ಮೇ 19ರಂದು ಶ್ರೀಅವಿಘ್ನ ಸಾಯಿಬಾಬಾ, ಮಹಾಗಣಪತಿ, ನವಗ್ರಹ, ನಾಗದೇವತೆ ಮತ್ತು ಶಿಖರ ಕಲಶ ಪ್ರತಿಷ್ಠಾಪನೆ

KannadaprabhaNewsNetwork |  
Published : May 09, 2024, 12:45 AM IST
35 | Kannada Prabha

ಸಾರಾಂಶ

ಅರುಣ್ ಯೋಗಿರಾಜ್‌ ಕೈಯಲ್ಲಿ ಮೂಡಿಬಂದಿರುವ ಶ್ರೀ ಸಾಯಿಬಾಬ ಕೇದಾರನಾಥದ ಆದಿ ಶಂಕರಾಚಾರ್ಯ, ದಿಲ್ಲಿಯ ಇಂಡಿಯಾ ಗೇಟ್ ನ ಸುಭಾಷ್ಚಂದ್ರ ಬೋಸ್ಹಾಗೂ ವಿಶ್ವಪ್ರಸಿದ್ಧ ಆಯೋಧ್ಯೆಯ ರಾಮಲಲ್ಲಾ ಮೂರ್ತಿಯನ್ನು ಕೆತ್ತನೆ ಮಾಡಿರುವ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರ ಕೈಯಲ್ಲಿ ಮೂಡಿ ಬಂದಿರುವ ಶ್ರೀ ಸಾಯಿಬಾಬ ಈ ದೇವಸ್ಥಾನದ ವೈಶಿಷ್ಟ್ಯ ಎಂದು ಸಾಗರ್ ಅರಸ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ನಂಜನಗೂಡು ತಾಲೂಕಿನ ಬಿಳಿಗೆರೆ ಹೋಬಳಿಯ ಸರಗೂರಿನ ಶ್ರೀ ಅವಿಘ್ನ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಘ್ನ ಸಾಯಿಬಾಬಾ ಮತ್ತು ಮಹಾಗಣಪತಿ, ನವಗ್ರಹ, ನಾಗದೇವತೆ ಮತ್ತು ಸಿಖರ ಕಲಶ ಪ್ರತಿಷ್ಠಾಪನೆಯು ಮೇ 19ರಂದು ನೆರವೇರಲಿದೆ ಎಂದು ಆಡಳಿತ ಮಂಡಳಿಯ ಸಾಗರ್ ಅರಸ್ ತಿಳಿಸಿದ್ದಾರೆ.

ಮೇ 18ರ ಸಂಜೆ 5ಕ್ಕೆ ಗೋ ದೇವತೆ, ಗಂಗಾ ಪೂಜೆಯೊಂದಿಗೆ ಅಗ್ರೋದಕ ಸಹಿತ ಯಾಗ ಶಾಲೆ ಪ್ರವೇಶ, ನಂತರ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಪಂಚಗವ್ಯ ಸಾಧನ, ವಾಸ್ತು ಪೂಜೆ ಮತ್ತು ರಾಕ್ಷೋಘ್ನ ಹೋಮ ಪರ್ಯಗ್ನಿಕರಣ ಶಿಖರ ಕಳಸ ಹಾಗೂ ನೂತನ ಶಿಲಾ ಮೂರ್ತಿಗೆ ಜಲಾಧಿವಾಸ ಧಾನ್ಯದಿವಾಸ ಮೂರ್ತಿ ಸಂಸ್ಕಾರ ನ್ಯಾಸ ವಿಧಿ ಶಯನಾದಿ ವಾಸ ಇತ್ಯಾದಿ ಕಾರ್ಯಗಳು ನಡೆಯುತ್ತದೆ.

ಏಕಾದಶಿ ತಿಥಿಯ ಚಿತ್ತ ನಕ್ಷತ್ರ ಮೇ 19ರ ಭಾನುವಾರ ಬೆಳಗ್ಗೆ 4.50 ರಿಂದ 5.50ರವರೆಗೆ ಸಲ್ಲುವ ಬ್ರಾಹ್ಮಿ ಮುಹೂರ್ತ ಶುಭ ಲಗ್ನದಲ್ಲಿ ಅಷ್ಟ ಬಂಧ ಪ್ರತಿಷ್ಠಾಪನೆ ಜರುಗಲಿದೆ. ಬೆಳಗ್ಗೆ 11ಕ್ಕೆ ಪೂರ್ಣಾಹುತಿ, ನೇತ್ರೋನ್ ಮಿಲನ ಕದಳಿ ಛೇದನ ಕಾರ್ಯ ಬಲಿ ಪೂಜೆ ನಡೆಯುತ್ತದೆ. ನಂತರ ಮಹಾ ಗಣಪತಿಗೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಅಷ್ಟ ದ್ರವ್ಯ ಅಭಿಷೇಕ, ವಿಶೇಷ ಅಲಂಕಾರ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.

ಮಧ್ಯಾಹ್ನ 12ಕ್ಕೆ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನೂತನ ಶ್ರೀ ಸಾಯಿಬಾಬ ಮತ್ತು ಮಹಾಗಣಪತಿ ದೇವಾಲಯ ಲೋಕಾರ್ಪಣೆಯಾಗಲಿದೆ. ಈ ಎಲ್ಲ ಧಾರ್ಮಿ ಪೂಜಾ ಕಾರ್ಯವನ್ನು ಶ್ರೀ ವೇ. ನಾಗೇಶ್ ಶರ್ಮ ಮತ್ತು ಶಿಷ್ಯ ವೃಂದ ನಡೆಸಿಕೊಡುವರು ಎಂದು ಅವರು ತಿಳಿಸಿದ್ದಾರೆ. ಮಧ್ಯಾಹ್ನ 12.30ಕ್ಕೆ ಅನ್ನ ಸಂತರ್ಪಣೆ ನೆರವೇರಲಿದೆ.

ಅರುಣ್ ಯೋಗಿರಾಜ್‌ ಕೈಯಲ್ಲಿ ಮೂಡಿಬಂದಿರುವ ಶ್ರೀ ಸಾಯಿಬಾಬ ಕೇದಾರನಾಥದ ಆದಿ ಶಂಕರಾಚಾರ್ಯ, ದಿಲ್ಲಿಯ ಇಂಡಿಯಾ ಗೇಟ್ ನ ಸುಭಾಷ್ಚಂದ್ರ ಬೋಸ್ಹಾಗೂ ವಿಶ್ವಪ್ರಸಿದ್ಧ ಆಯೋಧ್ಯೆಯ ರಾಮಲಲ್ಲಾ ಮೂರ್ತಿಯನ್ನು ಕೆತ್ತನೆ ಮಾಡಿರುವ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರ ಕೈಯಲ್ಲಿ ಮೂಡಿ ಬಂದಿರುವ ಶ್ರೀ ಸಾಯಿಬಾಬ ಈ ದೇವಸ್ಥಾನದ ವೈಶಿಷ್ಟ್ಯ ಎಂದು ಸಾಗರ್ ಅರಸ್ ತಿಳಿಸಿದ್ದಾರೆ.

ಶಿರಡಿಯ ದ್ವಾರಕಾಮಾಯಿಯು ಸಾಯಿಬಾಬರವರ ವಾಸಸ್ಥಳವಾಗಿತ್ತು. ಹಲವು ಚಮತ್ಕಾರಗಳಿಗೆ ಸಾಕ್ಷಿಯಾಗಿರುವ ದ್ವಾರಕಾಮಾಯಿಯಲ್ಲಿನ ಶ್ರೀ ಸಾಯಿಬಾಬ ಅವರ ದರ್ಬಾರ್ ಒಂದು ಪವಿತ್ರ ಸ್ಥಳವೇ ಹೌದು. ಬಾಬಾ ಅವರು ನಡೆಸುತ್ತಿದ್ದ ದರ್ಬಾರ್ ಶೈಲಿಯಲ್ಲಿನ ಪರಿಕಲ್ಪನೆಯೊಂದಿಗೆ ಮೂಡಿಬಂದಿರುವ ನಮ್ಮ ಶ್ರೀ ಅವಿಘ್ನ ಸಾಯಿಕ್ಷೇತ್ರದ ಶ್ರೀ ಸಾಯಿಬಾಬ ಅಮೃತಶಿಲೆಯಲ್ಲಿ ಕೆತ್ತಲ್ಪಟ್ಟಿದೆ ಎಂದು ಅವರು ಹೇಳಿದ್ದಾರೆ.

ಶ್ರೀ ಅವಿಘ್ನ ಸಾಯಿ ಕ್ಷೇತ್ರದಲ್ಲಿ ಶ್ರೀ ಸಾಯಿಬಾಬರವರ ದರ್ಬಾರ್ ನಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಬಾಬ ಹಾಗೂ ಗಣಪತಿಯ ಅನುಗ್ರಹಕ್ಕೆ ಪಾತ್ರವಾಗಬೇಕೆಂದು ಅರಸ್ ಕೋರಿದ್ದಾರೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ