ತಪ್ಪದ ವಾಣಿಜ್ಯ ಸಿಲಿಂಡರ್ ಗೋಳು

KannadaprabhaNewsNetwork |  
Published : Apr 02, 2026, 02:15 AM IST
1ಕೆಪಿಎಲ್23 ಸೌದೆ ಒಲೆ ಸಿದ್ಧ ಮಾಡಿಕೊಂಡಿರುವ ಗಿರೀಶ್ | Kannada Prabha

ಸಾರಾಂಶ

ಕೆಲವರಂತೂ ಹಳೆಯ ಕಾಲದ ಸೌದೆ ಒಲೆಯಂತೆ ಬಳಕೆ ಮಾಡುತ್ತಿದ್ದರೆ ಇನ್ನು ಕೆಲವರು ಅತ್ಯಾಧುನಿಕ ಸೌದೆ ಒಲೆ ಬಳಕೆ ಮಾಡುತ್ತಿದ್ದಾರೆ.

ಕೊಪ್ಪಳ: ಜಿಲ್ಲಾದ್ಯಂತ ವಾಣಿಜ್ಯ ಸಿಲಿಂಡರ್ ಸಮಸ್ಯೆ ಗೋಳು ತಪ್ಪುತ್ತಲೇ ಇಲ್ಲ. ಎಲ್ಪಿಜಿ ಗ್ಯಾಸ್ ಲಭ್ಯವಾಗದೆ ಇರುವುದರಿಂದ ಆಟೋ ಗ್ಯಾಸ್‌ ಸಿಗುತ್ತಿಲ್ಲ ಮತ್ತು ಕೆಲ ಪೆಟ್ರೋಲ್ ಬಂಕ್ ಬಂದ್ ಇರುವುದು ಸಮಸ್ಯೆಯಾಗಿದೆ.

ವಾಣಿಜ್ಯ ಬಳಕೆಯ ಸಿಲಿಂಡರ್ ಲಭ್ಯ ಇಲ್ಲದೆ ಇರುವುದರಿಂದ ಸೌದೆ ಒಲೆಯ ಮೇಲೆ ಅಡುಗೆ ಮಾಡುವುದು ಸಾಮಾನ್ಯವಾಗಿಯೇ ಇದ್ದು, ಕೆಲವರು ಅದರಲ್ಲಿಯೇ ನಾನಾ ರೀತಿಯ ಪ್ರಯೋಗ ಮಾಡುತ್ತಿದ್ದಾರೆ.

ಕೆಲವರಂತೂ ಹಳೆಯ ಕಾಲದ ಸೌದೆ ಒಲೆಯಂತೆ ಬಳಕೆ ಮಾಡುತ್ತಿದ್ದರೆ ಇನ್ನು ಕೆಲವರು ಅತ್ಯಾಧುನಿಕ ಸೌದೆ ಒಲೆ ಬಳಕೆ ಮಾಡುತ್ತಿದ್ದಾರೆ. ಅತ್ಯಾಧುನಿಕ ಸೌದೆ ಒಲೆ ಸಿಗದೆ ಇರುವುದರಿಂದ ತಾವೇ ಸಿದ್ಧ ಮಾಡಿಕೊಳ್ಳುವ ಪ್ರಯೋಗ ಮಾಡುತ್ತಿದ್ದಾರೆ.

ನಗರದ ಹೋಟೆಲ್ ಮಾಲಿಕ ಗಿರೀಶ್ ಎನ್ನುವವರು ತಾವೇ ಸೌದೆ ಒಲೆಯೊಂದನ್ನು ಸಿದ್ಧ ಮಾಡಿಕೊಂಡಿದ್ದು, ಅತ್ಯುತ್ತಮವಾಗಿದೆ ಎನ್ನುತ್ತಾರೆ. ಇದರಿಂದ ನಮಗೆ ಅಡುಗೆ ಮಾಡಲು ಅನುಕೂಲವಾಗಿದ್ದು, ಸಮಸ್ಯೆಯಿಂದ ಪಾರಾಗುವಂತೆ ಆಗಿದೆ ಎನ್ನುತ್ತಾರೆ.

ಸಿಲಿಂಡರ್ ಇಲ್ಲದೆ ಅಡುಗೆ ಮಾಡಲು ಆಗದೆ ಹೋಟೆಲ್ ಬಂದ್ ಮಾಡಿದ್ದೆವು, ಆದರೆ, ಈಗ ನಾವೇ ಸಿದ್ಧ ಮಾಡಿಕೊಂಡಿರುವ ಒಲೆಯ ಮೂಲಕ ಇಡ್ಲಿ, ಸಾಂಬರ್ ಮಾಡುತ್ತಿದ್ದೇವೆ ಎನ್ನುತ್ತಾರೆ.

ದುಬಾರಿಯಾದ ಆಟೋದರ: ಗ್ಯಾಸ್ ಸಿಗದೆ ಇರುವುದರಿಂದ ಮತ್ತು ಪೆಟ್ರೋಲ್ ಸಮಸ್ಯೆ ಇರುವುದರಿಂದ ಆಟೋದವರು ದರವನ್ನು ದುಬಾರಿ ಮಾಡಿದ್ದಾರೆ. ಹತ್ತು ರುಪಾಯಿ ಇದ್ದ ಶೇರಿಂಗ್ ಆಟೋ ದರ ಕೊಪ್ಪಳದಲ್ಲಿ ₹20 ಏರಿಕೆಯಾಗಿದೆ. ಆಟೋ ದರ ಮೊದಲಿಗಿಂತಲೂ ದುಪ್ಪಟ್ಟು ಆಗಿದ್ದು, ಪ್ರಯಾಣಿಕರಿಗೆ ಹೊರೆಯಾದರೂ ಹೆಚ್ಚಿರುವ ಗ್ಯಾಸ್‌ ದರ ಹಾಗೂ ಅಭಾವದಿಂದ ಇದು ಅನಿವಾರ್ಯ ಎಂದು ಆಟೋದವರು ಹೇಳುತ್ತಾರೆ.

ದುಬಾರಿಯಾದ ಇಡ್ಲಿ, ವಡಾ: ಸಾಮಾನ್ಯವಾಗಿ ಫುಟಪಾತ್‌ ಹೋಟೆಲ್ ನಲ್ಲಿ ಐದು ರುಪಾಯಿಗೆ ಒಂದು ಇಡ್ಲಿ, ಪ್ಲೇಟ್ ಇಡ್ಲಿಗೆ ₹10 ಇತ್ತು. ಆದರೆ, ಈಗ ಹತ್ತು ರುಪಾಯಿಗೆ ಸಿಂಗಲ್‌ ಮತ್ತು ಪ್ಲೇಟ್ ಗೆ ₹20 ರುಪಾಯಿ ಮಾಡಿದ್ದಾರೆ. ಎಲ್ಲದಕ್ಕೂ ಒಂದೇ ಉತ್ತರ ಗ್ಯಾಸ್ ಸಿಗುತ್ತಿಲ್ಲ. ಸಿಕ್ಕರೂ ದುಬಾರಿ. ಹೀಗಾಗಿ, ನಾವು ದರ ಏರಿಸಿದ್ದೇವೆ ಎನ್ನುತ್ತಾರೆ ಹೋಟೆಲ್ ಮಾಲಿಕರು.

ಕಟ್ಟಿಗೆಗೆ ಬೇಡಿಕೆ: ಸೌದೆ ಒಲೆ ಬಳಕೆ ಮಾಡುತ್ತಿರುವುದರಿಂದ ಸೌದೆಗೆ ಭಾರೀ ಬೇಡಿಕೆ ಬಂದಿದೆ. ಕಟ್ಟಿಗೆ ಅಡ್ಡೆಗಳಲ್ಲಿ ಬಿಸಾಡುತ್ತಿರುವ ಕಟ್ಟಿಗೆಗೂ ಬೆಲೆ ಬಂದಿದ್ದು, ಹಳ್ಳಿಯಲ್ಲೂ ಕಟ್ಟಿಗೆ ಮಾರಾಟ ಮಾಡುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರಿಗೆ ಸಾಮೂಹಿಕ ವಿವಾಹ ಅನುಕೂಲ: ಮುದುಕೇಶ್ವರ ಶಿವಾಚಾರ್ಯರು ಸ್ವಾಮಿಗಳು
ಲಿಂ. ಸಿದ್ಧಗಂಗಾ ಡಾ. ಶಿವಕುಮಾರ ಶ್ರೀ ಸದಾ ಸ್ಮರಣೀಯರು: ಜಗದೀಶ ಸಂಕನೂರ