ಮನೆ ಮನೆಯಲ್ಲೂ ಜಾತಿ ಪದ್ಧತಿಗೆ ಚಿನ್ನಸ್ವಾಮಿ ವಿಷಾದ

KannadaprabhaNewsNetwork |  
Published : Nov 19, 2025, 01:15 AM IST
18ಡಿಡಬ್ಲೂಡಿ8ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಧರೆಗೆ ದೊಡ್ಡವರು ಸನ್ಮಾನವನ್ನು ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಸ್ವೀಕರಿಸಿದರು.  | Kannada Prabha

ಸಾರಾಂಶ

ದಲಿತರ ನೋವುಗಳು ಮೇಲ್ಜಾತಿಯವರಿಗೆ ಅರ್ಥವಾಗದ ಮಾತು. ಇಂದಿಗೂ ದಿನಂಪ್ರತಿ ಪತ್ರಿಕೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯದ ವರದಿಗಳು ಬರುತ್ತಲೇ ಇದೆ. ಇಂದಿಗೂ ಸಹ ಜಾತಿ ಪದ್ಧತಿ ಕಡಿಮೆಯಾಗಿಲ್ಲ.

ಧಾರವಾಡ:

ಬಹುತ್ವ ಭಾರತದಲ್ಲಿ ಧರ್ಮದ ಆಧಾರದ ಮೇಲೆ ಮನುಷ್ಯ ಮನುಷ್ಯನನ್ನು ದ್ವೇಷಿಸುವುದು ಸರಿಯಲ್ಲ. ಇಂದು ಜಾತಿ ಪದ್ಧತಿ ಮನೆಯಲ್ಲಿಯೂ ನಿರ್ಮಾಣವಾಗಿರುವುದು ವಿಷಾದನೀಯ ಎಂದು ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಧರೆಗೆ ದೊಡ್ಡವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಒಬ್ಬ ಕವಿ ತಾನು ಹೇಗೆ ಕವಿಯಾದೆ ಎಂಬುದು ತಿಳಿಯದು. ಆ ಕವಿಯ ಅನುಭವಗಳೇ ದ್ರವ್ಯವಾಗಿ ಕವಿತ್ವ ಹುಟ್ಟಿಕೊಂಡಿದೆ. ದಲಿತರ ನೋವುಗಳು ಮೇಲ್ಜಾತಿಯವರಿಗೆ ಅರ್ಥವಾಗದ ಮಾತು. ಇಂದಿಗೂ ದಿನಂಪ್ರತಿ ಪತ್ರಿಕೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯದ ವರದಿಗಳು ಬರುತ್ತಲೇ ಇದೆ. ಇಂದಿಗೂ ಸಹ ಜಾತಿ ಪದ್ಧತಿ ಕಡಿಮೆಯಾಗಿಲ್ಲ. ತಂದೆ ಮಗಳನ್ನೇ ಕೊಲೆ ಮಾಡುವುದು, ಶಾಲೆಗಳಲ್ಲಿ ದಲಿತರಿಂದ ತಯಾರಿಸಿದ ಮಧ್ಯಾಹ್ನದ ಊಟವನ್ನು ಮಕ್ಕಳು ತಿರಸ್ಕರಿಸಿ ಮನೆಗೆ ಹೋಗುವುದು ಪದ್ಧತಿ ಕೆಲವೆಡೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ಇಂದು ಸೋತಿದೆ. ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಸಹೋದರತೆಗೆ ಪ್ರಸ್ತುತ ದಿನಮಾನದಲ್ಲಿ ಬೆಲೆ ಇಲ್ಲದಾಗಿದೆ. ಜಾತಿ ಪದ್ಧತಿ ಸಂಪೂರ್ಣ ನಿರ್ನಾಮವಾಗದ ವಿನಃ ಪ್ರಜಾಪ್ರಭುತ್ವ ವ್ಯವಸ್ಥೆ ಸದೃಢವಾಗಲು ಸಾಧ್ಯವಿಲ್ಲ, ನನ್ನನ್ನು ಒಳಗೊಂಡು ಇಂದು ಜಗತ್ತನ್ನೇ ಕಾಡುತ್ತಿರುವ ಎರಡು ಜ್ವಲಂತ ಸಮಸ್ಯೆಗಳೆಂದರೆ ಹಿಂದುತ್ವ ರಾಜಕಾರಣ, ಸಾಂಸ್ಥಿಕ ಭ್ರಷ್ಟಾಚಾರಗಳು ಎಂದರು.

ಭ್ರಷ್ಟಾಚಾರ ಮೊದಲು ವ್ಯಕ್ತಿಗೆ ಸೀಮಿತವಾಗಿತ್ತು. ಆದರೆ, ಇಂದು ಸಾಂಸ್ಥಿಕ ವ್ಯವಸ್ಥೆಗೂ ಹರಡಿಕೊಂಡಿರುವುದು ವಿಷಾದನೀಯ. ಬ್ರಿಟಿಷ್‌ ಆಡಳಿತದಲ್ಲಿ ಏನೆಲ್ಲಾ ಸುಧಾರಣೆ ಆದರೂ ಅವರನ್ನು ದೂಷಿಸುವುದು ಎಷ್ಟರ ಮಟ್ಟಿಗೆ ಸರಿ?. ಭಾರತದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಸುಧಾರಣೆಯಾಗದ ಹೊರತು ದೇಶದ ಸಮಸ್ಯೆಗಳಿಗೆ ಪರಿಹಾರವಿಲ್ಲ ಎಂದು ಹೇಳಿದರು.

ಪ್ರೊ. ಧನವಂತ ಹಾಜವಗೋಳ, ಮರಾಠಾ ವಿದ್ಯಾಪ್ರಸಾರಕ ಮಂಡಳದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಸಂವಾದ ನಡೆಸಿದರು. ಸಿವೈಸಿಡಿ ಕಲಾವಿದರು ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು. ಸಂಘದ ಪದಾಧಿಕಾರಿಗಳಿದ್ದರು.

PREV

Recommended Stories

ಯುವಜನತೆ ತಂಬಾಕು ಸೇವನೆಯಿಂದ ದೂರವಿರಿ
ಪ್ರತ್ಯೇಕ ರಾಜ್ಯಕ್ಕೆ ನನ್ನ ಸಹಮತವಿಲ್ಲ: ಬಸವರಾಜ ಹೊರಟ್ಟಿ