ಹುಬ್ಬಳ್ಳಿ:
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಮನೆಗಳ ಹಂಚಿಕೆ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಕರೆದಂತೆ ನಾಟಕವಾಡಲಾಗಿದೆ. ಅಭಿವೃದ್ಧಿ, ಕೈಗಾರಿಕೆಗಳ ಸ್ಥಾಪನೆ ವಿಷಯದಲ್ಲಿ ಉತ್ತರ ಕರ್ನಾಟಕ ನೆನಪಾಗುವುದಿಲ್ಲ. ಆದರೆ, ತಮ್ಮ ಕುರ್ಚಿ ಉಳಿಸಿಕೊಳ್ಳಲು ಹಾಗೂ ಸರ್ಕಾರದ ಹಣದಲ್ಲಿ ಆಯೋಜಿಸಿರುವ ಮನೆಗಳ ವಿತರಣೆ ಹೆಸರಿನ ಬಲ ಪ್ರದರ್ಶನ ಸಮಾರಂಭಕ್ಕೆ ಉತ್ತರ ಕರ್ನಾಟಕ ಜನರು ನೆನಪಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇನ್ನು, ಮನೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರವೂ ಅನುದಾನ ನೀಡಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಇದನ್ನು ಮರೆತು ರಾಜ್ಯದ ಅನುದಾನದಲ್ಲೇ ಮನೆಗಳನ್ನು ನಿರ್ಮಾಣ ಮಾಡಿದಂತೆ ಬಿಂಬಿಸುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿ ಹಂಚಿಕೆಯಾದ, ಸ್ಲಂ ಬೋರ್ಡ್ ನಿರ್ಮಿಸಿರುವ ಮನೆಗಳಿಗೆ ಕೇಂದ್ರ ತನ್ನ ಪಾಲಿನ ಅನುದಾನ ನೀಡಿದೆ. ಆದರೆ, ಇದ್ಯಾವುದನ್ನೂ ಗಣನೆಗೆ ತೆಗೆದೊಕೊಳ್ಳದ ರಾಜ್ಯ ಸರ್ಕಾರ, ಇಡೀ ಮನೆಗಳ ನಿರ್ಮಾಣದ ಕ್ರೆಡಿಟ್ ಅನ್ನು ತಾನೇ ತೆಗೆದುಕೊಳ್ಳಲು ಪ್ರಯತ್ನಿಸಿದೆ. ಎಲ್ಲಿಯೂ ಕೇಂದ್ರ ಸರ್ಕಾರ ಅನುದಾನ ನೀಡಿದೆ ಎಂದು ಹೇಳಿಕೊಳ್ಳದೆ, ಸಂಪೂರ್ಣ ತಮ್ಮ ಅನುದಾನದಲ್ಲೇ ನಿರ್ಮಿಸಲಾಗಿದೆ ಎಂಬುದನ್ನು ಜನರಲ್ಲಿ ಬಿಂಬಿಸುವ ಪ್ರಯತ್ನ ಮಾಡಿದೆ ಎಂದಿದ್ದಾರೆ ಬೆಲ್ಲದ.