ಇಂದಿರಾ ಕ್ಯಾಂಟೀನ್‌ನಲ್ಲಿ ಉಪಾಹಾರ ಸೇವಿಸಿದ ಜಿಲ್ಲಾಧಿಕಾರಿ

KannadaprabhaNewsNetwork | Published : Jan 2, 2024 2:15 AM

ಸಾರಾಂಶ

ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಹೊಸ ಆಹಾರದ ಮೆನುವಿನಂತೆ ಆಹಾರ ವಿತರಣೆಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೋಮವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಹಾವೇರಿ

ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಉತ್ತರ ಕರ್ನಾಟಕ ಶೈಲಿಯ ಹೊಸ ಆಹಾರದ ಮೆನುವಿನಂತೆ ಆಹಾರ ವಿತರಣೆಗೆ ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ ಸೋಮವಾರ ಚಾಲನೆ ನೀಡಿದರು.

ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ಸೇವಿಸುವ ಮೂಲಕ ಚಾಲನೆ ನೀಡಿದ ಅವರು, ಕ್ಯಾಂಟೀನ್‌ಲ್ಲಿ ರುಚಿ ಹಾಗೂ ಶುಚಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಮಮತಾ, ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ಭಾನುವಾರ ಬೆಳಗಿನ ಉಪಾಹಾರ ಇಡ್ಲಿ-ಚಟ್ನಿ, ಕೇಸರಿಬಾತ್, ಖಾರಾ ಬಾತ್, ಮಧ್ಯಾಹ್ನ ಊಟಕ್ಕೆ ಅನ್ನ ಅಲ್ಸಂದಿಕಾಳು ಸಾಂಬಾರ್ ಹಾಗೂ ಕೀರ್, ರಾತ್ರಿ ಊಟಕ್ಕೆ ಅನ್ನ, ಮೊಳಕೆಕಾಳು ಸಾಂಬಾರ್ ಹಾಗೂ ಜೋಳದರೊಟ್ಟಿ ಸೊಪ್ಪಿನ ಪಲ್ಯ, ಸೋಮವಾರ ಬೆಳಗಿನ ಉಪಾಹಾರ ಇಡ್ಲಿ-ಚಟ್ನಿ, ಮಂಡಕ್ಕಿ, ಬಜ್ಜಿ, ಮಧ್ಯಾಹ್ನ ಊಟಕ್ಕೆ ಅನ್ನ, ಮೂಲಂಗಿ ಸಾಂಬಾರ್ ಹಾಗೂ ಮೊಸರನ್ನ, ರಾತ್ರಿ ಊಟಕ್ಕೆ ಅನ್ನ ಹಿರೇಕಾಯಿ ಸಾಂಬಾರ್, ಮೊಸರನ್ನ, ಚಪಾತಿ-ಸಾಗು ನೀಡಲಾಗುವುದು.

ಮಂಗಳವಾರ ಬೆಳಗಿನ ಉಪಹಾರ ಇಡ್ಲಿ-ಸಾಂಬಾರ, ಖಾರಾ ಬಾತ್-ಚಟ್ನಿ, ಮಧ್ಯಾಹ್ನ ಊಟಕ್ಕೆ ಅನ್ನ ಬದನೆಕಾಯಿ ಹಾಗೂ ರಾಗಿ ಅಂಬಲಿ, ರಾತ್ರಿ ಊಟಕ್ಕೆ ಜೋಳದ ರೊಟ್ಟಿ, ಸೊಪ್ಪು ಪಲ್ಯ, ರಾಗಿ ಅಂಬಲಿ, ಅನ್ನ ಕುಂಬಳಕಾಯಿ ಸಾಂಬಾರ ಹಾಗೂ ರಾಗಿ ಅಂಬಲಿ, ಚಪಾತಿ ಸಾಗು. ಬುಧವಾರ ಬೆಳಗಿನ ಉಪಹಾರ ಇಡ್ಲಿ-ಕರಿಬೇವು ಚಟ್ನಿ, ಅವಲಕ್ಕಿ ಚಟ್ನಿ, ಮಧ್ಯಾಹ್ನ ಊಟ ಅನ್ನ, ಬೀನ್ಸ್ ಸಾಂಬಾರ್ ಹಾಗೂ ಮೊಸರು ಅನ್ನ, ರಾತ್ರಿ ಊಟಕ್ಕೆ ಚಪಾತಿ ಸಾಗು ಹಾಗೂ ಮೊಸರನ್ನ, ಅನ್ನ ಮೂಲಂಗಿ ಸಾಂಬಾರ ಹಾಗೂ ಚಪಾತಿ-ಸಾಗು ನೀಡಬೇಕು.

ಗುರುವಾರ ಬೆಳಗಿನ ಉಪಹಾರ ಇಡ್ಲಿ ಸಾಂಬಾರ್, ವೆಜ್‌ಪಲಾವು ಚಟ್ನಿ, ಮಧ್ಯಾಹ್ನ ಅನ್ನ ಮೊಳಕೆಕಾಳಿನ ಸಾಂಬಾರ್ ಹಾಗೂ ಕೀರ್, ರಾತ್ರಿ ಊಟಕ್ಕೆ ಜೋಳದ ರೊಟ್ಟಿ ಸೊಪ್ಪು ಪಲ್ಯ, ಕೀರ್, ಅನ್ನ ಬದನೆಕಾಯಿ ಸಾಂಬಾರ್ ಹಾಗೂ ಜೋಳದ ರೊಟ್ಟಿ ಸೊಪ್ಪು ಪಲ್ಯ, ಶುಕ್ರವಾರ ಬೆಳಗಿನ ಉಪಾಹಾರ ಇಡ್ಲಿ ಸಾಂಬಾರ, ಚಿತ್ರಾನ್ನ ಚಟ್ನಿ, ಮಧ್ಯಾಹ್ನ ಊಟಕ್ಕೆ ಅನ್ನ ಹಿರೇಕಾಯಿ ಸಾಂಬಾರ್ ಹಾಗೂ ರಾಗಿ ಅಂಬಲಿ, ಚಪಾತಿ ಸಾಗು ಹಾಗೂ ರಾಗಿ ಅಂಬಲಿ, ಅನ್ನ ಅಲ್ಸಂದಿಕಾಳು ಸಾಂಬಾರ್ ಹಾಗೂ ಚಪಾತಿ ಸಾಗು, ಶನಿವಾರ ಬೆಳಗಿನ ಉಪಹಾರ ಇಡ್ಲಿ ಸಾಂಬಾರ, ಆಲೂಬಾತ್ ಚಟ್ನಿ, ಮಧ್ಯಾಹ್ನ ಊಟಕ್ಕೆ ಅನ್ನ ಕುಂಬಳಕಾಯಿ ಸಾಂಬಾರ ಹಾಗೂ ಕೀರ್, ರಾತ್ರಿ ಊಟಕ್ಕೆ ಜೋಳದ ರೊಟ್ಟಿ, ಸೊಪ್ಪು ಪಲು, ಕೀರ್, ಅನ್ನ ನುಗ್ಗೆಕಾಯಿ ಸಾಂಬಾರ ಹಾಗೂ ಜೋಳದ ರೊಟ್ಟಿ ಸೊಪ್ಪು ಪಲ್ಯ ನೀಡಲಾಗುವುದು ಎಂದು ತಿಳಿಸಿದರು.

Share this article