ಕನ್ನಡ ಭಾಷೆ ನಮ್ಮ ಆತ್ಮ ಗೌರವ, ಅಸ್ಮಿತೆ: ಶಿಕ್ಷಕ ಎಂ.ಶಾಂತರಾಜು

KannadaprabhaNewsNetwork |  
Published : Nov 30, 2026, 02:45 AM IST
ಎಂ ಶಾಂತರಾಜು | Kannada Prabha

ಸಾರಾಂಶ

ಭಾರತೀಯ ಪ್ರಾಚೀನ ಭಾಷೆಗಳ ಪರಂಪರೆಯಲ್ಲಿ ನಮ್ಮ ಕನ್ನಡಕ್ಕೆ ಅಗ್ರಸ್ಥಾನ. ನುಡಿದಂತೆ ಬರೆಯುವ, ಬರೆದಂತೆ ಓದುವ ಜಗತ್ತಿನ ಏಕೈಕ ಭಾಷೆ ಎಂದರೆ ಅದು ಕನ್ನಡ ಮಾತ್ರ. ಶೇ ೯೯ರಷ್ಟು ಶುದ್ಧ ವೈಜ್ಞಾನಿಕ ಭಾಷೆ ನಮ್ಮದು ಎನ್ನುವುದಕ್ಕೆ ನಮಗೆ ಬಹಳ ಹೆಮ್ಮೆಯಾಗುತ್ತದೆ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕನ್ನಡ ನಮ್ಮ ಆತ್ಮ ಗೌರವ, ಅಸ್ಮಿತೆ ಎಂದು ಹಿರಿಯ ಶಿಕ್ಷಕ ಎಂ.ಶಾಂತರಾಜು ತಿಳಿಸಿದರು.

ತಾಲೂಕಿನ ಸಂತೇಮರಳ್ಳಿಯ ಇನ್ಫಿನಿಟಿ ಶಾಲೆಯಲ್ಲಿ ಜೆಎಸ್‌ಬಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಮಾಸಾಚರಣೆ ೨೦೨೬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾರತೀಯ ಪ್ರಾಚೀನ ಭಾಷೆಗಳ ಪರಂಪರೆಯಲ್ಲಿ ನಮ್ಮ ಕನ್ನಡಕ್ಕೆ ಅಗ್ರಸ್ಥಾನ. ನುಡಿದಂತೆ ಬರೆಯುವ, ಬರೆದಂತೆ ಓದುವ ಜಗತ್ತಿನ ಏಕೈಕ ಭಾಷೆ ಎಂದರೆ ಅದು ಕನ್ನಡ ಮಾತ್ರ. ಶೇ ೯೯ರಷ್ಟು ಶುದ್ಧ ವೈಜ್ಞಾನಿಕ ಭಾಷೆ ನಮ್ಮದು ಎನ್ನುವುದಕ್ಕೆ ನಮಗೆ ಬಹಳ ಹೆಮ್ಮೆಯಾಗುತ್ತದೆ ಎಂದು ಹೇಳಿದರು.

ಗ್ರೀಕ್ ಭಾಷೆಯ ನಾಟಕಗಳಲ್ಲಿ ಕನ್ನಡ ಭಾಷೆಯ ಪದಗಳು ಉಲ್ಲೇಖವಾಗಿರುವುದು ನಮ್ಮ ಭಾಷೆಯ ಪ್ರಾಚೀನತೆಗೆ ಸಾಕ್ಷಿಯಾಗಿದೆ. ಹಲವಾರು ಪುರಾಣ ಕಥೆಗಳಲ್ಲೂ ಕನ್ನಡನಾಡು ನುಡಿಯ ಬಗ್ಗೆ ಹೇಳುವುದನ್ನು ನಾವು ಕೇಳಬಹುದು. ವಿದೇಶಿಯರಿಂದ ನಿಘಂಟು ರಚಿಸಿಕೊಂಡು ಜಗತ್ತಿನ ಮೊತ್ತ ಮೊದಲ ಭಾಷೆ ನಮ್ಮ ಕನ್ನಡ ಎಂದು ಹೇಳಿದರು.

ಇಂದು ನಮ್ಮ ನಾಡಿನಲ್ಲಿ ಸುಮಾರು ಆರೂವರೆ ಕೋಟಿಗೂ ಹೆಚ್ಚಿನ ಜನರು ಕನ್ನಡವನ್ನು ಮಾತೃ ಭಾಷೆಯಾಗಿ ಮಾತನಾಡುವವರಿದ್ದರು, ನಾವು ನಮ್ಮ ಭಾಷೆಯ ಮೇಲೆ ಅಭಿಮಾನವಿಲ್ಲದೆ, ಅನ್ಯ ಭಾಷೆಯ ಮೇಲೆ ಆಸಕ್ತಿ ಹೊಂದುತ್ತಿದ್ದೇವೆ. ಇದು ಬಹಳ ಖೇದನಿಯ ಸಂಗತಿ. ಇಂತಹ ಬೆಳವಣಿಗೆಗೆ ಕಡಿವಾಣ ಹಾಕಬೇಕು. ಮಕ್ಕಳು ಶಾಲಾ ಹಂತದಲ್ಲೇ ನಾಡು-ನುಡಿ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವ ಸಲುವಾಗಿ ಹೆಚ್ಚೆಚ್ಚು ಕನ್ನಡ ಪುಸ್ತಕಗಳನ್ನು ಓದಬೇಕು, ಬರೆಯಬೇಕು. ನಾಡಿನ ಕೀರ್ತಿಯನ್ನು ಇನ್ನೂ ಎತ್ತರಕ್ಕೆ ಬೆಳೆಸುವ ಜವಾಬ್ದಾರಿ ನಮ್ಮದು ಎಂದರು.

ಶಾಲೆಯ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ನಮ್ಮ ನಾಡು ಕರ್ನಾಟಕದ ಸಂಕೇತವಾಗಿ ಹಳದಿ ಹಾಗೂ ಕೆಂಪು ಬಣ್ಣದ ಬಾವುಟವಿದೆ. ಕನ್ನಡದ ಬಾವುಟ ಕೇವಲ ಬಣ್ಣದ ಬಾವುಟವಲ್ಲ. ಅದು ಕನ್ನಡಿಗರ ಭಾವೈಕ್ಯತೆಯ ಸಂಕೇತ. ನಮ್ಮ ಹಿರಿಯರು ಮಾಡಿಕೊಟ್ಟ ಹಳದಿ ಕೆಂಪು ಧ್ವಜ ನಮ್ಮೆಲ್ಲ ಕನ್ನಡಿಗರ ಏಕತೆಯ ಸಂಕೇತವೂ ಹೌದು ಎಂದು ತಿಳಿಸಿದರು.

ಜೆಎಸ್‌ಬಿ ಪ್ರತಿಷ್ಠಾನದ ಅಧ್ಯಕ್ಷ ಎಸ್ ಶಶಿಕುಮಾರ್ ಮಾತನಾಡಿ, ಈಗಾಗಲೇ ಜಿಲ್ಲಾದ್ಯಂತ ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಪ್ರತಿಯೊಬ್ಬರಲ್ಲೂ ಕನ್ನಡದ ಬಗ್ಗೆ ಅಭಿಮಾನ ಬೆಳೆಸುವ ಕಾರ್ಯವನ್ನು ಪ್ರತಿಷ್ಠಾನವು ಮಾಡುತ್ತಿದ್ದು, ಮುಂದಿನ ದಿನಗಳಲ್ಲೂ ನಿರಂತರವಾಗಿ ನಾಡು-ನುಡಿಯ ಸೇವೆ ಮುಂದುವರೆಯಲಿದೆ. ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚಾಗಿ ಮಾತನಾಡುವುದು, ಓದುವುದು, ಬರೆಯುವುದರ ಮೂಲಕ ನಮ್ಮ ಭಾಷೆಯನ್ನು ಸದಾ ಚಲನೆಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದರು.

ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕಗಳ ಬಹುಮಾನ ನೀಡಲಾಯಿತು. ಕನ್ನಡ ಓದನ್ನು ಉತ್ತೇಜಿಸಲು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಕನ್ನಡ ಕಿರುಪುಸ್ತಕ ನೀಡಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಬೆಳ್ಳಪ್ಪ ಸೇರಿದಂತೆ ಎಲ್ಲಾ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪೋಷಕರು ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಖಿಲ ಭಾರತ ಫಿಡೆ ರ್‍ಯಾಪಿಡ್ ಚೆಸ್‌, ಚಿರಂತ್‌ ಪ್ರಥಮ
ಸಕ್ಕರೆ ರಿಕವರಿ ವರದಿಯಲ್ಲಿ ರೈತರಿಗೆ ಮೋಸ; ತನಿಖೆಗೆ ಆಗ್ರಹ