ಶಲವಡಿಗೆ ಕಲುಷಿತ ನೀರು: ತಹಸೀಲ್ದಾರ್‌ ಪರಿಶೀಲನೆ

KannadaprabhaNewsNetwork |  
Published : Apr 09, 2026, 02:30 AM IST
ಕುಡಿಯುವ ನೀರಿನ ಘಟಕಗಳನ್ನು ತಹಸೀಲ್ದಾರ್‌ ಮಂಜುನಾಥ ದಾಸಪ್ಪನವರ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಎರಡು ದಿನಕೊಮ್ಮೆ ನೀರು ಬಿಡುತ್ತಾರೆ. ಒಂದೊಂದು ಸಲ ನೀರು ಕೆಂಪು ಬಣ್ಣ ದಿಂದ ಕೂಡಿರುತ್ತದೆ. ಶುದ್ಧ ನೀರು ಕೊಡಲು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಅಣ್ಣಿಗೇರಿ:

ತಾಲೂಕಿನ ಶಲವಡಿ ಗ್ರಾಮಕ್ಕೆ ಪೂರೈಕೆಯಾಗುವ ಕುಡಿಯುವ ನೀರು ಕಲುಷಿತಗೊಂಡಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತಹಸೀಲ್ದಾರ್‌ ಮಂಜುನಾಥ ದಾಸಪ್ಪನವರ ನೀರಿನ ಶುದ್ಧೀಕರಣ ಘಟಕಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶುದ್ಧಗೊಳ್ಳದ ಕಲುಷಿತ ನೀರು ಪೂರೈಕೆಯಾಗುತ್ತಿದೆ. ಇದರಿಂದಾಗಿ ನಾಗರಿಕರಿಗೆ ತಲೆನೋವು, ಕೈ-ಕಾಲು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದೆ ಎಂಬ ದೂರು ಬಂದಿತ್ತು.

ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಘಟಕಗಳನ್ನು ತಹಸೀಲ್ದಾರ್‌ ಪರಿಶೀಲಿಸಿದರು. ಈ ವೇಳೆ ಗ್ರಾಮದ ಲಿಂಗರಾಜ ಸವದತ್ತಿ ಮಾತನಾಡಿ, ಎರಡು ದಿನಕೊಮ್ಮೆ ನೀರು ಬಿಡುತ್ತಾರೆ. ಒಂದೊಂದು ಸಲ ನೀರು ಕೆಂಪು ಬಣ್ಣ ದಿಂದ ಕೂಡಿರುತ್ತದೆ. ಶುದ್ಧ ನೀರು ಕೊಡಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಸ್ಪಂದಿಸಿದ ತಹಸೀಲ್ದಾರ್‌, ಕುಡಿಯುವ ನೀರನ್ನು ಪರೀಕ್ಷಿಸಲಾಗಿದೆ. ಅಲ್ಲಿಂದ ಕುಡಿಯಲು ಯೋಗ್ಯ ಎಂಬ ವರದಿ ಕೂಡ ಬಂದಿದೆ. ಆದಕಾರಣ ಯಾವುದೇ ರೀತಿ ಆತಂಕ ಬೇಡ ಎಂದು ಗ್ರಾಮಸ್ಥರಿಗೆ ತಿಳಿಸಿದರು. ಈ ವೇಳೆ ಕಂದಾಯ ನಿರೀಕ್ಷಕ ರಿಷಿಕುಮಾರ ಸಾರಂಗಿ, ಗ್ರಾಪಂ ಪಿಡಿಒ ಮಮತಾಜ ಛಬ್ಬಿ, ತಲಾಟಿ ಎನ್ ನದಾಫ್ ಸೇರಿದಂತೆ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನವದಂಪತಿಗಳು ಅರಿತು ಸುಖ ಸಂಸಾರ ನಡೆಸಿ
ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ನೀಡಬಾರದು: ಹೆಬ್ಬಾರ