ರೈತ ಮಿತ್ರ ಸಂಘದಿಂದ ರಾಜ್ಯೋತ್ಸವ

KannadaprabhaNewsNetwork |  
Published : Nov 30, 2026, 02:45 AM IST
ಕರ್ನಾಟಕ ರಾಜ್ಯ ರೈತ ಮಿತ್ರ  ಸಂಘದಿಂದ ಕನ್ನಡ ರಾಜ್ಯೋತ್ಸವ | Kannada Prabha

ಸಾರಾಂಶ

ಕರ್ನಾಟಕ ರಾಜ್ಯ ರೈತ ಮಿತ್ರ ಎಲೆಕ್ಟ್ರಿಕಲ್ ಮತ್ತು ಮೋಟಾರ್ ರಿವೈಡಿಂಗ್ ಸಂಘದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ನಗರದಲ್ಲಿ ಜೀಪ್ ಮೆರವಣಿಗೆ ನಡೆಸಲಾಯಿತು. ತಮ್ಮ ಮೋಟರ್ ಪಂಪ್ ಎತ್ತುವ ಜೀಪ್‌ಗಳಿಗೆ ಜೈ ಭುವನೇಶ್ವರಿ ಪೋಟೊ ಹಾಗೂ ಕನ್ನಡ ಬಾವುಟ ಕಟ್ಟಿ ಶೃಂಗರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕರ್ನಾಟಕ ರಾಜ್ಯ ರೈತ ಮಿತ್ರ ಎಲೆಕ್ಟ್ರಿಕಲ್ ಮತ್ತು ಮೋಟಾರ್ ರಿವೈಡಿಂಗ್ ಸಂಘದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ನಗರದಲ್ಲಿ ಜೀಪ್ ಮೆರವಣಿಗೆ ನಡೆಸಲಾಯಿತು. ತಮ್ಮ ಮೋಟರ್ ಪಂಪ್ ಎತ್ತುವ ಜೀಪ್‌ಗಳಿಗೆ ಜೈ ಭುವನೇಶ್ವರಿ ಪೋಟೊ ಹಾಗೂ ಕನ್ನಡ ಬಾವುಟ ಕಟ್ಟಿ ಶೃಂಗರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.

ನಗರದ ಜಿಲ್ಲಾ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಿಂದ ಹೊರಟ ಜೀಪ್ ಜಾಥಾಕ್ಕೆ ಕರ್ನಾಟಕ ಅಭಿವೃದ್ದಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಹಸಿರು ನಿಶಾನೆ ತೋರಿದರು. ಬಳಿಕ ಜೀಪ್ ಜಾಥಾವು ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ಸರ್ಕಲ್, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್ ರಸ್ತೆ ಸುಲ್ತಾನ್ ಷರೀಪ್ ರಸ್ತೆ, ಗುಂಡ್ಲುಪೇಟೆ ಸರ್ಕಲ್ ಮಾರ್ಗವಾಗಿ ಮತ್ತೆ ಕ್ರೀಡಾಂಗಣ ತಲುಪಿತು.

ಕರ್ನಾಟಕ ಅಭಿವೃದ್ದಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಮಾತನಾಡಿ, ಕರ್ನಾಟಕ ರಾಜ್ಯ ರೈತ ಮಿತ್ರ ಎಲೆಕ್ಟ್ರಿಕಲ್ ಮತ್ತು ಮೋಟಾರ್ ರಿವೈಡಿಂಗ್ ಸಂಘದವರು ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು. ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಹೋರಾಟ ಅಗತ್ಯವಾಗಿದೆ. ನಿಮ್ಮ ಯಾವುದೇ ಹೋರಾಟಕ್ಕೆ ನಮ್ಮ ಸಂಘದ ಬೆಂಬಲ ಇರುತ್ತದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಗೌಡಿಕೆ ನಾಗೇಶ್ ಮಾತನಾಡಿ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಮೋಟಾರ್ ರಿವೈಡಿಂಗ್ ಹಾಗೂ ಎಲೆಕ್ಟ್ರಿಕಲ್ ಕೆಲಸ ಮಾಡುವವರು ಬಹಳಷ್ಟು ಮಂದಿ ಇದ್ದಾರೆ. ಇವರ ರಕ್ಷಣೆ ಮತ್ತು ಸಂಘಟನೆ ಮಾಡುವ ನಿಟ್ಟಿನಲ್ಲಿ ಸಂಘವನ್ನು ಸ್ಥಾಪನೆ ಮಾಡಿದ್ದು, ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಮಾಡುವ ನಿಟ್ಟಿನಲ್ಲಿ ಜೀಪ್ ಜಾಥಾವನ್ನು ಹಮ್ಮಿಕೊಳ್ಲಲಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಜಾಹೀರ್, ಖಜಾಂಚಿ ರೇವಣ್ಣ, ಕಾರ್ಯದರ್ಶಿಗಳಾದ ನಾಗರಾಜು, ಮೂಡ್ನಾಕೂಡು ಮಹೇಶ್, ಅರಳೀಕಟ್ಟೆ ಮಹೇಶ್, ಸಂತೇಮಹರಳ್ಳಿ ರಾಜು, ನಾಗೇಂದ್ರ ,ಮೈಸೂರು ಜಿಲ್ಲಾ ಸಂಘದ ಅಧ್ಯಕ್ಷ ನಾಗೇಂದ್ರ, ಕಾಳನಹುಂಡಿ ನಾಗೇಂದ್ರ, ಮೈಸೂರು ಆಲಿ, ರೆಹಮಾನ್, ಗುರುಸ್ವಾಮಿ, ಕುಮಾರ್, ಮೊದಲಾಧವರು ಇದ್ದರು. ೫೦ಕ್ಕು ಜೀಪ್‌ಗಳು ರ್‍ಯಾಲಿಯಲ್ಲಿ ಭಾಗವಹಿಸಿ ಗಮನ ಸೆಳೆದವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಖಿಲ ಭಾರತ ಫಿಡೆ ರ್‍ಯಾಪಿಡ್ ಚೆಸ್‌, ಚಿರಂತ್‌ ಪ್ರಥಮ
ಸಕ್ಕರೆ ರಿಕವರಿ ವರದಿಯಲ್ಲಿ ರೈತರಿಗೆ ಮೋಸ; ತನಿಖೆಗೆ ಆಗ್ರಹ