ಹೃದಯ ಶ್ವಾಸಕೋಶದ ಪುನರುಜ್ಜೀವನ: ಮಣಿಪಾಲ್ ಆಸ್ಪತ್ರೆ ವೈದ್ಯರಿಂದ ಪ್ರಾತ್ಯಕ್ಷಿಕೆ

KannadaprabhaNewsNetwork |  
Published : Apr 21, 2026, 02:00 AM IST
ಪೊಟೊ-19ಕೆಎನ್ಎಲ್ಎಮ್1-ನೆಲಮಂಗಲ ರೋಟರಿ ಸಂಸ್ಥೆ ನೆಲಮಂಗಲ ರೋಟರಿ ಬೆಂಗಳೂರು ನಾರ್ಥ್ ವೆಸ್ಟ್ ಹಾಗೂ ಮಣಿಪಾಲ್ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಶ್ರೀ. ಬಸವೇಶ್ವರ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಾಗೂ ಸುಭಾಷ್ ರವರಿಂದ ಕಮ್ಯೂನಿಟಿ  ಕಾರ್ಡಿಯೋ ಪಲ್ಮನರಿ ಪುನರುಜ್ಜೀವನ ಅಥವಾ ಹೃದಯ ಶ್ವಾಸಕೋಶದ ಪುನರುಜ್ಜೀವನ (ಸಿ.ಪಿ.ಆರ್)ಕಾರ್ಯಕ್ರಮದ ಕುರತು   ಮಣಿ ಪಾಲ್ ಆಸ್ಪತ್ರೆಯ ವೈದ್ಯರಾದ ಡಾII ಜಿ.ಜಿ.ರಾಜನ್   ವಿವರಿಸಿದರು. | Kannada Prabha

ಸಾರಾಂಶ

ಇದು ರಕ್ತ ಮತ್ತು ಆಮ್ಲಜನಕವನ್ನು ಮೆದುಳಿಗೆ ತಲುಪಿಸುವ ಮೂಲಕ ಸಾವು ಅಥವಾ ಮೆದುಳಿನ ಹಾನಿಯನ್ನು ತಡೆಯುತ್ತದೆ ಎಂದು ಮಣಿ ಪಾಲ್ ಆಸ್ಪತ್ರೆಯ ವೈದ್ಯರಾದ ಡಾ.ಜಿ.ಜಿ.ರಾಜನ್ ತಿಳಿಸಿದರು.

ಶ್ರೀ ಬಸವೇಶ್ವರ ಕಾಲೇಜಿನ ವಿದ್ಯಾರ್ಥಿನಿಯರಿಗೆ ಮಾಹಿತಿ ಕನ್ನಡಪ್ರಭ ವಾರ್ತೆ ನೆಲಮಂಗಲ

ಹೃದಯ ಶ್ವಾಸಕೋಶದ ಪುನರುಜ್ಜೀವನ ಹೃದಯ ಸ್ತಂಭನ (Cardiac Arrest) ಅಥವಾ ಉಸಿರಾಟ ನಿಂತಾಗ ವ್ಯಕ್ತಿಯ ಜೀವವನ್ನು ಉಳಿಸಲು ಬಳಸುವ ತುರ್ತು ಚಿಕಿತ್ಸಾ ವಿಧಾನವಾಗಿದೆ. ಇದು ರಕ್ತ ಮತ್ತು ಆಮ್ಲಜನಕವನ್ನು ಮೆದುಳಿಗೆ ತಲುಪಿಸುವ ಮೂಲಕ ಸಾವು ಅಥವಾ ಮೆದುಳಿನ ಹಾನಿಯನ್ನು ತಡೆಯುತ್ತದೆ ಎಂದು ಮಣಿ ಪಾಲ್ ಆಸ್ಪತ್ರೆಯ ವೈದ್ಯರಾದ ಡಾ.ಜಿ.ಜಿ.ರಾಜನ್ ತಿಳಿಸಿದರು.

ರೋಟರಿ ಸಂಸ್ಥೆ ನೆಲಮಂಗಲ ರೋಟರಿ ಬೆಂಗಳೂರು ನಾರ್ಥ್ ವೆಸ್ಟ್ ಹಾಗೂ ಮಣಿಪಾಲ್ ಆಸ್ಪತ್ರೆ ಬೆಂಗಳೂರು ಇವರ ಸಹಯೋಗದಲ್ಲಿ ಶ್ರೀ ಬಸವೇಶ್ವರ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಾಗೂ ಸುಭಾಷ್ ಅವರಿಂದ ಕಮ್ಯೂನಿಟಿ ಕಾರ್ಡಿಯೋ ಪಲ್ಮನರಿ ಪುನರುಜ್ಜೀವನ ಅಥವಾ ಹೃದಯ ಶ್ವಾಸಕೋಶದ ಪುನರುಜ್ಜೀವನ (ಸಿಪಿಆರ್)ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ ಹೃದಯ ಅಥವಾ ಉಸಿರಾಟ ನಿಂತಾಗ ಮೆದುಳಿಗೆ ಮತ್ತು ಪ್ರಮುಖ ಅಂಗಗಳಿಗೆ ರಕ್ತ ಪರಿಚಲನೆ ಉಳಿಸಿಕೊಳ್ಳುವುದು ಮತ್ತು ಪ್ರಾಣ ಉಳಿಸಲು ಬಳಸುವ ತುರ್ತು ವೈದ್ಯಕೀಯ ಪ್ರಕ್ರಿಯೆ ಬಗ್ಗೆ ವಿವರಿಸಿ ಹಾಗೂ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಣಿ ಪಾಲ್ ಆಸ್ಪತ್ರೆಯ ವೈದ್ಯರಾದ ಡಾ.ಸುಭಾಷ್, ಶ್ರೀ ಬಸವೇಶ್ವರ ಕಾಲೇಜಿನ ಪ್ರಾಂಶುಪಾಲ ರುದ್ರಮಹೇಶ್, ನೆಲಮಂಗಲ ರೋಟರಿ ಅಧ್ಯಕ್ಷ ಜಿ.ಆರ್.ನಾಗರಾಜು, ಕಾರ್ಯದರ್ಶಿ ಆರ್‌. ರವಿಕುಮಾರ್‌, ಸಮುದಾಯ ನಿರ್ದೇಶಕ ಶಿವಶಂಕರ್ ಪ್ರಸಾದ್ ಭಾವಿ, ಅಧ್ಯಕ್ಷ ಕೆ.ಎಸ್.ಲೋಕೇಶ್ ರೋಟರಿ ಬೆಂಗಳೂರು ನಾರ್ತ್ ವೆಸ್ಟ್ ಅಧ್ಯಕ್ಷರಾದ ಲಕ್ಷೀ ಅಚ್ಯುತ ಹಾಗೂ ಕಾಲೇಜಿನ ಉಪನ್ಯಾಸಕರು ಮತ್ತು ವಿದ್ಯಾರ್ಥಿನಿಯರು ಹಾಗೂ ರೋಟರಾಕ್ಟ್ ಮಕ್ಕಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯನ ಹತ್ಯೆ ಮಾಡಿದ ಆರೋಪಿ ಬಂಧನ: ಎಸ್ಪಿ ದೀಪನ್
ಜನತೆ ನೆನಪಿಸಿಕೊಳ್ಳುವ ಕೆಲಸ ಮಾಡಬೇಕು: ಸಚಿವ ವೈದ್ಯ