ಶುದ್ಧ ನೀರಿನ ಘಟಕ ನಿರ್ವಹಣೆ ಅಗತ್ಯ

KannadaprabhaNewsNetwork |  
Published : Apr 12, 2025, 12:48 AM IST
೧೧ಕೆಎಲ್‌ಆರ್-೩ಕೋಲಾರದ ಅರಳೇಪೇಟೆಯ ಸುವರ್ಣ ಸೆಂಟ್ರಲ್ ಶಾಲೆಯ ಪಕ್ಕದ ಶುದ್ದ ಕುಡಿಯುವ ನೀರಿನ ಘಟಕ ಕೆಟ್ಟುನಿಂತಿರುವುದು. | Kannada Prabha

ಸಾರಾಂಶ

ಸರ್ಕಾರ ನೀರಿನ ಘಟಕವನ್ನು ಲಕ್ಷಾಂತರ ರೂ. ವೆಚ್ವ್ಚದಲ್ಲಿ ನಿರ್ಮಿಸಿ ಕೊಟ್ಟು ಇದರ ನಿರ್ವಾಹಣೆಗೆ ಟೆಂಡರ್ ನೀಡಲಾಗಿದೆ. ಆದರೆ ಟೆಂಡರ್‌ದಾರರು ಹೇಳುವವರೂ ಕೇಳುವವರೂ ಇಲ್ಲದೆ ನಿರ್ಲಕ್ಷಿಸುತ್ತಿದ್ದಾರೆ. ಈ ಕುರಿತು ನಗರಸಭಾ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಕನಿಷ್ಠ ಪಕ್ಷ ಜನಪ್ರತಿನಿಧಿಗಳಾದರೂ ಗಮನ ಹರಿಸಬೇಕಾಗಿ ಸಾರ್ವಜನಿಕರ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೋಲಾರನಗರದ ಅರಳೇಪೇಟೆಯ ಸುವರ್ಣ ಸೆಂಟ್ರಲ್ ಶಾಲೆಯ ಪಕ್ಕದ ಶುದ್ಧ ಕುಡಿಯುವ ನೀರಿನ ಘಟಕ ಸಮರ್ಪಕವಾದ ನಿರ್ವಾಹಣೆ ಇಲ್ಲದೆ ಸಾರ್ವಜನಿಕರು ಶುದ್ಧ ನೀರಿಗಾಗಿ ಪರದಾಡುವಂತಾಗಿದೆ. ಲಕ್ಷಾಂತರ ರುಪಾಯಿ ವೆಚ್ಚದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದೆ. ಆದರೆ ಸಮರ್ಪಕವಾದ ನಿರ್ವಹಣೆ ಇಲ್ಲವಾಗಿದೆ. ಶುದ್ದ ಕುಡಿಯುವ ನೀರಿನ ಘಟಕ ಯಂತ್ರಗಳು ಹಾಳಾಗುವುದು ಅಥವಾ ಸಮರ್ಪಕವಾಗಿ ನೀರಿನ ಪೊರೈಕೆ ಇಲ್ಲದೆ ಕುಡಿಯುವ ಶುದ್ದ ನೀರಿನ ಘಟಕದಲ್ಲಿ ಸಾರ್ವಜನಿಕರಿಗೆ ಸುಡು ಬೇಸಿಗೆಯಲ್ಲಿ ನೀರಿನ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಕಠಾರಿಪಾಳ್ಯದ ಘಟಕ:

ಕಠಾರಿಪಾಳ್ಯದ ನಾಗರಕುಂಟೆ ಮೇಲೆ ಇರುವ ಶುದ್ದ ಕುಡಿಯುವ ನೀರಿನ ಘಟಕದ ವ್ಯವಸ್ಥೆಯು ಹಾಳಾಗಿದೆ. ವಾರಕ್ಕೆ ಎರಡು-ಮೂರು ದಿನಗಳು ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಪರದಾಡ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧವಾಗಿ ನಗರಸಭಾ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಸಂಬಂಧಪಟ್ಟ ವಾರ್ಡಿನ ನಗರಸಭಾ ಸದಸ್ಯರು ಗಮನ ಹರಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಅನುವು ಮಾಡಿಕೊಡಬೇಕಾಗಿದೆ. ಸರ್ಕಾರ ನೀರಿನ ಘಟಕವನ್ನು ಲಕ್ಷಾಂತರ ರೂ. ವೆಚ್ವ್ಚದಲ್ಲಿ ನಿರ್ಮಿಸಿ ಕೊಟ್ಟು ಇದರ ನಿರ್ವಾಹಣೆಗೆ ಟೆಂಡರ್ ನೀಡಲಾಗಿದೆ. ಆದರೆ ಟೆಂಡರ್‌ದಾರರು ಹೇಳುವವರೂ ಕೇಳುವವರೂ ಇಲ್ಲದೆ ನಿರ್ಲಕ್ಷಿಸುತ್ತಿದ್ದಾರೆ. ಈ ಕುರಿತು ನಗರಸಭಾ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಕನಿಷ್ಠ ಪಕ್ಷ ಜನಪ್ರತಿನಿಧಿಗಳಾದರೂ ಗಮನ ಹರಿಸಬೇಕಾಗಿ ಸಾರ್ವಜನಿಕರ ಮನವಿ ಮಾಡಿದ್ದಾರೆ. ಶುದ್ಧ ನೀರಿಗೆ ದರ ಕಡಿಮೆ

ಶುದ್ದ ಕುಡಿಯುವ ನೀರಿನ ಘಟಕದಲ್ಲಿ ೨೦ ಲೀಟರ್ ನೀರು ೫ ರೂ.ಗೆ ಲಭ್ಯವಾದರೆ ಮನೆಗಳ ಬಳಿ ಬರುವ ಟ್ಯಾಂಕರ್‌ಗಳ ನೀರು ಸಮರ್ಪಕವಾದ ಗುಣಮಟ್ಟ ಇಲ್ಲದ ಕುಡಿಯುವ ನೀರು ಆಗಿದ್ದು ಶುದ್ದ ಕುಡಿಯುವ ನೀರಿನ ಘಟಕದ ನೀರು ಕಡಿಮೆ ಬೆಲೆಯ ಜತೆಗೆ ಗುಣಮಟ್ಟದ ನೀರು ಅಗಿರುವುದರಿಂದ ಸಾರ್ವಜನಿಕರು ಹೆಚ್ಚಾಗಿ ಶುದ್ದ ಕುಡಿಯುವ ನೀರಿನ ಘಟಕದಲ್ಲಿಯೇ ನೀರು ಪಡೆಯುವರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ