ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಮನ್ಮುಲ್ ಉಪ ವ್ಯವಸ್ಥಾಪಕರ ಕಚೇರಿಯಲ್ಲಿ ಒಕ್ಕೂಟದ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ 15.36 ಲಕ್ಷ ರು. ವೆಚ್ಚದ ಚೆಕ್‌ಗಳನ್ನು ವಿತರಿಸಿ ಮಾತನಾಡಿ, ಪಟ್ಟಣದಲ್ಲಿ ಮನ್ಮುಲ್ ಉಪ ವ್ಯವಸ್ಥಾಪಕರ ಸ್ವಂತ ಕಚೇರಿ ಇಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಇದೀಗ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಒಕ್ಕೂಟದಿಂದ 4.65 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಟ್ಟಡ ಕಾಮಗಾರಿಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದರು.
ನಾನು ಮನ್ಮುಲ್ ನಿರ್ದೇಶಕನಾದ ಬಳಿಕ ಅಂದಾಜಿ 3 ಕೋಟಿಗೂ ಅಧಿಕ ಮೊತ್ತದ ಪರಿಹಾರ ಹಣವನ್ನು ಫಲಾನುಭವಿಗಳಿಗೆ ವಿತರಿಸಿದ್ದೇನೆ. ನಮ್ಮ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದೆಂದು ತ್ವರಿತವಾಗಿ ಪರಿಹಾರದ ವಿಮೆ ಹಣ ಬಿಡುಗಡೆ ಮಾಡಿಸಿದ್ದೇನೆ ಎಂದರು.ರೈತರು ಪ್ರತಿರಾಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು. ವಿಮೆ ಪರಿಹಾರದ ಹಣದ ಮೊತ್ತವನ್ನು 80 ಸಾವಿರಕ್ಕೆ ಏರಿಸಲು ಕ್ರಮವಹಿಸಲಾಗಿದೆ ಎಂದರು.
ಇದೇ ವೇಳೆ ರಾಸು ವಿಮೆ ಯೋಜನೆಯಡಿ 12.80 ಲಕ್ಷ ರು , ರೈತ ಕಲ್ಯಾಣ ಟ್ರಸ್ಟ್‌ನಿಂದ 1.15 ಲಕ್ಷ ರು, ಹಾಲು ಕರೆಯುವ ಯಂತ್ರದ ಯೋಜನೆಯಡಿ 1.40 ಲಕ್ಷ ಮೌಲ್ಯದ ಚೆಕ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ಈ ವೇಳೆ ಮಾರ್ಗ ವಿಸ್ತರ್ಣಾಧಿಕಾರಿಗಳಾದ ಉಷಾ, ಪ್ರಜ್ವಲ್, ಟೆಕ್ನೀಶಿಯನ್ ಆನಂದ್, ಕಾರ್ಯದರ್ಶಿ ಬೋರೇಗೌಡ ಸೇರಿದಂತೆ ಹಲವರು ಇದ್ದರು.