ಪೊಲೀಸ್ ದೂರು ನೀಡದಂತೆ ಕೊಲೆ ಆರೋಪಿಗಳು ಒತ್ತಡ ಹೇರಿದ್ದರು.

ಕನ್ನಡಪ್ರಭ ವಾರ್ತೆ ನಂಜನಗೂಡುತಾಲೂಕಿನ ಹೊಸ ಕಡಜಟ್ಟಿ ಗ್ರಾಮದ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪ್ರಕರಣಕ್ಕೆ, ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಪೊಲೀಸರು ಕೊಲೆ ಮತ್ತು ಜಾತಿ ನಿಂದನೆ ದೂರು ದಾಖಲಿಸಿಕೊಂಡಿದ್ದಾರೆ.ತಾಲೂಕಿನ ಹೊಸ ಕಡಜೆಟ್ಟಿ ಗ್ರಾಮದ ನಿವಾಸಿ ಮಹದೇವಮ್ಮ(63) ಮೇಲೆ ಸೆ. 6ರ ಸಂಜೆ ಹೊಸ ಕಡಜೆಟ್ಟಿ ಗ್ರಾಮದ ಶಂಕರ್ ಎಂಬವರ ಪುತ್ರ ನವೀನ್ ಎಂಬಾತ ಹಣಕಾಸಿನ ವಿಚಾರವಾಗಿ ಜಗಳ ನಡೆಸಿ, ಗಂಭೀರವಾಗಿ ಹಲ್ಲೆ ನಡೆಸಿದ್ದನು, ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸೆ. 7ರಂದು ಮೃತಪಟ್ಟಿದ್ದರು.ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ಹಲ್ಲೆ ಮಾಡಿ ಕೊಲೆ ಮಾಡಿರುವ ಬಗ್ಗೆ ದೂರು ನೀಡಿದರೂ ಸಹ 1.20 ಲಕ್ಷದ ರೂಗಳನ್ನು ಪರಿಹಾರವಾಗಿ ನೀಡಿ ಪೊಲೀಸ್ ದೂರು ನೀಡದಂತೆ ಕೊಲೆ ಆರೋಪಿಗಳು ಒತ್ತಡ ಹೇರಿದ್ದರು. ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆಹೀಗಾಗಿ ಪೊಲೀಸರು ಕೊಲೆ ಪ್ರಕರಣ ದಾಖಲಿಸದೆ ಯುಡಿಆರ್ ಪ್ರಕರಣವನ್ನು ದಾಖಲಿಸಿ ಆರೋಪಿಗಳ ಜೊತೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೇರಿದ್ದಾರೆ ಎಂದು ಮೃತಳ ಪುತ್ರಿ ಗೀತಾ ಆರೋಪಿಸಿ ಸ್ಥಳೀಯ ಗ್ರಾಮಸ್ಥರು ಹಾಗೂ ಸಂಘ-ಸಂಸ್ಥೆಗಳವರು ನೆರವಿನೊಂದಿಗೆ ಸಭೆ ನಡೆಸಿ, 9ರ ಬುಧವಾರ ಹುಲ್ಲಹಳ್ಳಿ ಪೊಲೀಸ್ ಠಾಣೆ ಮುಂದೆ ನ್ಯಾಯಕ್ಕಾಗಿ ಆಗ್ರಹಿಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದರು, ಉದ್ರಿಕ್ತರನ್ನು ಪೊಲೀಸರು ಸಂತೈಸಿ ಕಳುಹಿಸಿದ್ದರು ಸಹ ಕೂಡ, ಮೃತ ಮಹದೇವಮ್ಮಳ ಶವಸಂಸ್ಕಾರ ಕಾರ್ಯ ನಡೆಸದೆ ಶವದೊಂದಿಗೆ ಪ್ರತಿಭಟನೆ ಮುಂದುವರಿಸಿದ್ದರು. ಶವಸಂಸ್ಕಾರ ನಡೆಸದೆ ಪ್ರತಿಭಟನೆ ಸೆ. 10ರ ಗುರುವಾರವು ಸಹ ಮಾಜಿ ಸಚಿವ ಕೋಟೆ ಎಂ. ಶಿವಣ್ಣ, ಸಮುದಾಯದ ಹಿರಿಯ ಮುಖಂಡರಾದ ವಕೀಲ ಅರುಣ್ ಕುಮಾರ್, ಜಗಜೀವನರಾಮ್ ಸಂಘಟನೆಯ ಅಧ್ಯಕ್ಷ ಚಂದ್ರು ನೇತೃತ್ವದಲ್ಲಿ ಕೊಲೆಯಾಗಿ ನಾಲ್ಕು ದಿನ ಕಳೆದರೂ ಶವಸಂಸ್ಕಾರ ಕಾರ್ಯವನ್ನು ನಡೆಸದೆ ಆರೋಪಿಯನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ಮುಂದುವರಿಸಿದ್ದರು. ಎಫ್‌ಐಆರ್‌ದಾಖಲು, ಆರೋಪಿ ಬಂಧಿಸುವ ಭರವಸೆಪ್ರತಿಭಟನಾಕಾರರ ಒತ್ತಡಕ್ಕೆ ಮಣಿದ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಎಫ್ಐಆರ್ ದಾಖಲಿಸಿ ಕೊಂಡು ಶೀಘ್ರವಾಗಿ ಆರೋಪಿಯನ್ನು ಬಂಧಿಸುವ ಭರವಸೆ ನೀಡಿದ್ದಾರೆ.ಇದೇ ವೇಳೆ ಹಿರಿಯ ವಕೀಲ ಅರುಣ್ ಕುಮಾರ್ ಮಾತನಾಡಿ, ಕೊಲೆ ಆರೋಪಿಯ ಬೆಂಬಲಿಗರು ಪೊಲೀಸ್ ಠಾಣೆಯ ಒಳಭಾಗದಲ್ಲಿಯೇ ದಲ್ಲಾಳಿಗಳಂತೆ ಸಂತಾನ ಕಾರ್ಯ ನಡೆಸಿ ದಲಿತ ಮಹಿಳೆಯ ಕೊಲೆ ಪ್ರಕರಣವನ್ನು ಮುಚ್ಚಿ ಹಾಕುವ ಸಂಚು ನಡೆಸಿದ್ದರು ಸಹ, ಹುಲ್ಲಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿ ಪ್ರಕರಣ ಮುಚ್ಚಿ ಹಾಕಲು ಸಹಕಾರ ನೀಡಿರುವುದು ಖಂಡನೀಯ ಎಂದರು.ಸ್ಥಳಕ್ಕೆ ಬಾರದ ತಹಸೀಲ್ದಾರ್‌ಇನ್ನು ದಲಿತ ಮಹಿಳೆಯ ಕೊಲೆ ನಡೆದಿದ್ದರೂ ಸಹ ಸ್ಥಳಕ್ಕೆ ತಹಸೀಲ್ದಾರ್ ಸ್ಮಿತಾರಾಮು ಮತ್ತು ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಉಪನಿರ್ದೇಶಕ ಸಿದ್ದಲಿಂಗು ಮಾನವೀಯತೆಯ ಹಿತದೃಷ್ಟಿಯಿಂದಲೂ ಬೇಟೆ ನೀಡಿಲ್ಲ, ಆದ್ದರಿಂದ ನ್ಯಾಯಾಧೀಶರ ಸಮ್ಮುಖದಲ್ಲಿ ಪೊಲೀಸರು ಮತ್ತು ಅಧಿಕಾರಿಗಳ ವಿರುದ್ಧ ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು, ಜೊತೆಗೆ ಎರಡು ದಿನಗಳ ಗಡುವಿನೊಳಗೆ ಆರೋಪಿ ನವೀನನ್ನು ಪೊಲೀಸರು ವಶಕ್ಕೆ ಪಡೆಯದಿದ್ದಲ್ಲಿ ಮೈಸೂರು ಊಟಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಉಗ್ರ ಪ್ರತಿಭಟನೆ ರೂಪಿಸಲಾಗುವುದು ಎಂದು ಆಗ್ರಹಿಸಿದರು.ನಂತರ ಎಫ್ಐಆರ್ ದಾಖಲಿಸಿ ಶೀಘ್ರವಾಗಿ ಆರೋಪಿಯನ್ನು ಬಂಧಿಸುವ ಭರವಸೆಯೊಂದಿಗೆ ಮಹದೇವಮ್ಮ ಅವರ ಶವಸಂಸ್ಕಾರ ಕಾರ್ಯ ನೆರವೇರಿತು.ಪ್ರತಿಭಟನೆಯಲ್ಲಿ ಮಾದಿಗ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರಾದ ಚಂದ್ರು, ಮಧುರಾಜ್, ಶ್ರೀನಿವಾಸ್, ಮೋಹನ, ಸಿದ್ದಪ್ಪ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಿದ್ದರಾಜು ಸೇರಿದಂತೆ ಕಡೆಜಟ್ಟಿ ಗ್ರಾಮದ ಗ್ರಾಮಸ್ಥರು ಭಾಗವಹಿಸಿದ್ದರು.