1.42 ಕೆ.ಜಿ. ಮಾದಕ ವಸ್ತು ಸಾಗಾಟ: ಕಾಲೇಜು ವಿದ್ಯಾರ್ಥಿನಿ ಬಂಧನ

KannadaprabhaNewsNetwork |  
Published : May 15, 2026, 02:45 AM IST
Suhana

ಸಾರಾಂಶ

35 ಲಕ್ಷ ರು. ಮೌಲ್ಯದ ಸುಮಾರು 1.42 ಕೆ.ಜಿ. ಮಾದಕ ವಸ್ತು ಹೊಂದಿದ್ದ 21ರ ಹರೆಯ ವಿದ್ಯಾರ್ಥಿನಿಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದು, ಆಕೆಯನ್ನು 10 ದಿನಗಳ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ.

ಮೂಲ್ಕಿ: 35 ಲಕ್ಷ ರು. ಮೌಲ್ಯದ ಸುಮಾರು 1.42 ಕೆ.ಜಿ. ಮಾದಕ ವಸ್ತು ಹೊಂದಿದ್ದ 21ರ ಹರೆಯ ವಿದ್ಯಾರ್ಥಿನಿಯನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದು, ಆಕೆಯನ್ನು 10 ದಿನಗಳ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದೆ.

ಪಣಂಬೂರು ಎಸಿಪಿ ತಂಡ ಹಾಗೂ ಮೂಲ್ಕಿ ಠಾಣೆಯ ತಂಡದಿಂದ ನಡೆದ ಕಾರ್ಯಾಚರಣೆಯಲ್ಲಿ ಠಾಣಾ ವ್ಯಾಪ್ತಿಯ ಮೂಲ್ಕಿ ರೈಲ್ವೇ ಸ್ಟೇಷನ್ ರಸ್ತೆಯಲ್ಲಿ ಮಂಗಳವಾರ ಹೈಡ್ರೊವಿಡ ಗಾಂಜಾ ಮಾದಕ ದ್ರವ್ಯ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.  

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರಬನ ನಿವಾಸಿ, ಕುಂದಾಪುರ ಕಾಲೇಜಿನ ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿನಿ ಸುಹಾನಾ (21) ಬಂಧಿತ ಆರೋಪಿ. ಈಕೆಯ ಬಳಿ ಇದ್ದ 35 ಲಕ್ಷ ರು. ಮೌಲ್ಯದ ಸುಮಾರು 1 ಕೆಜಿ 42 ಗ್ರಾಮ್ ಹೈಡ್ರೊವಿಡ ಗಾಂಜಾ ಎಂಬ ಮಾದಕ ವಸ್ತುವನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೊಬೈಲ್ ಪೋನ್ ಮತ್ತು ಇತರ ಸೊತ್ತು ವಶಪಡಿಸಿಕೊಳ್ಳಲಾಗಿದೆ. 

ಚೆನ್ನೈ ನಿಂದ ತರಿಸಿಕೊಂಡು ಹಣ ಗಳಿಸುವ ಉದ್ದೇಶ

ಈಕೆ ಮಾದಕ ವಸ್ತುವನ್ನು ಚೆನ್ನೈ ನಿಂದ ತರಿಸಿಕೊಂಡು ಮಂಗಳೂರಿನಲ್ಲಿ ಅಕ್ರಮವಾಗಿ ಪೂರೈಕೆ ಮಾಡಿ ಹಣ ಗಳಿಸುವ ಉದ್ದೇಶದಿಂದ ತಂದಿರುವುದಾಗಿ ತಿಳಿದು ಬಂದಿರುತ್ತದೆ.ಈಕೆ ಮಾದಕ ವಸ್ತುವನ್ನು ಕೈ ಬ್ಯಾಗ್ ನಲ್ಲಿ ಇರಿಸಿಕೊಂಡು ಅದನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಬಗ್ಗೆ ಮುಂಬೈ ಕಡೆಗೆ ಸಾಗಾಟ ಮಾಡಲು ಮುಲ್ಕಿ ರೈಲ್ವೇ ಸ್ಟೇಷನ್ ಕಡೆಗೆ ಬರುತ್ತಿರುವುದಾಗಿ ಬಂದ ಮಾಹಿತಿಯಂತೆ ಪಣಂಬೂರು ಎಸಿಪಿ ಸೂಚನೆಯಂತೆ ಮುಲ್ಕಿ ಪೊಲೀಸ್ ಉಪ ನಿರೀಕ್ಷಕರಾದ ರಾಘವೇಂದ್ರ ನಾಯ್ಕ್ ಮತ್ತು ಸಿಬ್ಬಂದಿ ಈಕೆಯನ್ನು ಬಂಧಿಸಿದ್ದರು. 

ಚೆನ್ನೈ ಮೂಲದ ವಿನೋದ್ ಎಂಬವರು ಕಳುಹಿಸಿಕೊಟ್ಟಿದ್ದನ್ನು ಮಾರಾಟ

ಈಕೆ ಹೈಡ್ರೊವೀಡ್ ಗಾಂಜಾವನ್ನು ಬ್ಯಾಂಕಾಕ್ ನಲ್ಲಿರುವ ಚೆನ್ನೈ ಮೂಲದ ವಿನೋದ್ ಎಂಬವರು ಕಳುಹಿಸಿಕೊಟ್ಟಿದ್ದನ್ನು ಮಾರಾಟದ ಬಗ್ಗೆ ಸಾಗಿಸುತ್ತಿದ್ದುದ್ದಾಗಿ ತಿಳಿದು ಬಂದಿದ್ದು, ಈಕೆಯ ವಿರುದ್ಧ ಮುಂಬೈ ಏರ್ ಪೋರ್ಟ್ ನಲ್ಲಿ ಮಾದಕ ವಸ್ತು ಸಾಗಾಟದ ಬಗ್ಗೆ ಕಸ್ಟಮ್ ಅಧಿಕಾರಿಯವರು ಕೇಸು ದಾಖಲಿಸಲಾಗಿದೆ. ಅಲ್ಲದೇ ಕಾವೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2026 ರ ಫೆಬ್ರವರಿ ತಿಂಗಳಲ್ಲಿ ಭಟ್ಕಳ ಮೂಲದ ಮಹಮ್ಮದ್ ರಾಯಿಸ್ ಎಂಬಾತ ಮಾದಕ ವಸ್ತುಗಳನ್ನು ಸಾಗಾಟ ಮಾಡಿದ ಬಗ್ಗೆ ದಾಖಲಾದ ಪ್ರಕರಣದಲ್ಲಿ ಮಾದಕ ವಸ್ತುವನ್ನು ನೀಡಿದ್ದ ಬಗ್ಗೆ ಈಕೆಯ ವಿರುದ್ದ ಪ್ರಕರಣ ದಾಖಲಾಗಿತ್ತು. ಈಕೆಯನ್ನು 13 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಯ ಸಲುವಾಗಿ 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿರುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸುಳ್ಳು ಹೇಳಿ ಕಾಂಗ್ರೆಸ್ ಸರ್ಕಾರದ ಮಾನ ಕಳೆಯಬೇಡಿ
ರೈತರ ಆರ್ಥಿಕ ಸ್ವಾವಲಂಬನೆಗೆ ಪಿಕೆಪಿಎಸ್‌ಗಳು ಸಹಕಾರಿ: ಜಗದೀಶ ಗುಡಗುಂಟಿ