ನಾಳೆ ಹೋಟೆಲ್ ಒಡೆಯರ ಸಂಘದ ನೂತನ ಕಟ್ಟಡ ಉದ್ಘಾಟನೆ

KannadaprabhaNewsNetwork |  
Published : Apr 09, 2026, 02:30 AM IST
ಸುದ್ದಿಗೋಷ್ಠಿಯಲ್ಲಿ ಎಚ್.ವಿಶ್ವನಾಥ ಶೆಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಾಕ್ಷ ಡಿ.ಆರ್. ಪಾಟೀಲ, ರಾಜ್ಯ ಹೋಟೆಲ್‌ಗಳ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಆಗಮಿಸುವರು.

ಗದಗ: ನಗರದ ಹೋಟೆಲ್ ಒಡೆಯರ ಸಂಘದ ನೂತನ ಕಟ್ಟಡದ ಉದ್ಘಾಟನೆ ಏ. 10ರಂದು ಬೆಳಗ್ಗೆ 10.30ಕ್ಕೆ ನೂತನ ಬಸ್ ನಿಲ್ದಾಣದ ಹತ್ತಿರವಿರುವ ಸ್ವರಾಜ್ ಟ್ರ್ಯಾಕ್ಟರ್ ಶೋರೂಮ್ ಹಿಂದುಗಡೆ ಜರುಗಲಿದೆ ಎಂದು ಹೋಟೆಲ್ ಒಡೆಯರ ಸಂಘದ ಜಿಲ್ಲಾಧ್ಯಕ್ಷ ಎಚ್. ವಿಶ್ವನಾಥ ಶೆಟ್ಟಿ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ, ರಾಜ್ಯ ವಿಕೇಂದ್ರಿಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಾಕ್ಷ ಡಿ.ಆರ್. ಪಾಟೀಲ, ರಾಜ್ಯ ಹೋಟೆಲ್‌ಗಳ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಆಗಮಿಸುವರು.

ಅಧ್ಯಕ್ಷತೆಯನ್ನು ಹೋಟೆಲ್ ಒಡೆಯರ ಸಂಘದ ಜಿಲ್ಲಾಧ್ಯಕ್ಷ ಎಚ್. ವಿಶ್ವನಾಥ ಶೆಟ್ಟಿ ವಹಿಸುವರು. ಆಹ್ವಾನಿತರಾಗಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ನಗರಸಭೆ ಸದಸ್ಯೆ ಪದ್ಮಾ ಕಟಗಿ, ಹೋಟೆಲ್ ಒಡೆಯರ ಸಂಘದ ಗೌರವಾಧ್ಯಕ್ಷ ಕೆ. ಸುಧಾಕರರಾವ ಹಾಗೂ ಬಿ. ರಾಜೀವ ಶೆಟ್ಟಿ ಉಪಸ್ಥಿತರಿರುವರು ಎಂದರು. ಈಗ 45 ವರ್ಷಗಳ ಹಿಂದೆ ಅಂದಿನ ಹೋಟೆಲ್ ಉದ್ದಿಮೆದಾರರಾದ ಕೆ. ನಾರಾಯಣರಾವ್, ಶಂಕರರಾವ್, ಸುಧಾಕರ ರಾವ್, ಭಾಗವತ, ಮೈಯ್ಯರ, ಶಿವಪುರ, ಪಿ.ಡಿ. ಕಾಮತ್, ಎನ್.ಎನ್. ಶಾನಭಾಗ, ಗದಗ ರೆಸ್ಟೋರೆಂಟ್ ಜಯದೇವ ಬಟ್ಟ, ಅಜಂತಾ ಹೋಟೆಲ್ ಶೇಖರ ಶೆಟ್ಟಿ, ಕೃಷ್ಣ ವಿಲಾಸ ಉಚ್ಚಿಲ್, ಸುಖನಿವಾಸ ಖಾರಂತ, ಅಯೋಧ್ಯೆ ಹೋಟೆಲ್ ಬಿ. ರಾಜೂಶೆಟ್ಟಿ ಮೊದಲಾದವರಿಂದ ಪ್ರಾರಂಭಗೊಂಡ ಗದಗ- ಬೆಟಗೇರಿ ಹೋಟೆಲ್ ಸಂಘ ಅಂದಿನಿಂದ ಇಂದಿನವರೆಗೆ ಕ್ರಿಯಾಶೀಲವಾಗಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಗದಗ ಜನತೆಗೆ ಕೊಡುವಲ್ಲಿ ತೊಡಗಿಸಿಕೊಂಡಿದೆ ಎಂದರು.

ಈ ವೇಳೆ ಸುಧಾಕರ ಶೆಟ್ಟಿ, ಜಯಪಾಲ ಶೆಟ್ಟಿ, ಪಿ.ವಿ. ಹೆಗಡೆ, ಕೆ.ಎ. ಸುಧಾಕರರಾವ್, ಬಿ. ರಾಜೀವ ಶೆಟ್ಟಿ, ಯಲ್ಲಪ್ಪ ಬಾವಿಕಟ್ಟಿ, ಉಮೇಶ ಶಾನಬಾಗ ಸೇರಿದಂತೆ ಮುಂತಾದವರು ಇದ್ದರು.

11ರಂದು ರೋಣದಲ್ಲಿ ಚುಟುಕು ಸಾಹಿತ್ಯ ಸಂಭ್ರಮ

ರೋಣ: ನಮ್ಮ ಜನಪದರ ಶ್ರಮದ ಹಿನ್ನೆಲೆ ಹುಟ್ಟಿಕೊಂಡ ಚುಟುಕು ಸಾಹಿತ್ಯವನ್ನು ಉಳಿಸಿ ಬೆಳೆಸಬೇಕು. ಆ ಹಿನ್ನೆಲೆ ಶಾಸಕ ಜಿ.ಎಸ್. ಪಾಟೀಲರ ಜನ್ಮದಿನದ ಪ್ರಯುಕ್ತ ತಾಲೂಕು ಮಟ್ಟದ ಚುಟುಕು ಸಾಹಿತ್ಯ ಸಂಭ್ರಮವನ್ನು ಏ. 11ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಚುಟುಕ ಸಾಹಿತ್ಯ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೀರಯ್ಯ ಸೋಮನಕಟ್ಟಿಮಠ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುಟುಕು ಸಾಹಿತ್ಯ ಸಂಭ್ರಮದಲ್ಲಿ ಕವನ ಸಂಕಲನ ಲೋಕಾರ್ಪಣೆ, ಕವಿಗೋಷ್ಠಿ, ಗಾನಸುಧೆ, ಸಂಸ್ಕಾರದ ಉಪನ್ಯಾಸ, ಗೌರವ ಸನ್ಮಾನ, ಸಾಹಿತ್ಯ ಜಾನಪದ ಕಲೆಯ ಅಳಿವು, ಉಳಿವು ಕುರಿತು ಹಿರಿಯ ಸಾಹಿತಿಗಳಿಂದ ಕಾರ್ಯಕ್ರಮಗಳು ನಡೆಯಲಿವೆ.‌ ಸಾಹಿತ್ಯ ಆಸಕ್ತರು, ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಸಾಹಿತ್ಯ ಸಂಭ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದರು.

ರೋಣ ತಾಲೂಕು ಚುಟಕು ಸಾಹಿತ್ಯ ಪರಿಷತ್ ಗೌರವ ಅಧ್ಯಕ್ಷ ಅನ್ನಪೂರ್ಣ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾಧ್ಯಕ್ಷ ಶೋಭಾ ಮೇಟಿ, ವೀರಯ್ಯ ಸೋಮನಕಟ್ಟಿಮಠ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ಚಿಂತಕ ಪ್ರಕಾಶ ಖಾಡೆ, ಎಸ್.ಜಿ. ದಾನಪ್ಪಗೌಡ್ರ, ಡಾ. ಐ.ಬಿ. ಕೊಟ್ಟೂರಶೆಟ್ಟಿ, ವೈ.ಡಿ. ಗಾಣಿಗೇರ, ಮಂಗಳಾ ಪಾಟೀಲ ಮುಂತಾದವರು ಉಪಸ್ಥಿತರಿರುವರು. ಸಾಹಿತಿಗಳಾದ ವಿ.ಕೆ. ಪಾಟೀಲ್, ಜಯಶ್ರೀ ಭಂಡಾರಿ, ದಾವಲ ಮಲಿಕ ಇಂಗಳಗಿ ಅವರಿಂದ ವಿಶೇಷ ಉಪನ್ಯಾಸ ಜರುಗಲಿದೆ.

ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೋತಬಾಳ ಅರುಣೋದಯ ಜಾನಪದ ಕಲಾತಂಡ, ರಾಜಶೇಖರ ಹಿರೇಮಠ ಬೆಳಕು ಮತ್ತು ಜೀವನಜ್ಯೋತಿ ಕಲಾತಂಡಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ ಎಂದರು.ಸುದ್ದಿಗೋಷ್ಠಿಯಲ್ಲಿ ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನವದಂಪತಿಗಳು ಅರಿತು ಸುಖ ಸಂಸಾರ ನಡೆಸಿ
ಯಾವುದೇ ಕಾರಣಕ್ಕೂ ಜನರಿಗೆ ತೊಂದರೆ ನೀಡಬಾರದು: ಹೆಬ್ಬಾರ