ಸರ್ಕಾರ ಆಟೋ ಚಾಲಕರಿಗೆ ನೆರವಾಗಲಿ: ಗೋವಿಂದಗೌಡ್ರ

KannadaprabhaNewsNetwork |  
Published : Apr 09, 2026, 02:30 AM IST
ಕನ್ನಡಪ್ರಭದಲ್ಲಿ ಬುಧವಾರ ಪ್ರಕಟವಾಗಿದ್ದ ವರದಿ. | Kannada Prabha

ಸಾರಾಂಶ

ಆಟೋ ಚಾಲಕರಿಗೆ ಪ್ರತಿ ತಿಂಗಳ ಬ್ಯಾಂಕಿನ ಸಾಲದ ಕಂತುಗಳು ಅದರ ರಿಪೇರಿಯ ಖರ್ಚುಗಳನ್ನು ಭರಿಸಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದಂತೆ ಯುದ್ಧ ಮುಗಿಯುವವರೆಗೆ ಪ್ರತಿ ತಿಂಗಳಿಗೆ ಆಟೋ ಚಾಲಕರಿಗೆ ₹15 ಸಾವಿರ ಗೌರವಧನ ನೀಡಬೇಕು.

ಗದಗ: ಕೊಲ್ಲಿ ಯುದ್ಧದ ಪರಿಣಾಮ ಆಟೋ ಚಾಲಕರ ಪರಿಸ್ಥಿತಿ ಕಷ್ಟಕರವಾಗಿದೆ. ಆಟೋ ಚಾಲಕರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕೆಂದು ಯಂಗ್ ಇಂಡಿಯಾ ಪರಿವಾರದ ಸಂಸ್ಥಾಪಕ ಅಧ್ಯಕ್ಷ ವೆಂಕನಗೌಡ ಗೋವಿಂದಗೌಡ್ರ ಮನವಿ ಮಾಡಿದರು.ಬುಧವಾರ ಯುದ್ಧದಿಂದ ಸಂಕಷ್ಟಕ್ಕೆ ಸಿಲುಕಿದ ನಗರದ ಪ್ರಥಮ ಮಹಿಳಾ ಆಟೋ ಚಾಲಕಿ ರೇಖಾ ಹುಲ್ಲೂರ ಅವರ ಮನೆಗೆ ಭೇಟಿ ಕೊಟ್ಟು ಅವರಿಗೆ ಎರಡು ತಿಂಗಳ ದಿನಸಿ ಕಿಟ್ ವಿತರಿಸಿ ಮಾತನಾಡಿದರು. ಆಟೋ ಚಾಲಕರಿಗೆ ಪ್ರತಿ ತಿಂಗಳ ಬ್ಯಾಂಕಿನ ಸಾಲದ ಕಂತುಗಳು ಅದರ ರಿಪೇರಿಯ ಖರ್ಚುಗಳನ್ನು ಭರಿಸಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಹೇಳಿದಂತೆ ಯುದ್ಧ ಮುಗಿಯುವವರೆಗೆ ಪ್ರತಿ ತಿಂಗಳಿಗೆ ಆಟೋ ಚಾಲಕರಿಗೆ ₹15 ಸಾವಿರ ಗೌರವಧನ ನೀಡಬೇಕು ಅಥವಾ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹೇಳಿದಂತೆ ಆಟೋ ಚಾಲಕರು ಯುದ್ಧ ಮುಗಿಯುವವರೆಗೆ ಪೆಟ್ರೋಲ್ ಬಳಕೆ ಮಾಡಬೇಕು. ಆಟೋ ಚಾಲಕರು ಪೆಟ್ರೋಲ್ ಬಳಕೆ ಮಾಡಬೇಕೆಂದರೆ ಅದಕ್ಕೆ ಮೈಲೇಜ್ ಇರುವುದಿಲ್ಲ. ಆದ ಕಾರಣ ರಾಜ್ಯ ಸರ್ಕಾರ ಆಟೋ ಚಾಲಕರಿಗೆ ಪ್ರತಿದಿನದಂತೆ 3 ಲೀಟರ್ ಪೆಟ್ರೋಲಿಗೆ ಸಬ್ಸಿಡಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಈ ವೇಳೆ ರವಿ ಕರಬಸಣ್ಣವರ, ಅಮರೇಶ್ ಅಂಗಡಿ, ಯಲ್ಲಪ್ಪ ಹೊಂಬಾಳ, ಕುಮಾರ್ ಜಗಳೂರು, ಮಂಜುನಾಥ್ ಮಟ್ಟಿ, ಚಂದ್ರುಗೌಡ ಸಂಕನಗೌಡ್ರ, ಈಶ್ವರ್ ಗುಡಿಮನಿ, ಶ್ರೀನಿವಾಸ್ ಖೋಡೆ, ಪ್ರವೀಣ ಛಲವಾದಿ ಸೇರಿದಂತೆ ಯಂಗ್ ಇಂಡಿಯಾ ಆಟೋ ಚಾಲಕ ಹಾಗೂ ಮಾಲೀಕರ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ

ಗದಗ: 2014ರ ಲೋಕಸಭಾ ಚುನಾವಣೆ ಗೆಲುವಿಗೆ ಅಚ್ಚೆ ದಿನ್ ಎಂದು ಜನರಿಗೆ ನಾಮ ಹಾಕಿ ಅಧಿಕಾರಕ್ಕೆ ಬಂದ ಕೇಂದ್ರ ಬಿಜೆಪಿ ಸರ್ಕಾರ ಸಾಲು ಸಾಲು ಬೆಲೆ ಏರಿಕೆಯಿಂದ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ಆರೋಪಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, 2026ರ ಏ.1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರವನ್ನು ಶೇ. 5ರಷ್ಟು ಹೆಚ್ಚಿಸಿದ ಕೇಂದ್ರ ಬಿಜೆಪಿ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕಿದೆ. ಪ್ರತಿ ತಿಂಗಳು ಎಲ್‌ಪಿಜಿ ಬೆಲೆಗಳನ್ನು ಹೆಚ್ಚಳ ಮಾಡುತ್ತಿರುವ ಕೇಂದ್ರ ಬಿಜೆಪಿ ಸರ್ಕಾರ 2026ರ ಮಾರ್ಚ್‌ 7ರಂದು ಗೃಹಬಳಕೆ ಎಲ್‌ಪಿಜಿ ಬೆಲೆಯನ್ನು ₹60 ಹಾಗೂ ವಾಣಿಜ್ಯ ಬಳಕೆ ಎಲ್‌ಪಿಜಿ ಬೆಲೆಯನ್ನು ₹115 ಹೆಚ್ಚಿಸಿ ಜನರ ಬದುಕನ್ನು ನರಕ ಮಾಡಿದೆ.

ಈಗ ಮತ್ತೆ 2026ರ ಏ. 1ರಂದು ವಾಣಿಜ್ಯ ಬಳಕೆ ಎಲ್‌ಪಿಜಿ ಯನ್ನು ₹195.50 ಹೆಚ್ಚಿಸಿ ₹2,200 ತಲುಪಿದ್ದು, 5 ಕೆಜಿ ಗೃಹ ಬಳಕೆಯ ಎಲ್‌ಪಿಜಿಯನ್ನು ₹51 ಹೆಚ್ಚಿಸಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ಕೇಂದ್ರ ಬಿಜೆಪಿ ಸರ್ಕಾರದ ವೈಫಲ್ಯದಿಂದ ಕೇವಲ ಎಲ್‌ಪಿಜಿ ದರ ಮಾತ್ರ ಹೆಚ್ಚಳವಾಗಿಲ್ಲ. ಆಟೋ ಎಲ್‌ಪಿಜಿ ದರವು ₹11.78 ಹೆಚ್ಚಳವಾಗಿದ್ದು, ₹89.52 ತಲುಪಿ ದಿನದ ದುಡಿಮೆಯನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಆಟೋ ಚಾಲಕರ ಬದುಕು ಅತಂತ್ರವಾಗಿದೆ ಎಂದಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನವದಂಪತಿಗಳು ಅರಿತು ಸುಖ ಸಂಸಾರ ನಡೆಸಿ
ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ನೀಡಬಾರದು: ಹೆಬ್ಬಾರ