ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿ ನಾಟಕ ಪ್ರದರ್ಶನ

KannadaprabhaNewsNetwork |  
Published : Jan 11, 2026, 03:00 AM IST
9ಎಚ್‌ಪಿಟಿ1- ಹಂಪಿ ಕನ್ನಡ ವಿವಿಯಲ್ಲಿ ಚಂದ್ರಶೇಖರ ಕಂಬಾರರ`ಜೋಕುಮಾರ ಸ್ವಾಮಿ ನಾಟಕ ಪ್ರದರ್ಶನ ನಡೆಯಿತು. | Kannada Prabha

ಸಾರಾಂಶ

ಹಿರಿಯರು ಬಿಟ್ಟು ಹೋದ ಸಂಪ್ರದಾಯಗಳನ್ನು ಇಂದಿನ ಪ್ರಸ್ತುತ ಜೀವನದ ನಡವಳಿಕೆಗೆ ಕೊಂಡೊಯ್ಯುವಲ್ಲಿ ಡಾ.ಚಂದ್ರಶೇಖರ ಕಂಬಾರ ಅವರ ಬರಹಗಳು ಯಶಸ್ವಿಯಾಗಿವೆ

ಹೊಸಪೇಟೆ: ಹಿರಿಯರು ಬಿಟ್ಟು ಹೋದ ಸಂಪ್ರದಾಯಗಳನ್ನು ಇಂದಿನ ಪ್ರಸ್ತುತ ಜೀವನದ ನಡವಳಿಕೆಗೆ ಕೊಂಡೊಯ್ಯುವಲ್ಲಿ ಡಾ.ಚಂದ್ರಶೇಖರ ಕಂಬಾರ ಅವರ ಬರಹಗಳು ಯಶಸ್ವಿಯಾಗಿವೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ ಹೇಳಿದರು.

ಕನ್ನಡ ವಿಶ್ವವಿದ್ಯಾಲಯ ಹಂಪಿಯ ನಾಟಕ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಯೋಗದಲ್ಲಿ ಕನ್ನಡ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಡಾ. ಚಂದ್ರಶೇಖರ ಕಂಬಾರ ಅವರ 89ನೇ ಜನ್ಮದಿನದ ಪ್ರಯುಕ್ತ ಅವರ `ಜೋಕುಮಾರ ಸ್ವಾಮಿ'''' ನಾಟಕವನ್ನು ಕನ್ನಡ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭುವನ ವಿಜಯ ಸಭಾಂಗಣದಲ್ಲಿ ಪ್ರದರ್ಶಿಸಿದರು.

ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣವರ ಮಾತನಾಡಿ, ಉಳುವವನೇ ಭೂಮಿಯ ಒಡೆಯ " ಎಂಬ ಸಾಮಾಜಿಕ ಸಂದೇಶದ ಜೊತೆಗೆ, ಸಮಾಜದಲ್ಲಿ ಪ್ರೀತಿಗೆ ಪಾತ್ರನಾದ ವ್ಯಕ್ತಿ ಯಾಕೆ ಗಂಡನಾಗಿರಬಾರದು ಎಂಬ ಆಳವಾದ ತಾತ್ಪರ್ಯವನ್ನು ಕಂಬಾರರು ಜನಸಾಮಾನ್ಯರಿಗೆ ಅರ್ಥವಾಗುವ ಹಳ್ಳಿ ಸೊಗಡಿನ ಭಾಷಾ ಶೈಲಿಯಲ್ಲಿ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ ಎಂದರು.

ಕುವೆಂಪು ಅವರ ಸಾಹಿತ್ಯ ಹಾಗೂ ಗಿರೀಶ್ ಕಾರ್ನಾಡ್ ಅವರ `ನಾಗಮಂಡಲ'''''''''''''''''''''''''''''''' ನಾಟಕದಲ್ಲಿನ ಹೆಣ್ಣಿನ ಭಾವನೆಗಳು, ಆಸೆಗಳು ಮತ್ತು ಸ್ವಭಾವಗಳ ಸೆಳೆತಗಳನ್ನು ಹೋಲುವಂತೆ `ಜೋಕುಮಾರ ಸ್ವಾಮಿ''''''''''''''''''''''''''''''''ಯಲ್ಲಿಯೂ ಮಾನವೀಯ ಮೌಲ್ಯಗಳು ಜೀವಂತವಾಗಿ ಮೂಡಿಬಂದಿವೆ ಎಂದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಅಧ್ಯಕ್ಷತೆವಹಿಸಿ ಮಾತನಾಡಿ, ನಾಟಕದಲ್ಲಿ ಸಣ್ಣದು-ದೊಡ್ಡದು ಎನ್ನುವ ಪಾತ್ರಗಳಿಲ್ಲ; ಪ್ರತಿಯೊಂದು ಪಾತ್ರವೂ ತನ್ನ ಜೀವಂತಿಕೆಯಿಂದ ನಾಟಕದ ಸಂದೇಶವನ್ನು ಪ್ರೇಕ್ಷಕರಿಗೆ ತಲುಪಿಸಬೇಕು. ಇಂತಹ ನಾಟಕ ಪ್ರದರ್ಶನಗಳು ಬೇರೆ ಬೇರೆ ಸ್ಥಳಗಳಲ್ಲಿ ನಡೆಯುವುದರಿಂದ ವಿಶ್ವವಿದ್ಯಾಲಯದ ಗೌರವ ಮತ್ತಷ್ಟು ಹೆಚ್ಚುತ್ತದೆ ಎಂದರು.

ಹಿರಿಯ ರಂಗಕರ್ಮಿಗಳಾದ ಸಿ.ಟಿ. ಬ್ರಹ್ಮಾಚಾರ್ ಅವರ ನಿರ್ದೇಶನ, ಜಯರಾಮ ಕೆ.ಎಚ್. ಅವರ ರಾಗ ಸಂಯೋಜನೆ, ಡಾ.ವೀರೇಶ ಬಡಿಗೇರ ಅವರ ಸಂಗೀತ ನಿರ್ದೇಶನ, ಸಂಗೀತ ವಿಭಾಗದ ವಿದ್ಯಾರ್ಥಿಗಳು ಧ್ವನಿ ಮತ್ತು ಹಿನ್ನೆಲೆ ಗಾಯನ ಸೇರಿದಂತೆ ಈ ನಾಟಕ ಪ್ರದರ್ಶನವು ಪ್ರೇಕ್ಷಕರ ಮನ ಸೆಳೆಯಿತು.

ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಲಲಿತಕಲಾ ನಿಕಾಯದ ಡೀನ್‌ ಡಾ. ಶಿವಾನಂದ ವಿರಕ್ತಮಠ, ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕ ಡಾ. ಮಾಧವ ಪೆರಾಜೆ, ನಾಟಕ ವಿಭಾಗದ ಮುಖ್ಯಸ್ಥ ಡಾ. ವೀರೇಶ ಬಡಿಗೇರ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಮುಖ್ಯಸ್ಥರು, ಅಧಿಕಾರಿಗಳು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮತ್ತು ರಂಗಭೂಮಿ ಕಲಾವಿದರು, ನಾಟಕಾಸಕ್ತರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಠಾರೋತ್ಸವ: ಚೆಲುವನಾರಾಯಣಸ್ವಾಮಿಗೆ ಪುಷ್ಪಾಲಂಕಾರ ಸೇವೆ
ಹಿಪ್ಪು ನೇರಳೆ ಮತ್ತು ರೇಷ್ಮೆ ಲಾಭದಾಯಕ ಬೆಳೆಗಳು