ರಾಜ್ಯದಲ್ಲಿ ಬೆಲೆ ಏರಿಕೆಗೆ ಸಾಮಾನ್ಯ ಜನ ತತ್ತರ: ಎನ್.ಮಹೇಶ್

KannadaprabhaNewsNetwork |  
Published : Nov 30, 2026, 02:45 AM IST
29ಕೆಜಿಎಲ್91ಕೊಳ್ಳೇಗಾಲ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಶನಿವಾರ   ಹಮ್ಮಿಕೊಳ್ಳಲಾಗಿದ್ದ ಬೆಲೆ ಏರಿಕೆ,  ಸರ್ಕಾರದ ಸಂವಿಧಾನ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

1 ಲಕ್ಷ ಮತ ನೀಡಿದ ಜನತೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಮದ್ದೂರು- ಅಗರ ಭಾಗದ ರೈತರ ಕೆರೆ ನೀರನ್ನು ದಾಬಸ್ ಪೇಟೆ ಕೈಗಾರಿಕೆಗೆ ಇಲ್ಲಿಂದ ಪೂರೈಸಲು ಸಹಕರಿಸಿದ್ದೆ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರ ಉತ್ತಮ ಸಾಧನೆಯಾಗಿದೆ. ಇದೊಂದು ಜನವಿರೋಧಿ ಸರ್ಕಾರ ಎಂದು ಮಾಜಿ ಸಚಿವ ಎನ್.ಮಹೇಶ್ ಟೀಕಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

1 ಲಕ್ಷ ಮತ ನೀಡಿದ ಜನತೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಮದ್ದೂರು- ಅಗರ ಭಾಗದ ರೈತರ ಕೆರೆ ನೀರನ್ನು ದಾಬಸ್ ಪೇಟೆ ಕೈಗಾರಿಕೆಗೆ ಇಲ್ಲಿಂದ ಪೂರೈಸಲು ಸಹಕರಿಸಿದ್ದೆ ಕೊಳ್ಳೇಗಾಲ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರ ಉತ್ತಮ ಸಾಧನೆಯಾಗಿದೆ. ಇದೊಂದು ಜನವಿರೋಧಿ ಸರ್ಕಾರ ಎಂದು ಮಾಜಿ ಸಚಿವ ಎನ್.ಮಹೇಶ್ ಟೀಕಿಸಿದರು.

ತಾಲೂಕಿನಲ್ಲಿ ಬಿಜೆಪಿ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೆಲೆ ಏರಿಕೆ, ಸರ್ಕಾರದ ಸಂವಿಧಾನ ವಿರೋಧಿ ನೀತಿ ಖಂಡಿಸಿ ನಡೆಸಲಾದ ಪ್ರತಿಭಟನಾ ಧರಣಿಯ ನೇತೃತ್ವ ವಹಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಸಂಪೂರ್ಣ ಸಂವಿಧಾನ ವಿರೋಧಿಯಾಗಿದೆ ಎಂಬುದನ್ನು ಸಂವಿಧಾನ ದಿನಾಚರಣೆ ವೇಳೆ ದಾಖಲೆ ಸಮೇತ ತೋರಿಸಿದೆ. ದಿನಾಚಕರಣೆಗೆ ಜನರಿಗೆ ನಾನೂರು, ಐನೂರು ಕೊಟ್ಟುಕರೆದುಕೊಂಡು ಹೋಗಿ ಬಾಬಾ ಸಾಹೇಬರಿಗೆಅಪಮಾನಿಸಿದ್ದು ನಿಜಕ್ಕೂ ಖಂಡನೀಯ, ಇದನ್ನ ಬಿಜೆಪಿ ಮಾಡಿದ್ದರೆ ಸಾಕಷ್ಟು ವಿವಾದವುಂಟಾಗುತ್ತಿತ್ತು, ಕಾಂಗ್ರೆಸ್ ಸದಸ್ಯರು ಬೆಂಕಿ ಹಕಟ್ಟುವ ಕೆಲಸ ಮಾಡುತ್ತಿದ್ದರು ಎಂದು ಅಸಮಾದಾನಹೊರಹಾಕಿದರು.

ಗಂಡನ ಜೇಬಿನ ಹಣಕ್ಕೆ ಕತ್ತರಿ ಹಾಕಿ ಅವರಿಂದ ಸಾಕಷ್ಟು ಹಣ ದೋಚಿ ಅವರ ಪತ್ನಿಯಂದಿರಿಗೆ ಅಲ್ಪ ಸ್ವಲ್ಪ ಉಚಿತ ಯೋಜನೆ ಹೆಸರಿನಲ್ಲಿ ನೀಡುತ್ತಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ. ಜನತೆ ಈಕಾಂಗ್ರೆಸ್ ಸರ್ಕಾರ ಕಿವಿ ಕುಯ್ದು ಖಾರ ಕಾಯಿಸುವ ಕೆಲಸ ಮಾಡುತ್ತಿದೆ ಎಂದು ಲೇವಡಿ ಮಾಡಿದರು.

1 ಲಕ್ಷಕ್ಕೂ ಅಧಿಕ ಮತಗಳಿಸಿದೆ, 59 ಸಾವಿರ ಮತಗಳ ಅಂತರದಿಂದ ಗೆದ್ದೆ ಎಂಬ ಮಾತುಗಳನ್ನಾಡುವ ಶಾಸಕರ ಅಭಿವೃದ್ದಿ ಶೂನ್ಯ, ಈ ಕ್ಷೇತ್ರದ ಮತದಾರರು ಯಾವ ಪುರುಷಾರ್ಥಕ್ಕಾಗಿ ಇವರಿಗೆ ಲಕ್ಷಮತ ನೀಡಿದರೂ ತಿಳಿಯದಾಗಿದೆ. ಮುಖ್ಯಮಂತ್ರಿಗಳಿಗೆ ಜನಪರ ಕಾಳಜಿ ಇಲ್ಲ, ಸರ್ಕಾರಕ್ಕೆ ಜನರ ಅಭಿವೃದ್ದಿ ಬೇಕಿಲ್ಲ ಎಂದು ಕಿಡಿಕಾರಿದರು

ಕೊಳ್ಳೇಗಾಲ ಕ್ಷೇತ್ರದ ಸಮಗ್ರ ಅಭಿವೃದ್ದಿ ಮರೆತ ಶಾಸಕ ಶಾಸಕ ಎ. ಆರ್. ಕೃಷ್ಣಮೂರ್ತಿಗೆ 1ಲಕ್ಷಕ್ಕೂ ಅಧಿಕ ಮತ ನೀಡಿದ್ಯಾಕೆ ಎಂಬುದು ತಿಳಿಯದಾಗಿದೆ. ನಿಜಕ್ಕೂ 1ಮತದಿಂದ ಸೋತವರಿಗೆ ಕ್ಷೇತ್ರದ ಜನತೆ ಅತ್ಯಧಿಕ ಮತದಿಂದ ಗೆಲ್ಲಿಸುವ ಅಗತ್ಯವಿತ್ತೆ ಎಂದು ಪ್ರಶ್ನಿಸಿದರು.

ಮಾಜಿ ಶಾಸಕ ಎಸ್.ಬಾಲರಾಜು ಮಾತನಾಡಿ, ಕಾಂಗ್ರೆಸ್ ಸರ್ಕಾರಕ್ಕೆ ಜನರ ಹಿತ ಬೇಕಿಲ್ಲ, ಈಹಿನ್ನೆಲೆ ಸರ್ಕಾರದ ಕಾರ್ಯವೈಖರಿಗೆ ಜನತೆ ಭ್ರಮನಿರಸಗೊಂಡಿದ್ದಾರೆ. ಗ್ಯಾರಂಟಿಯಿಂದಾಗಿ ಬೆಲೆ ಏರಿಕೆ ಬಿಸಿಗೆ ಬಡವರು ತುತ್ತಾಗುತ್ತಿದ್ದಾರೆ, ದುಡಿಯುವ ಕೂಲಿಯಲ್ಲಿ ಹೆಚ್ಚಿನ ಪ್ರತಿಫಲವಿಲ್ಲ, ಆದರೆಬೆಲೆ ಏರಿಕೆ ಬೇಗೆಗೆ ಬವಣೆಪಡುವಂತಾಗಿದೆ. ಜನರು ಕುಡಿಯುವ ಹಾಲಿನಿಂದ ಮದ್ಯದತನಕ ಬೆಲೆ ಏರಿಕೆಯ ಬಿಸಿ ಜನ ಸಾಮಾನ್ಯರನ್ನು ತಟ್ಟಿದ್ದು ಭವಣೆಪಡುವಂತಾಗಿದೆ. ಬಡವರ ಹೊಟ್ಟೆ ಮೇಲೆ ಕಾಂಗ್ರೆಸ್ ಬರೆ ಎಳೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಈ ಕ್ಷೇತ್ರದ ಶಾಸಕರಾದ ಕೃಷ್ಣಮೂರ್ತಿ ಅವರು ಒಂದೇ ಒಂದು ಜನರಿಗಾಗಿ ಉತ್ತಮ ಕೆಲಸ ಮಾಡಿಲ್ಲ, ಇರುವ ರಸ್ತೆಗಳ ಸುಧಾರಣೆಗೆ ಕ್ರಮವಹಿಸಿಲ್ಲ, ನಮ್ಮ ಮದ್ದೂರು ಭಾಗಗಳ ಕೆರೆಗಳಿಂದ ದಾಬಸ್‌ಪೇಟೆಗೆ ನೀರು ಕೊಂಡೊಯ್ಯುವ ಯೋಜನೆಗೆ ಸಹಕರಿಸಿದ್ದು ಶಾಸಕರ ಸಾಧನೆ ಎಂದರು.

ಹಿಂದುಳಿದ ವರ್ಗಗಳ ಮಾಜಿ ಜಿಲ್ಲಾಧ್ಯಕ್ಷ ನಟರಾಜೇಗೌಡ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಎಂ.ಶಿವಕುಮಾರ್ ಬೂದಿತಿಟ್ಟು, ಎಸ್ಸಿ ಘಟಕ ಅಧ್ಯಕ್ಷ ಸಿದ್ದಪ್ಪಾಜಿ, ಟಗರಪುರ ರೇವಣ್ಣ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಎಂ.ಶಿವಕುಮಾರ್ ಬೂದಿತಿಟ್ಟು, ಎಸ್ಸಿ ಘಟಕ ಅಧ್ಯಕ್ಷ ಸಿದ್ದಪ್ಪಾಜಿ, ಟಗರಪುರ ರೇವಣ್ಣಡಾ.ಲೋಕೇಶ್, ಯಳಂದೂರು ಮಂಡಲ ಅದ್ಯಕ್ಷ ಅನಿಲ್, ಸೋಮಣ್ಣ ಉಪ್ಪಾರ್, ಬಸವರಾಜಪ್ಪ, ಚಂದ್ರಪ್ಪ, ಜಿಲ್ಲಾ ಉಪಾಧ್ಯಕ್ಷೆ ಪದ್ಮಾ, ಮಹೇಶ್, ಬಿಂಧು ಲೋಕೇಶ್, ಭೃಂಗೇಶ್, ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಶಿವಮ್ಮ, ಸಲಹಾ ಸಮಿತಿ ಸದಸ್ಯ ಮಮತಾ ಬದ್ರಿನಾಥ್, ಎಸ್ಟಿ ಮೋರ್ಚಾ ಮಹಿಳಾ ಘಟಕ ಅಧ್ಯಕ್ಷ ಸುಶೀಲಾ ಶಾಂತರಾಜು, ಕುಣಗಳ್ಳಿ ರವಿ, ಬಸವರಾಜು (ದ್ವಾರಕಿ), ಮಧುಚಂದ್ರ, ಮಹದೇವಪ್ರಸಾದ್, ಯುವಮೋರ್ಚಾ ಅಧ್ಯಕ್ಷ ಆನಂದ್, ಎಸ್ಟಿ ಮೋರ್ಚಾ ಅಧ್ಯಕ್ಷ ಚಂದನ್, ಶಶಿಕುಮಾರಿ, ವಕೀಲರು ರಾಜೇಂದ್ರ, ಬಸವರಾಜು, ಕೆ.ಕೆ.ಮೂರ್ತಿ, ಚಿಲಕವಾಡಿ ಷಣ್ಮುಖ ಇತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಖಿಲ ಭಾರತ ಫಿಡೆ ರ್‍ಯಾಪಿಡ್ ಚೆಸ್‌, ಚಿರಂತ್‌ ಪ್ರಥಮ
ಸಕ್ಕರೆ ರಿಕವರಿ ವರದಿಯಲ್ಲಿ ರೈತರಿಗೆ ಮೋಸ; ತನಿಖೆಗೆ ಆಗ್ರಹ