ಹರಪನಹಳ್ಳಿ: ಕಳೆದ ಎಂಟು ದಿನಗಳ ಹಿಂದೆ ಆರಂಭಗೊಂಡ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯ ದಿನ ಕಳೆದಂತೆ ತನ್ನ ವೇಗ ಹೆಚ್ಚಿಸಿಕೊಂಡಿದ್ದು, ಈವರೆಗೂ ತಾಲೂಕಿನಲ್ಲಿ ಸುಮಾರು 22 ಸಾವಿರ ಕುಟುಂಬಗಳ ಗಣತಿ ಪೂರ್ಣಗೊಂಡಿದೆ.
ತಾಲೂಕಿನಲ್ಲಿ ಒಟ್ಟು 74322 ಕುಟುಂಬಗಳ ಗಣತಿ ಕಾರ್ಯ ನಡೆಯಬೇಕಿದೆ, ಈವರೆಗೂ 22 ಸಾವಿರ ಕುಟುಂಬಗಳ ಗಣಿತಿ ಪೂರ್ಣಗೊಂಡಿದೆ. 670 ಗಣತಿದಾರರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿ ದಿನ 6500 ಕುಟುಂಬಗಳ ಗಣತಿ ಕಾರ್ಯ ನಡೆಸುವ ಗುರಿ ಇದ್ದು, ಭಾನುವಾರ ಗುರಿ ಮೀರಿ ಸಾಧನೆ ಮಾಡಿದೆ. ಗಣತಿದಾರರು ಸಹ ಬೆಳಗ್ಗೆಯಿಂದ ಸಂಜೆಯ ವರೆಗೂ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಆಗಾಗ ಸರ್ವರ್ ಸಮಸ್ಯೆ ಕಾಡುತ್ತದೆ, ಸರ್ವರ್ ಸರಿಯಾಗಿದ್ದರೆ ನಿಗದಿತ ವೇಳೆಗೆ ಗಣತಿ ಕಾರ್ಯ ಪೂರ್ಣಗೊಳ್ಳುತ್ತದೆ ಎಂಬುದು ಗಣಿತಿದಾರರ ಅನಿಸಿಕೆಯಾಗಿದೆ.
ಕೆಲವೊಂದು ಗಣತಿದಾರರಿಗೆ ಅಕ್ಕಪಕ್ಕದ 3-4 ಹಳ್ಳಿಗಳ ಕುಟುಂಬಗಳು ಪಟ್ಟಿಯಲ್ಲಿ ತೋರಿಸುತ್ತಲಿದ್ದು, ಅಲ್ಲೆಲ್ಲ ಸುತ್ತಾಡಿ ಗಣಿತಿ ಕಾರ್ಯ ಮಾಡಬೇಕಿದೆ.ಹರಪನಹಳ್ಳಿ ತಾಲೂಕಿನಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಕಾರ್ಯ ಸುಗಮವಾಗಿ ನಡೆಯುತ್ತ ದಿನದಿಂದ ದಿನಕ್ಕೆ ವೇಗ ಹೆಚ್ಚಿಸಿಕೊಂಡಿದೆ, ಸರ್ವರ್ ಸಮಸ್ಯೆ ಆಗದಿದ್ದರೆ ಸರ್ಕಾರದ ನಿಗದಿತ ಸಮಯದೊಳಗೆ ಗಣತಿ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವಿದೆ. ಈವರೆಗೂ 22 ಸಾವಿರ ಕುಟುಂಬಗಳ ಗಣತಿ ಕಾರ್ಯ ಮುಗಿದಿದೆ ಎನ್ನುತ್ತಾರೆ ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ಹರಪನಹಳ್ಳಿ ಭೀಮಪ್ಪ.