ಗ್ಯಾರಂಟಿಗಳ ಹಗ್ಗದ ಮೇಲೆ ಕಾಂಗ್ರೆಸ್ ಸರ್ಕಾರ: ಗಾಯತ್ರಿ

KannadaprabhaNewsNetwork | Published : Apr 3, 2024 1:33 AM

ಸಾರಾಂಶ

ಗ್ಯಾರಂಟಿಗಳ ನೆಪದಲ್ಲಿ ಕಳೆದ 10 ತಿಂಗಳಿನಿಂದಲೂ ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಆಳ್ವಿಕೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಗ್ಯಾರಂಟಿ ಹಗ್ಗದ ಮೇಲೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಸಾಗುತ್ತಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ದಾವಣಗೆರೆಯಲ್ಲಿ ಟೀಕಿಸಿದ್ದಾರೆ.

- ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಯಾಚನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಗ್ಯಾರಂಟಿಗಳ ನೆಪದಲ್ಲಿ ಕಳೆದ 10 ತಿಂಗಳಿನಿಂದಲೂ ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಆಳ್ವಿಕೆಯಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಗ್ಯಾರಂಟಿ ಹಗ್ಗದ ಮೇಲೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಸಾಗುತ್ತಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಟೀಕಿಸಿದರು.

ನಗರದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತೆರೆದ ವಾಹನದಲ್ಲಿ ಮತ್ತು ಕೀ ವೋಟರ್ಸ್‌ ಮನೆಗಳಿಗೆ ತೆರಳಿ ಮತಯಾಚಿಸಿ, ನಂತರ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದು, ಅನ್‌ ಗ್ಯಾರಂಟಿ ಆಳ್ವಿಕೆ ನಡೆಸಿದ್ದಾರೆ ಎಂದು ಆರೋಪಿಸಿದರು.

ದೇಶದ ಅಭಿವೃದ್ಧಿ, ಸುರಕ್ಷತೆ, ಸಾಕ್ಷರತೆ, ಹೆಣ್ಣುಮಕ್ಕಳ ರಕ್ಷಣೆಗಾಗಿ ಕೇಂದ್ರದಲ್ಲಿ ಮತ್ತೊಮ್ಮೆ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕು. ಮೋದಿ ಅಧಿಕಾರಕ್ಕೆ ಬರಬೇಕೆಂದರೆ ದಾವಣಗೆರೆ ಕ್ಷೇತ್ರದಿಂದ ತಮ್ಮನ್ನು ಲೋಕಸಭೆಗೆ ಆಯ್ಕೆ ಮಾಡುವ ಮೂಲಕ ಮೋದಿ ಸರ್ಕಾರ ರಚನೆಗೆ ಮಧ್ಯ ಕರ್ನಾಟಕ ನಮ್ಮ ಜಿಲ್ಲೆಯ ಮತದಾರರ ಕೊಡುಗೆಯೂ ಇರಬೇಕು ಎಂದು ಮನವಿ ಮಾಡಿದರು.

ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ, ವೈ.ಮಲ್ಲೇಶ, ಎಂ.ಪಿ.ಕೃಷ್ಣಮೂರ್ತಿ ಪವಾರ್, ನವೀನ, ಶಂಕರಗೌಡ ಬಿರಾದಾರ, ಸೋಗಿ ಗುರು, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಜಿ.ಎಸ್. ಅಶ್ವಿನಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಗ್ಯಮ್ಮ, ಬಿ.ಎಂ. ಸತೀಶ ಕೊಳೇನಹಳ್ಳಿ, ಸೋಗಿ ಶಾಂತಕುಮಾರ, ಜಯಮ್ಮ, ಪ್ರೇಮಮ್ಮ ಇತರರು ಇದ್ದರು.

ಇದಕ್ಕೂ ಮುನ್ನ ನಗರ ದೇವತೆ ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನ ಹಾಗೂ ಹಳೇ ಪೇಟೆ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ, ಮಂಗಳವಾರದ ಪ್ರಚಾರ ಕಾರ್ಯ ಆರಂಭಿಸಿದರು.

ಹಳೇ ಪೇಟೆ, ಜಾಲಿ ನಗರ ಭಾಗದಲ್ಲಿ ಗಾಯತ್ರಿ ಸಿದ್ದೇಶ್ವರ ಮತಯಾಚಿಸಿದರು. ಕೀ ವೋಟರ್ಸ್‌ ಮನೆಗೆಳಿಗೂ ತೆರಳಿ ಮತ ಯಾಚಿಸಿದರು. ಅಕ್ಕಿ ಗಿರಣಿ ಮಾಲೀಕ ಲೋಹಿತ್ ಪ್ರಿಯದರ್ಶಿನಿ, ಮುಖಂಡರಾದ ಅಡಿವೆಪ್ಪ, ಜಯಪ್ರಕಾಶ ಮಾಗಿ, ಪ್ರವೀಣ, ಜಿ.ಕೃಷ್ಣೋಜಿ ರಾವ್‌, ಜಯಪ್ರಕಾಶ ಜವಳಿ ಇತರರ ನಿವಾಸಕ್ಕೆ ಭೇಟಿ ನೀಡಿದ ಗಾಯತ್ರಿ ಸಿದ್ದೇಶ್ವರ ಉಭಯ ಕುಶಲೋಪರಿಸಿ, ಮತಯಾಚಿಸಿದರು.

ಅನಂತರ ಕೊಂಡಜ್ಜಿ ರಸ್ತೆಯ ಸವಿತಾ ಸಮಾಜದ ಸಭಾ ಭವನದಲ್ಲಿ ಮುಖಂಡರ ಸಭೆ ನಡೆಸಿದರು. ಬಿಜೆಪಿ ಸದಾ ನಿಮ್ಮೊಂದಿಗೆ ನಿಲ್ಲುತ್ತದೆ. ತಾವು ಸಹ ಸಹಾ ನಿಮ್ಮೆಲ್ಲರ ಜೊತೆಗೆ ನಿಲ್ಲುವುದಾಗಿ ಭರವಸೆ ನೀಡಿದರು. ಶ್ರೀ ನಿಮಿಷಾಂಬ ಸಮಾಜದ ಬಾಂಧವರ ಜೊತೆ ಮಾತನಾಡಿ, ಮತಯಾಚಸಿದರು. ಸಂಜೆ 5 ಗಂಟೆ ನಂತರ ಪಾಲಿಕೆ 45ನೇ ವಾರ್ಡ್ ವ್ಯಾಪ್ತಿಯ ಯರಗುಂಟೆ, ಕರೂರು, ಎಸ್‌ಜೆಎಂ ನಗರದಲ್ಲಿ ಮತಯಾಚಿಸಿದರು.

- - - -2ಕೆಡಿವಿಜಿ4, 5, 6:

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮಂಗಳವಾರ ಮತಯಾಚಿಸಿದರು.

-2ಕೆಡಿವಿಜಿ7:

ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪೂಜೆ ಸಲ್ಲಿಸಿ, ಮಂಗಳವಾರ ಪ್ರಚಾರ ಕೈಗೊಂಡರು.

Share this article