ಸಿಬಿಎಸ್‌ಇ ಪರೀಕ್ಷೆ: ರೈತನ ಮಗಳು ಪ್ರಜ್ಞಾಗೆ ಶೇ.97 ಫಲಿತಾಂಶ

KannadaprabhaNewsNetwork |  
Published : May 15, 2025, 01:56 AM IST
14ಕೆಎಂಎನ್ ಡಿ24 | Kannada Prabha

ಸಾರಾಂಶ

ಪಾಂಡವಪುರ ಪಟ್ಟಣದ ಬಡ್ಸ್ ಫೌಂಡೇಷನ್ ಶಾಲೆ ವಿದ್ಯಾರ್ಥಿನಿ ಪ್ರಜ್ಞಾ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ 576 ಅಂಕಗಳನ್ನು ಪಡೆದು ಶೇ.97ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಶಾಲೆಗೆ ಟಾಫರ್ ಆಗಿ ಹೊರಹೊಮ್ಮಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಬಡ್ಸ್ ಫೌಂಡೇಷನ್ ಶಾಲೆ ವಿದ್ಯಾರ್ಥಿನಿ ಪ್ರಜ್ಞಾ ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ 576 ಅಂಕಗಳನ್ನು ಪಡೆದು ಶೇ.97ರಷ್ಟು ಫಲಿತಾಂಶ ದಾಖಲಿಸುವ ಮೂಲಕ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಪ್ರಜ್ಞಾ ಪಟ್ಟಣದ ಹಾರೋಹಳ್ಳಿ ರೈತ ಕುಟುಂಬದಲ್ಲಿ ಜನಿಸಿದ ಕುಮಾರ ಹಾಗೂ ಚೈತನ್ಯಕುಮಾರಿ ದಂಪತಿಯ ಏಕೈಕ ಪುತ್ರಿ. ಈಕೆ ಇಂಗ್ಲಿಷ್ 93, ಕನ್ನಡ 99, ಗಣಿತ 93, ವಿಜ್ಞಾನ 98, ಸಮಾಜ ವಿಜ್ಞಾನ 96 ಹಾಗೂ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ 97 ಅಂಕ ಸೇರಿದಂತೆ ಒಟ್ಟು 576 ಅಂಕಗಳನ್ನು ಪಡೆದಿದ್ದಾರೆ. ಮುಂದೆ ಮೈಸೂರಿನ ಬಿಜಿಎಸ್ ಕಾಲೇಜಿನಲ್ಲಿ ಪಿಯುಸಿ ವಿದ್ಯಾಭ್ಯಾಸ ಪೂರೈಸಿ ಎಂಜಿನಿಯರ್ ಆಗುವುದಾಗಿ ಪ್ರಜ್ಞಾ ತಿಳಿಸಿದ್ದಾರೆ. ಟಾಪರ್ ಆಗಿ ಹೊರಹೊಮ್ಮಿರುವ ಪ್ರಜ್ಞಾ ಅವರು ಹಾರೋಹಳ್ಳಿಯ ಅಕ್ಕ ಪಕ್ಕದ ಮನೆಯವರಿಗೆ ಸಿಹಿ ವಿತರಿಸಿ ಸಂಭ್ರಮಿಸಿದ್ದಾರೆ.ಸಿಬಿಎಸ್‌ಇ ಪರೀಕ್ಷೆ ಶೇ.100ರಷ್ಟು ಫಲಿತಾಂಶ

ಪಾಂಡವಪುರ:

ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಪಟ್ಟಣದ ಎಲ್‌ಕೆಆರ್ ಹೈಯರ್ ಪ್ರೈಮೆರಿ ಸೆಂಕೆಂಡರಿ ಸ್ಕೂಲ್‌ಗೆ ಶೇ.100ರಷ್ಟು ಫಲಿತಾಂಶ ಬಂದಿದೆ.

ಶಾಲೆಗೆ ಕಳೆದ 13 ವರ್ಷದಿಂದಲೂ ಶೇ.100ರಷ್ಟು ಫಲಿತಾಂಶ ಬರುತ್ತಿದೆ. ಶಾಲೆಯ 9 ಮಂದಿ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 19 ಮಂದಿ ಉತ್ತನ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಶಾಲೆಯ ಪ್ರಜ್ಞಾ- ಶೇ.97, ವಿಶ್ರುತ ಎನ್.ರಾಜ್- ಶೇ.94, ಧೀರಜ್ ಕಿಶೋರ್- ಶೇ.93, ಶರಧಿ ಸಿ.ಎಸ್- ಶೇ.93., ರೋನಾಕ್ ಕಠಾರಿಯಾ-ಶೇ.92., ಬಾಲಾಜಿ ಜೆ.ಎಚ್.-92, ಪೂರ್ವಿಕಗೌಡ ಎಂ.ಪಿ.-90, ಮುಖೇಶ್ ಎಸ್-90, ಧನ್ಯಾ ಎನ್ ಜವಲೇಕರ್-90 ಅಂಕಗಳನ್ನು ಗಳಿಸುವ ಮೂಲಕ ಕೀರ್ತಿ ತಂದಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.

PREV

Recommended Stories

ಉದ್ಭವ ಶಿವಲಿಂಗ, ನಂದಿ ಬಸವ ಭಗ್ನ
ಹಾಲು ಉತ್ಪಾದನೆಯಲ್ಲಿ ವಿಜಯಪುರ ಪಾಲು ಪ್ರಧಾನ