ಬೇಡಿಕೆ ಈಡೇರಿಕೆಗಾಗಿ ತಲೆ ಮೇಲೆ ಕಲ್ಲು ಹೊತ್ತು ಪೌರಕಾರ್ಮಿಕರ ಪ್ರತಿಭಟನೆ

KannadaprabhaNewsNetwork |  
Published : Dec 17, 2024, 01:00 AM IST
ಪ್ರತಿಭಟನೆ | Kannada Prabha

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾ​ಲಿಕೆ ಸ​ಭೆ​ಯಲ್ಲಿ ಆ​ಯು​ಕ್ತರು 15 ದಿನಗಳಲ್ಲಿ ನೇರ ನೇಮಕಾತಿ ಆದೇಶ ಪತ್ರ ನೀಡುವುದಾಗಿ ಮತ್ತು ನೇರ ವೇತನ ಬಗ್ಗೆ ಸರ್ಕಾರದ ಅನುಮೋದನೆ ಪಡೆಯುವುದಾಗಿ ಭ​ರ​ವಸೆ ನೀ​ಡಿ​ದ್ದರು. ಆ​ದರೆ ಅ​ದನ್ನು ಈ​ಡೇ​ರಿ​ಸಲು ವಿ​ಫ​ಲ​ರಾ​ಗಿ​ದ್ದಾರೆ.

ಹು​ಬ್ಬ​ಳ್ಳಿ:

ಪೌರ ಕಾ​ರ್ಮಿ​ಕರು ತಮ್ಮ ಬೇ​ಡಿ​ಕೆ ಈ​ಡೇ​ರಿ​ಕೆಗೆ ಆ​ಗ್ರ​ಹಿಸಿ ಇ​ಲ್ಲಿನ ಪಾ​ಲಿಕೆ ಕ​ಚೇರಿ ಎ​ದುರು ನ​ಡೆ​ಸು​ತ್ತಿ​ರುವ ಧ​ರಣಿ ಸ​ತ್ಯಾ​ಗ್ರಹ ಸೋ​ಮ​ವಾರ 6ನೇ ದಿ​ನಕ್ಕೆ ಮುಂದು​ವ​ರಿ​ದಿದ್ದು, ತ​ಲೆಯ ಮೇಲೆ ಕಲ್ಲು ಹೊ​ತ್ತು​ಕೊಂಡು ಪ್ರ​ತಿ​ಭ​ಟನೆ ನ​ಡೆ​ಸಿ​ದ​ರು.

ಬೆ​ಳ​ಗ್ಗೆ​ಯಿಂದ ಸಂಜೆ​ಯ ​ವ​ರೆಗೂ ಪ್ರ​ತಿ​ಭ​ಟ​ನಾ​ಕಾ​ರರು ತ​ಲೆಯ ಮೇಲೆ ಭಾ​ರದ ಕ​ಲ್ಲು ​ಳನ್ನು ಹೊ​ತ್ತು​ಕೊಂಡು, ವಿ​ನೂ​ತನ ರೀ​ತಿ​ಯಲ್ಲಿ ಸರ್ಕಾರದ ​ವಿ​ರುದ್ಧ ತಮ್ಮ ಆ​ಕ್ರೋಶ ವ್ಯ​ಕ್ತ​ಪ​ಡಿ​ಸಿ​ದ​ರು.

ಈ ಹಿಂದೆ ನ​ಡೆದ ಪಾ​ಲಿಕೆ ಸ​ಭೆ​ಯಲ್ಲಿ ಆ​ಯು​ಕ್ತರು 15 ದಿನಗಳಲ್ಲಿ ನೇರ ನೇಮಕಾತಿ ಆದೇಶ ಪತ್ರ ನೀಡುವುದಾಗಿ ಮತ್ತು ನೇರ ವೇತನ ಬಗ್ಗೆ ಸರ್ಕಾರದ ಅನುಮೋದನೆ ಪಡೆಯುವುದಾಗಿ ಭ​ರ​ವಸೆ ನೀ​ಡಿ​ದ್ದರು. ಆ​ದರೆ ಅ​ದನ್ನು ಈ​ಡೇ​ರಿ​ಸಲು ವಿ​ಫ​ಲ​ರಾ​ಗಿ​ದ್ದಾರೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ 3 ಬಾರಿ ನಮ್ಮ ಸಂಘದ ಬೇಡಿಕೆಗಳನ್ನು ಈಡೇರಿಸುವಂತೆ ಠರಾವು ಪಾಸ್‌ ಮಾಡಿದ್ದಾರೆ. ಆ​ದರೂ ಆ​ಯು​ಕ್ತರು ಬೇ​ಡಿಕೆ ಈ​ಡೇ​ರಿ​ಸಿಲ್ಲ. ಅ​ಲ್ಲ​ದೇ ಸರ್ಕಾರ ನಮ್ಮ ಬೇಡಿಕೆಗಳ ಬಗ್ಗೆ ನಕಾರಾತ್ಮಕ ಧೋರಣೆ ತಾ​ಳು​ತ್ತಿ​ರು​ವುದು ಖಂಡ​ನೀಯ ಎಂದು ಆ​ರೋ​ಪಿ​ಸಿ​ದ​ರು.

ಪೌ​ರ​ಕಾ​ರ್ಮಿ​ಕರ ಸಂಘದ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ಗಾಳೆಪ್ಪಾ ದ್ವಾಸಲಕೇರಿ, ಗಂಗಮ್ಮ ಸಿದ್ರಾಮಪುರ, ನೀಲವ್ವ ಬೆಳವಟಗಿ, ಶಿವಮ್ಮ ಬೇವಿನಮರದ, ಪದ್ಮಾ ಚಿಕ್ಕಣವರ, ಕಮಲವ್ವ ಕಲಕ್ಕನವರ, ರೇಣುಕಾ ಹೊಸಮನಿ, ರಾಮು ಮಾದರ, ಗಳೆಪ್ಪಾ ರಣತೂರ, ಶರೀ​ಫ್‌ ಮಸರಕಲ, ನಾಗಮ್ಮ ಅಂಗಡಿ, ನೀಲಮ್ಮ ಕದಂ, ಸುನೀತಾ ಮಾದರ, ಮುತ್ಯಾಲಮ್ಮ ಪೂಜಾ​ರ, ರಾಮಸುಲೋಚನಾ, ಪ್ರಿಯಾಂಕಾ ಹೊಸಪೇಟ್‌, ದಯಾನಂದ ಗೊಲ್ಲರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ಸುಧಾರಣೆ ಕಾಯ್ದೆ ವಿರೋಧಿಸಿ ನೌಕರರ ಪ್ರತಿಭಟನೆ
ತೋಟಗಾರಿಕೆಯಲ್ಲಿ ಕೊಪ್ಪಳ ಜಿಲ್ಲೆ ಅತ್ಯಮೂಲ್ಯ ಬದಲಾವಣೆ