ದೆಹಲಿಯಿಂದ ಬೆಂಗಳೂರಿಗೆ ಸುಮಾರು 2,075 ಕಿ.ಮೀ. ದೂರವನ್ನು ಲ್ಯಾಂಡ್ ರೋವರ್ ಡಿಫೆಂಡರ್ ಕಾರಿನಲ್ಲಿ ನಿರಂತರವಾಗಿ ಕ್ರಮಿಸಿದ ಕೇಶವ ಪ್ರಸಾದ್ ಮುಳಿಯ ಹಾಗೂ ಡಾ. ಅನಿಲ್ ಎಸ್. ಬೈಪಾಡಿತ್ತಾಯ ಅವರು ‘ಒಂದೇ ದೇಶದಲ್ಲಿ ಕಾರಿನ ಮೂಲಕ ಅತಿ ದೀರ್ಘ ನಿರಂತರ ಪ್ರಯಾಣ’ ವಿಭಾಗದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಮಂಗಳೂರು
ದೆಹಲಿಯಿಂದ ಬೆಂಗಳೂರಿಗೆ ಸುಮಾರು 2,075 ಕಿ.ಮೀ. ದೂರವನ್ನು ಲ್ಯಾಂಡ್ ರೋವರ್ ಡಿಫೆಂಡರ್ ಕಾರಿನಲ್ಲಿ ನಿರಂತರವಾಗಿ ಕ್ರಮಿಸಿದ ಕೇಶವ ಪ್ರಸಾದ್ ಮುಳಿಯ ಹಾಗೂ ಡಾ. ಅನಿಲ್ ಎಸ್. ಬೈಪಾಡಿತ್ತಾಯ ಅವರು ‘ಒಂದೇ ದೇಶದಲ್ಲಿ ಕಾರಿನ ಮೂಲಕ ಅತಿ ದೀರ್ಘ ನಿರಂತರ ಪ್ರಯಾಣ’ ವಿಭಾಗದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.ಸೆ.7ರಂದು ಬೆಳಗ್ಗೆ 5.50ಕ್ಕೆ ನವದೆಹಲಿಯ ಇಂಡಿಯಾ ಗೇಟ್‌ನಿಂದ ಆರಂಭಗೊಂಡ ಸಾಹಸಯಾನ ಸೆ.8ರಂದು ಬೆಳಗ್ಗೆ 10.51ಕ್ಕೆ ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಅಂತ್ಯಗೊಂಡಿತು. ಒಟ್ಟು ಸುಮಾರು 29 ಗಂಟೆ 1 ನಿಮಿಷಗಳಲ್ಲಿ ಇಬ್ಬರೂ ಪ್ರಯಾಣ ಪೂರ್ಣಗೊಳಿಸಿದರು.
ಈ ಸಾಧನೆಯನ್ನು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅಧಿಕೃತವಾಗಿ ಪ್ರಮಾಣೀಕರಿಸಿದೆ. ಸಂಸ್ಥೆಯ ಏಷ್ಯಾ ಮುಖ್ಯಸ್ಥ ಡಾ. ಮನೀಶ್ ವಿಷ್ಣೋಯಿ ಅವರು ದಾಖಲೆಯ ಮಾನ್ಯತೆಯನ್ನು ದೃಢಪಡಿಸಿದ್ದಾರೆ.
ರಾಜಧಾನಿ ಎಕ್ಸ್‌ಪ್ರೆಸ್‌ಗಿಂತ ವೇಗ!:
ದೆಹಲಿ-ಬೆಂಗಳೂರು ನಡುವಿನ ಈ ಕಾರು ಪ್ರಯಾಣದ ಅವಧಿ ಗಮನಾರ್ಹ. ಇದೇ ಮಾರ್ಗದಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಮಾನ್ಯವಾಗಿ ಸುಮಾರು 36 ಗಂಟೆಗಳ ಪ್ರಯಾಣ ಬೇಕಾಗುತ್ತದೆ. ಆದರೆ ರೈಲು ಮತ್ತು ರಸ್ತೆ ಮಾರ್ಗಗಳು ವಿಭಿನ್ನವಾಗಿರುವುದರಿಂದ ಈ ಹೋಲಿಕೆಯನ್ನು ದಾಖಲೆ ಪ್ರಯತ್ನದ ಅವಧಿ ಹಾಗೂ ಸವಾಲಿನ ಪ್ರಮಾಣವನ್ನು ಅರ್ಥೈಸುವ ದೃಷ್ಟಿಯಿಂದ ನೋಡಬೇಕಾಗಿದೆ. ಅಲ್ಲಿಂದ ಹೊರಟಲ್ಲಿಂದ ತಲುಪುವಲ್ಲಿ ವರೆಗೆ ಜಿಪಿಎಸ್ ಮೂಲಕ ಟ್ರ್ಯಾಕ್ ಮಾಡಲಾಗಿದ್ದು ಅದರ ಆಧಾರದಲ್ಲಿ ವಿಶ್ವ ದಾಖಲೆ ಮಾಡಿರುವುದನ್ನು ತೀರ್ಮಾನಿಸಲಾಗಿದೆ.
ಏಕಾಗ್ರತೆ, ಶಿಸ್ತು, ಸುರಕ್ಷತೆಗೆ ಆದ್ಯತೆ:
ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಕಾರು ಚಾಲನೆ ಬಹುಕಾಲದ ಆಸಕ್ತಿಯಾಗಿದ್ದು, ಆ ಆಸಕ್ತಿಯನ್ನು ಸವಾಲಿನ ಹಾಗೂ ಸ್ಮರಣೀಯ ಸಾಧನೆಯಾಗಿ ರೂಪಿಸುವ ಉದ್ದೇಶದಿಂದ ಈ ಪ್ರಯಾಣ ಕೈಗೊಂಡಿದ್ದಾಗಿ ಹೇಳಿದರು.
ಡಾ. ಅನಿಲ್ ಎಸ್. ಬೈಪಾಡಿತ್ತಾಯ ಮಾತನಾಡಿ, ಕೇಶವ ಪ್ರಸಾದ್ ಮುಳಿಯ ಅವರೊಂದಿಗೆ ಈ ಸವಾಲಿನ ಪ್ರಯಾಣವನ್ನು ಪೂರ್ಣಗೊಳಿಸಿ ಜಂಟಿಯಾಗಿ ವಿಶ್ವದಾಖಲೆ ನಿರ್ಮಿಸಿರುವುದು ಹೆಮ್ಮೆ ಮತ್ತು ಸಂತೋಷದ ಸಂಗತಿ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.