಕಳು ತಮ್ಮ ಬ್ಯಾಗ್ ಇಡಲು ಸೂಕ್ತ ಸ್ಥಳವಕಾಶ ಿಲ್ಲದ ಹಾಗೂ ಪರ್ಮಿಟ್‌ ಇಲ್ಲದ ವಾಹನಗಳನ್ನು ವಶಪಡಿಕೊಂಡು ದಂಡ ವಸೂಲಿ ಮಾಡಲಾಗಿದೆ ಎಂದು ಜಂಟಿ ಆಯುಕ್ತರು ತಿಳಿಸಿದರು.

ಪ್ರಯಾಣಿಕರ ಸುರಕ್ಷತೆಗೆ ಅದ್ಯತೆ:ಪ್ರಯಾಣಿಕರ ಸುರಕ್ಷತಾ ಅಂಶಗಳಾದ ತುರ್ತು ನಿರ್ಗಮನ ವ್ಯವಸ್ಥೆ, ಬೆಂಕಿ ನಂದಿಸುವ ಸಾಧನ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಕಡ್ಡಾಯವಾಗಿ ಇರಬೇಕು. ಅಲ್ಲದೆ ಪ್ರಯಾಣಿಕರ ವಾಹನಗಳಲ್ಲಿ ಅನಧಿಕೃತವಾಗಿ ಯಾವುದೇ ಸರಕುಗಳನ್ನು ಸಾಗಿಸುವಂತಿಲ್ಲ ಎಂದರು.ಜಂಟಿ ಆಯುಕ್ತೆ ಗಾಯತ್ರಿದೇವಿ ಮಾತನಾಡಿ, ಮಂಜು ಮುಸುಕಿದ ವಾತಾವರಣದ ಸಂದರ್ಭದಲ್ಲಿ ಕೆಜಿಎಫ್‌ನಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಕದೆ ಸಂಚರಿಸುವಾಗ ಹೆಚ್ಚಿನ ಅಪಘಾತಗಳು ಸಂಭವಿಸಿದ್ದು, ಪ್ರಾಣ ಹಾನಿ ತಪ್ಪಿಸುವ ಹಿನ್ನೆಲೆಯಲ್ಲಿ ಅಧಿಕಾರಿಗಳು ನಗರದಲ್ಲಿ ಕಾರ್ಯಾಚರಣೆ ನಡೆಸಬೇಕೆಂದು ಸೂಚನೆ ನೀಡಲಾಗಿತ್ತು ಎಂದರು.ವಾರದಲ್ಲಿ ೧೮೫ ಪ್ರಕರಣ: ಒಂದೇ ವಾರದಿಂದ ೧೮೫ ಪ್ರಕರಣಗಳನ್ನು ದಾಖಲಿಸಿ ಅಂದಾಜು ಒಂದು ಲಕ್ಷ ರುಪಾಯಿಗಳ ದಂಡವನ್ನು ವಸೂಲಿ ಮಾಡಲಾಗಿದೆ. ಯುವಕರು ಹೆಲ್ಮೆಟ್ ಹಾಕದೆ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಬಾರದೆಂದು ಎಂಬ ಉದ್ದೇಶದಿಂದ ಅಧಿಕಾರಿಗಳು ಹೆಲ್ಮೆಟ್ ಹಾಕದೆ ಇದ್ದವರಿಗೆ ದಂಡವನ್ನು ವಿಧಿಸುತ್ತಿದ್ದಾರೆ ಎಂದರು. ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವವರು ಕಡ್ಡಾಯವಾಗಿ ವಾನದ ದಾಖಲೆಗಳನ್ನು ಹೊಂದಿರಬೇಕು, ವಾಹನ ಚಾಲನೆ ಮಾಡುವ ಪ್ರತಿಯೊಬ್ಬರು ಹೊಂದಿರಬೇಕು ಹಾಗೂ ವಾಹನಗಳ ನಿಮಿಯಮಿತವಾಗಿ ತಪಾಸಣೆಯ ದಾಖಲೆಗಳನ್ನು ಹೊಂದಿರಬೇಕೆಂದು ತಿಳಿಸಿದರು.

೧೫ಕೆಜಿಎಫ್೩........ಒಂದೇ ಸಂಖ್ಯೆಯ ನಂಬರ್‌ ಪ್ಲೇಟ್‌ ಹೊಂದಿದ್ದ ಎರಡು ಬಸ್ಸುಗಳನ್ನು ಕೆಜಿಎಫ್‌ನ ಕೋಟಿಲಿಂಗೇಶ್ವರ ಬಳಿ ಆರ್‌ಟಿಒ ಅಧಿಕಾರಿಗಳು ವಶಪಡಿಸಿಕೊಂಡರು.

ವಶಪಡಿಕೊಂಡಿರುವ ಜಂಟಿ ಸಾರಿಗೆ ಆಯುಕ್ತರಾದ ಗಾಯತ್ರಿದೇವಿ, ಕೆಜಿಎಫ್ ಎಆರ್‌ಟಿಒ ಗಜೇಂದ್ರಬಾಬು, ಬ್ರೆಕ್ ಇನ್ಸೆ÷್ಪಕ್ಟರ್ ಶ್ರೀನಿವಾಸಲು, ಪೂಜಾ ಹಾಗೂ ಇನ್ನಿತರ ಅಧಿಕಾರಿಗಳು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!